ಪುಟ:ವತ್ಸರಾಜನ ಕಥೆ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವಕ್ಸ ರಾಜನಕಥೆ - ೧ರ್೬ ದಿಕ್ಕನ್ನೂ ವ್ಯಾಪಿಸುತ್ತಿರುವ ಪರಿಮಳದಿಂದ ಗಂಭೀರವಾದ ಗಂಧದಿಂದಲೂ ಪೂರಿತ ವಾದ ತಟ್ಟೆ ಗಳನ್ನು , ಸಿಡಿದರೆ ಒಡೆಯುವಂತೊಪ್ಪುವ ಮೈ ಬಿಗುಹಿನಿಂದೊಪ್ಪಿ ಸೋನೆ ದೋರುವ ಪ್ರಾಯವುಳ್ಳ ಊಳಿಗದ ಹೆಣ್ಣುಗಳ ಕೈಗಳಲ್ಲಿ ಕೊಟ್ಟು, ಅವಳಂ ಗೊತ್ತು ಗೆಯ್ದು ಕಳುಹಿಸಲು; ಆ ಸುಸಂಗತೆಯು ಕಾಲುಸರ ಗೆಜ್ಜೆಗಳ ಧ್ವನಿಗಳಿಂದ ಮಣಿಹಜಾರದಲ್ಲಿ ಪ್ರತಿಧ್ಯ ನಿಯಂ ಪುಟ್ಟಿಸುತ್ತ, ತಾರಹಾರಗಳು ಸೇರೊಲೆಗಳ ಮೇಲುಗಡೆಯಲ್ಲಿ ಸ್ವಲ್ಪವಾಗಿ ಹಾರುವಂತೆ ಜಗ್ಗು ಗೂಡಿ ಅಡಿಯಿಡುತ್ತ, ವಾಸವದತ್ತಾ ದೇವಿಯು ಸಮ್ಮುಖವಂ ಸೇರಲು ; ಅಷ್ಟರಲ್ಲೇ ರಾಯನು ವಿದೂಷಕನಂ ಕುರಿತು ಆಯಾ ಮಿತ್ರನೇ, ಈ ಸ್ಥಳಕ್ಕೆ ಬಂದಾಗೂ ಮಂದಗಮನೆಯಾಗಿ ಬಾಲೇಂದುಮಾಲೆಯಾಗಿ ಇರತಕ್ಕಂಥ ರತಾ ವಳಿಯ ಯೋಗಕ್ಷೇಮಗಳೇ ತೋರಲಿಲ್ಲ. ಸುಸಂಗತೆಯಿರುವ ಸ್ಥಳವನ್ನಾ ದರೂ ಗೊತ್ತುಗೆಯಲ್ಲಿ ಅವಳ ಮುಖದಿಂದ ಎಲ್ಲಾ ವೃತ್ತಾಂತವನ್ನೂ ತಿಳಿಯಬ ಹುದು ?” ಎಂದು ಸಲ್ಲಾಸವಂ ಗೆಯ್ಯುತಲಿರಲವಳು ಹಜಾರವಂ ಕುರಿತು ಬಂದು ದೇವಿಗೆ ನಮಸ್ಕರಿಸಿ, ಎದುರಾಗಿ ಕೈಗಳಂ ಜೋಡಿಸಿಕೊಂಡು ರತ್ತಾ ವಳಿಯ ವೃತ್ತಾಂ ತವನ್ನೇ ಬಿತ್ತರಿಸುತ್ತಿರುವ ಸುಸಂಗತೆಯನ್ನು ಕಂಡು, ಆರೋಗ್ಯವಂ ಪೊಂ ದಿದ ದೀ ರ್ಫರೋಗಿಯಂತೆ, ನಿಜಸತಿಯಂ ಕಂಡ ಪತಿವ್ರತಾಸ್ತಿಯಂತೆ, ಚಂದ್ರನಂ ಕಂಡ ಚಕೋರಸಕ್ಷಿಯಂತೆ, ಅರುಣಕಿರಣವಂ ನೋಡಿದ ಚಕ್ರವಾಕದಂತೆ, ಕಮಲವ ನವಂ ಕಂಡ ರಾಜಹಂಸೆಯ೦ತೆ, ಸಿದ್ದರಸವಂ ಕ೦ಡ ಧಾತುವಾದಿಯ೦ತೆ, ಮಾವಿನ ಚಿಗುರಂ ಕಂಡ ಕೋಗಿಲೆಯಂತೆ, ಬಾಲತೃಣಮಂ ಕಂಡ ಗೋವಿನಂತೆ, ಪ್ರಾಣ ಕಾಂತೆಯಂ ಕಂಡ ಕಾಮಿಯ೦ತೆ, ಆನಂದಸಮುದ್ರದಲ್ಲಿ ಮುಳುಗಿ, ಆಯಾ ವಿದೂಷಕನೇ, ಇಂದುಮುಖಿಯಾಗಿ ಮುಂದುಗಡೆಯಲ್ಲಿ ನಿಂದಿರುವ ಸುಸಂಗತೆಯಂ ಕಂಡೆನು. ಇನ್ನು ಮೇಲೆ ಇವಳ ಮುಖವಂಚನದಿಂದ ಸಕಲ ವೃತ್ತಾಂತವನ್ನು ಕರ ತಲಾಮಲಕದಂತೆ ವ್ಯಕ್ತವಾಗಿ ತಿಳಿಯಬಹುದು, ಆದರೆ ದೇವಿಯು ಇದಿರಾಗಿ ಇರುವಲ್ಲಿ ಹೇರಳವಾಗಿ ರತ್ನಾ ವಳಿಯ ವೃತ್ತಾಂತವನ್ನು ಬೆಸಗೊಳ್ಳು ವದಕೆ ಮನದಲ್ಲಿ ನಾಚಿಕೆಯು ತೋರುತ್ತಲಿದೆ. ನೀನು ಯಾವ ತೆರದಿಂದಲಾದರೂ ಆ ಸ್ಥಳವಂ ತಪ್ಪಿಸಿ ಈ ರತ್ನ ಮಂಟಪದ ಮೊಗಸಾಲೆಗೆ ಆ ಸೊಗಸುಗಾತಿಯನ್ನು ಕರೆದುಕೊಂಡು ಒರು ವನಾಗು ೨” ಎಂದು ಹೇಳುತ್ತಿರುವಷ್ಟರಲ್ಲೇ ವಾಸವದತ್ತಾ ದೇವಿಯು ರತ್ನಾವಳಿ ಮುಂತಾದವರ ಯೋಗಕ್ಷೇಮವಂ ಬೆಸಗೊಂಡು, ಎಲೆ ಸುಸಂಗತೆಯೇ, ಫಲ ಪುಷ್ಪ ಗಂಧಗಳಿಂದ ಸುಂದರವಾದ ತಟ್ಟೆಗಳನ್ನು ಹೊರಹಚಾರದಲ್ಲಿರುವ ಮಹಾ ರಾಜನಂ ಪೊಂದಿಸು ' ಎಂದು ಅಪ್ಪಣೆಯನ್ಶಿಯಲು ; ಕನಸಿನಲ್ಲಿ ಕಂಡ ಕಾರವು ಕೈಗೂಡಿದಂತೆ ಸಂತೋಷವಂ ಪೊಂದಿ, ಊಳಿಗದ ಹೆಣ್ಣುಗಳಿಂದೊಡಗೂಡಿ ಬರುತ್ತ,