೧೬y - ಕರ್ಣುಟಕ ಕಾಶ್ಯಕಲಾನಿಧಿ, - ಇಪ್ಪತ್ತನೆಯ ಗುಚ್ಛಂ. ಅನಂತರದಲ್ಲಿ ವತ್ಸ ರಾಜನ ಆಜ್ಞೆಯಿಂದ ಧನಗುಪ್ತನು ಇಂದ್ರನ ಭಯದಿಂದ ಅಡಗಿರ್ದು ಭೂದೇವೇಂದ್ರನಾದ ವತ್ಸ ರಾಜನ ದರ್ಶನಕೋಸುಗವಾಗಿ ಎದ್ದು ಬಂದಿರುವ ಅನೇಕವಾದ ಸತ್ವ ತಗಳೋ ಎಂಬಂತೆ ಒಪ್ಪುತಿರುವ ಹಡಗುಗಳಂ ಜತ ಗೊಳಿಸಿ, ಸಮಸ್ತ ಸೈನ್ಯಜನಗಳನ್ನೂ ಹಡಗುಗಳ ಮೇಲೆ ಕುಳ್ಳಿರಿಸಲು ; ವತ್ಸರಾ ಜನು ಸುವರ್ಣಧ್ವಜಸರದಿಂ ಸುಂದರವಾಗಿರುವ ಒಂದು ಹಡಗನ್ನು ವಾಸವದತ್ತಾ ದೇವಿಯಿಂದಲೂ ವಿದೂಷಕ ಮೊದಲಾದ ಆಸ್ಕರಾದ ಸೇವಾಜನ ಸಬೇಜನರಿಂ ದಲೂ ಯುಕ್ತನಾಗಿ ಹತ್ತಿ, ಪೋಗಿ, ಸಿಂಹಳದೇಶದ ಎಲ್ಲೆಗಟ್ಟಿನಲ್ಲಿ ಕಟಕರಚನೆಯಂ ಗೆಯ್ದಿ ರಲು ; ಆ ವಾರ್ತೆಯನ್ನು ಅಂತ್ಯಪಾಲದುರ್ಗದ ಸೇನಾಪತಿಯು ಪೋಗಿ ವಿಕ್ರಮ ಬಾಹುರಾಯಸಿಗೆ ವಿಜ್ಞಾಪಿಸಲು ; ಆ ರಾಯನು ಮಂಗಳಕರದ್ರವ್ಯಗಳಿಂದ ಯುಕ್ತ ವಾದ ಸುವಾಸಿನಿಯರಿ೦ದಲೂ ಪುರಜನ ಪರಿಜನರಿಂದಲೂ ಸಮಸ್ತ ಸೇನಾಬ್ಬಂದ ದಿಂದಲೂ ಯುಕ್ತನಾಗಿ ಎದುರು ಬಂದು, ಅನಂತವಾಗಿ ವನ್ನಾಭರಣಗಳನ್ನಿತ್ತು, ವಾಸವದತ್ತಾ ದೇವಿಯಂ ನನ್ನಿ ಸಿ, ವತ್ಸರಾಜನಂ ಗಜರಥಾರೋಹಣವಂ ಗೆಯ್ದಿ, ರತ್ನ ಪುರಿಗೆ ಕರೆದುಕೊಂಡು ಬಂದು, ಸುಧಮ್ಮಸಭೆಗಿ೦ತಲೂ ಸುಂದರವಾಗಿರುವ ಅರ ಮನೆಯಲ್ಲಿ ಇಳಿಸಲು ; ರತ್ನಾ ವಳಿಯು ಸುಸಂಗತೆ ಮುಂತಾದ ಆಪ್ತ ಸಖಿಯರಿಂದೊಡಗೂಡಿ ಚಂದ್ರ ಶಾಲೆಯನ್ನೇರಿ, ಉಬ್ಬುವ ರೋಮಾಂಚನದಿಂ ಹಬ್ಬುವ ಅನುರಾಗದಿಂ ತಬ್ಬಿಬ್ಬಾಗುವ ಚಿತ್ತ ವೃತ್ತಿಯಿಂ ಕೂಡಿ, ಇವನ ಪಾಣಿಗ್ರಹಣ ಯಾವಾಗ ಕೈಗೂಡುವುದೋ ಎಂದು ಚಿಂತಿಸುತ್ತ, ಆ ವತ್ಸ ರಾಜನ ಬರುವ ವೈಖರಿಯನ್ನೂ ಭೂಮಿಯಗಲಕೆ ಮೇಲೆ ಸಮು ದ್ರವು ಮೇರೆದಪ್ಪಿ ಬರುವುದೋ ಎಂಬ ಸಂದೇಹವನ್ನುಂಟುಮಾಡುವ ಅವನ ಸೇನಾ ಜಾಲವನ್ನೂ ಸಹ ನೋಡುತಿರ್ದು, ಆ ರಾಯನು ಅರಮನೆಗೆ ಬಂದುದನ್ನು ತಿಳಿದು, ಸುಸಂಗತೆಯಂ ಕುರಿತು ಎಲೆ ಕಾಂತೆಯೇ, ಈಗ ಕಂತು ಜಯಂತ ವಸಂತಕ ರಂತೆ ಒಪ್ಪುತ್ತಿರುವ ಪ್ರಾಣಕಾಂತನಾದ ಆ ವತ್ಸ ರಾಜೇಂದ್ರನ ಸಂದರ್ಶನಕ್ಕೆ ಪೋ ಗಬಹುದು, ಆದರೆ ನೋಡಿದವರು ಎನ್ನ ನ್ನು ಲಜ್ಜೆಗೆಟ್ಟವಳೆ೦ದು ದೂರುವರಾದು ದರಿಂದ ಇಂದಿನ ದಿನ ಪೂಜ್ಯಳಾದ ವಾಸವದತ್ತಾ ದೇವಿಯ ದರ್ಶನಕ್ಕೆ ಪೋಗಿ, ಒರು ವೆನು, ಈಗ ಈ ಫಲಪುಷ್ಪಗಳ ತಟ್ಟೆಗಳನ್ನು ಕೊಂಡು ಪೋಗುವುದು” ಎಂದು ಹೇಳಿ ಸವಿಯಾದ ಮಾವಿನ ಹಣ್ಣು, ಕಿತ್ತಲೆಯ ಹಣ್ಣು, ದಾಕೆ, ಖರ್ಜೂರ, ಅರೆಬಿರಿದ ಮಲ್ಲಿ ಗೆಯ ಹಾರ ಪದಕ ಮೊದಲಾದ ನಾಲೆಗಳಿ೦ದಲೂ, ಹದಗಟ್ಟಿ ದು೦ಡುಗೆಯ ಅಡಕೆಗಳಿ೦ಗಲ, ತಾಳೆಯ ಗರಿಗೆ ಸಮಾನವಾದ ಬಿಟಿಯಿಲೆಗಳಿಂದಲೂ ಪತ್ತು
ಪುಟ:ವತ್ಸರಾಜನ ಕಥೆ.djvu/೧೮೭
ಗೋಚರ