ಪುಟ:ವತ್ಸರಾಜನ ಕಥೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ - ಕರ್ಣಾಟಕ ಕಾವೈಕಲಾನಿಧಿ, - ಕೌಶಾಂಬೀನಗರಿಯಿಂದ ಬರುವ ಬಾಹ್ಮಣರನ್ನು ಕೇಳುವಲ್ಲಿ ವತ್ಸ ರಾಜನಿಗೆ ವಾಸ ವದತ್ತಾ ದೇವಿಯೆಂಬ ಪತ್ನಿ ಯು ಇರುವಳೆಂದು ಹೇಳಿದರಲ್ಲದೆ ಮತ್ತೇನೂ ದುರ್ವಾ ರ್ತೆಯನ್ನು ಪೇಳಲಿಲ್ಲ. ಆ ವಾಸವದತ್ತೆಯಲ್ಲಿ ರಾಯನು ಯಾವುದಾದರೂ ಒಂದು ನಿಮಿತ್ತದಿಂದ ಕೋಪವಂ ತಾಳಿ ಇನ್ನೊ೦ದು ವಿವಾಹವಾಗಬೇಕೆಂದು ಇಚ್ಛೆಸಿರು ವನಾಗಿ ತೋರುವುದು, ಇದಲ್ಲದೆ ಇದ್ದಲ್ಲಿ ದೊರೆಗಳಾದವರು ಬಹುವಲ್ಲಭರೆಂಬ ಶಾಸ್ತ್ರವೂ ನಡತೆಯೂ ಸಹ ಇರುವುದರಿಂದ ಪುತ್ರನಾಗಲಿಲ್ಲವೆಂಬ ಕುತೂಹಲದಿಂ ದಲೋ, ಇನ್ನೊಬ್ಬ ಕಾಂತೆಯನ್ನು ಮದುವೆಯಾಗಬೇಕೆಂಬ ಇಚ್ಛೆಯಂ ತಾಳಿದುದ ರಿಂದಲೋ, ವಾಸವದತ್ತಿಯಲ್ಲಿ ದೈವಕಟಾಕ್ಷವು ತಪ್ಪಿತೆಂದು ಮಂತ್ರಿಯು ಬರೆದಿರು ವುದಾಗಿ ತೋರುವುದಲ್ಲದೆ ಇನ್ನೇನೂ ಸಂದೇಹವ ತೋರಲಾರದು. ಇದಲ್ಲದೆ ವಾಸವದತ್ತೆಯೇ ಪರಲೋಕದ ಸಿರಿಯನ್ನೇ ಒಯಸಿದವಳೇ ನಿಶ್ಚಯವಾಗಿದ್ದಲ್ಲಿ ಆ ವಾರ್ತೆಯು ಲೋಕ ಪ್ರಸಿದ್ದವಾಗದೆ ಬಿಡದು, ಮತ್ತು ಕೌಶಾಂಬೀನಗರಿಯಲ್ಲಿ ರುವ ನಿಮ್ಮ ಕಡೆಯ ಗೂಢಚಾರರುಗಳು ಇಂಧ ವೃತ್ತಾಂತವನ್ನು ಬರೆಯದೆ ಇರರು. ಆದುದರಿಂದ ಆ ಮಂತಿ )ಯು ಬರೆದಿರುವ ಪತ್ರಿಕೆಗೆ ನಾನು ಹೇಳಿದುದೇ ತಾತ್ಪರ ವಾಗಿರುವುದು, ದಂಪತಿಗಳಾದ ನೀವಿಬ್ಬರೂ ವಾಸವದತ್ತಾ ದೇವಿಯ ವಿಚಾರದಲ್ಲಿ ವ್ಯಸನವಂ ಪೊಂದತಕ್ಕುದಲ್ಲ, ಮತ್ತು ನಮ್ಮ ರಕ್ಷಾ ವಳಿಯನ್ನು ಆ ವತ್ಸ ರಾಜನಿಗೆ ಕೊಟ್ಟು ವಿವಾಹಂಗೆಯುದೇ ಯುಕ್ತವಾಗಿರುವುದು ಏತಕ್ಕೆಂದರೆ-ಆ ವತ್ಸರಾ ಜನು ರಾಜಾಧಿರಾಜನಾಗಿ ಸಮಸ್ತ ಭೂಮಂಡಲಕ್ಕೆ ಅಧಿಪತಿಯಾಗಿ ಇರುವುದರಿಂ ದಲೂ, ರೂಪದಲ್ಲಿ ಮನ್ಮಥನಿಗೂ ಮನ್ಮಥನಾಗಿರುವುದರಿಂದಲೂ, ಮೊದಲೇ ಅವನ ಸದ್ದು ಣಾತಿಶಯವನ್ನೂ ಸದ್ವ೦ಶವನ್ನೂ ಸಹ ಪರೀಕ್ಷಿಸಿ ವಾಸವದತ್ತಾ ದೇವಿಯನ್ನು ಕೊಟ್ಟು ಬಂಧುತ್ವವನ್ನು ಎಳೆಯಿಸಿ ಇವುದರಿ೦ದಲೂ, ಈ ನಮ್ಮ ರಾ ವಳಿಯು ಯೌವನದಿಂದ ಭೂಷಿತಳಾಗಿ ಸಕಲವಾದ ಸಂಗೀತ ಸಾಹಿತ್ಯ ಮೊದಲಾದ ವಿದ್ಯೆಗ ಳಲ್ಲಿ ಪಾರಂಗತಳಾಗಿದ್ದರೂ ಇವಳಿಗೆ ತಕ್ಕ ವರನಿಲ್ಲವೆಂದು ದಂಪತಿಗಳಾದ ನೀವಿ ಬ್ಬರೂ ಅಹೋರಾತ್ರಿಯಲ್ಲಿ ವ್ಯಸನವನ್ನು ಹೊಂದುತ್ತಲಿರುವುದರಿಂದಲೂ, ಈಗ ರತ್ನಾ ವಳಿಯನ್ನು ವಿವಾಹವಾಗಬೇಕೆಂಬ ಇಚ್ಛೆಯು ಆ ವತ್ಸ ರಾಜನಿಗೆ ಬಲವಾಗಿ ಇರುವ ತಾತ್ಪರ್ಯವನ್ನು ಮಂತ್ರಿಯು ತನ್ನ ಪತ್ರಿಕೆಯಲ್ಲಿ ಸೂಚಿಸಿ ಇರುವುದರಿಂ ದಲೂ, ಮತ್ತು ಸೇನೆಯಿಂದಲೂ ರಾಜ್ಯದಿಂದಲೂ ಪರಾಕ್ರಮದಿಂದಲೂ ಬಲಿಷ್ಠ ನಾದ ಆ ವತ್ಸ ರಾಜನ ಚಿತ್ತಾನುಸಾರವಾಗಿ ನಡೆಯದೆ ಅವನ ಇಚ್ಚೆಗೆ ಭಂಗವ ನುಂಟುಮಾಡಿದಲ್ಲಿ ಮುಂದೆ ರಾಜಕಾರ್ಯಗಳಲ್ಲಿ ಪ್ರಮಾದವು ತೋರುವುದರಿo ದಲೂ, ನಿಮ್ಮ ಪುತ್ರಿಯನ್ನು ಕೊಟ್ಟು ವತ್ಸ ರಾಜನ ಚಿತ್ರವನ್ನು ಸಂತೋಷಪಡಿಸು ವುದು ಸರ್ವೋತ್ತಮಕಾರ್ಯವಹುದೆಂದು ನನ್ನ ಬುದ್ದಿಗೆ ತೋರುತ್ತಿರುವುದು: 17 ಎಂದು ಬಿನ್ನವಿಸಲು; ವಿಕ್ರಮಬಾಹುರಾಯನು ಮಂತ್ರಿಯಂ ಕುರಿತು- ಎಲೈ, ಮಂ