ಪುಟ:ವತ್ಸರಾಜನ ಕಥೆ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v - ಕರ್ಣಾಟಕ ಕಾವ್ಯಕಲಾನಿಧಿ, - ತನ ವಯಸ್ಸಿನಿಂದ ಯುಕ್ತಳಾಗಿ ಆದಿಲಕ್ಷ್ಮಿಯಂತೆ ನೀನಿರುವಲ್ಲಿ ನಮ್ಮ ರತ್ನಾ ವಳಿಯಂ ನಿನ್ನ ಪತಿಗೆ ವಿವಾಹವಂ ಗೆಯ್ಯುವುದಕ್ಕೆ ನನ್ನ ಮನವು ಒಡಂಬಡದು ” ಎ೦ದು ಪೇಳಲಾದೇವಿಯು- ಎಲೈ ಪೂಜ್ಯನಾದ ತಂದೆಯೇ, ಕೇಳು. ರಾಜಹಂಸ ಸ್ತ್ರೀಯು ಕಮಲವನವಂ ಪೊಂದುವುದು ಯುಕ್ತವಲ್ಲದೆ ದತ್ತೂರಿಗಳ ಗುಂಪನ್ನು `ಸೇರುವುದು ಯುಕ್ತವಲ್ಲ. ನಮ್ಮ ರತ್ನಾ ವಳಿಯ ಸುಂದರ ಕ್ಕೆ ಗುಣಾತಿಶಯಕ್ಕೆ ಸಹ ನಮ್ಮ ರಾಜೇಂದ್ರನೇ ವರನಾಗಿರುವನಲ್ಲದೆ ಇನ್ನೊಬ್ಬನೂ ಈ ಭೂಮಂಡಲ ದಲ್ಲಿ ಇರಲಾರನೆಂದು ನಿಶ್ಚಯಿಸಿರುವೆನು. ದೊರೆಗಳಾದವರು ಬಹುಜನ ಸಿಯ ರಿಗೆ ವಲ್ಲಭರೆಂದು ನೀತಿವಾಕ್ಯವಿರುವುದರಿಂದ ನಮ್ಮಂಥ ಸಹಸ್ರ ಜನಸ್ತ್ರೀಯರಿ ದ್ದರೂ ರತ್ನಾ ವಳಿಯನ್ನು ನಮ್ಮ ರಾಜೇಂದ್ರಸಿಗೆ ಕೊಡತಕ್ಕುದು, ಮತ್ತು ಈ ರತ್ನಾ ವಳಿಯು ಲೋಕದಲ್ಲಿ ಇರುವ ಪುರುಷರಲ್ಲಿ ನಮ್ಮ ರಾಜೇಂದ್ರನೊಬ್ಬನೇ ತ ನಗೆ ಪ್ರಾಣಕಾಂತನ೦ತಲೂ ಉಳಿದವರೆಲ್ಲರೂ ತ೦ದೆಗಳೆಂತಲೂ ದೃಢವಾದ ಪ್ರತಿ ಜ್ಞೆಯಂ ಗೆಯ್ಲಿ ರುವಳು, ನಮ್ಮ ರಾಜೇಂದ್ರನು ಈ ರತ್ನಾವಳಿಯನ್ನು ಯಾವ ದೇ ಶದ ಅರಸಾಗಲಿ ವಿವಾಹವಂ ಗೆಯ್ಯುವೆನೆಂದು ಯತ್ನ ವಂ ಗೆಯಲ್ಲಿ ಅವನ ಶಿರ ವನ್ನು ಯುದ್ಧಭೂಮಿಯಲ್ಲಿ ಸೆಂಡಾಡುವೆನೆಂದು ವೀರವ್ರತವಂ ರಚಿಸಿರುವನು. ಇಂತಿರುವಲ್ಲಿ ಇವರಿಗೆ ವಿವಾಹವನ್ನು ತಪ್ಪಿಸುವದಕ್ಕೆ ಬ್ರಹ್ಮನಿಂದಲೂ ಆಗ ದೆಂದು ನಿಶ್ಚಯಿಸಿರುವೆನು. ನೀವು ಈ ಕಾರವನ್ನು ಶೀಘ್ರದಲ್ಲಿ ಬಳೆಯಿಸಿದಲ್ಲಿ ಅಧಿಕ ವಾದ ಸಂತೋಷವು ಎನಗೆ ಉ೦ಟಾಗುತಿರುವುದು ” ಎಂದು ಏಕಾಂತವಾಗಿ ಬಿನ್ನೈ ಸಲು ; ವಿಕ್ರಮಬಾಹುರಾಯನು ವಾಸವದತ್ತಾ ದೇವಿಯ ಅಭಿಪ್ರಾಯಮಂ ತಿಳಿದು ಸಂತೋಷಮಂ ಗೊಂಡು, ದೇವಿಯೇ, ಇನ್ನು ಮೇತಿ ಪದಿಂ ಪ್ರಸ್ತವನ್ನು ಆಗ ಮಾಡಿಸುತ್ತೇನೆ ?” ಎ೦ದು, ಅಲ್ಲಿಂದ ಪೊರಮಟ್ಟ, ತನಗೆ ಆಪ್ತರಾದ ಬಂಧುಗಳಿಗೂ ದೊರೆಗಳಿಗೂ ಸಹ ಪತ್ರಿಕೆಗಳನ್ನು ಬರೆದು ಕಳುಹಿಸಿ ಕರೆಯಿಸಿ, ಶುಭಮುಹೂರ್ತ ದಲ್ಲಿ ನಿತಿ ತಾರ್ಥ ಕಂಕಣಧಾರಣೆ ಮೊದಲಾದ ಶುಭ ಕಾವ್ಯಗಳ ನಡೆಯಸಿ, ಪಾಣಿ ಗ್ರಹಣ ಕೋಸುಗವಾಗಿ ವತ್ಸ ರಾಜನನ್ನು ಗಜಾಗೋ ಹಣವಂ ಗೆಯ್ದಿ, ಭೇರಿ ತಮ್ಮಟೆ ವೃದಂಗ ಕಾಹತಿ ಮೊದಲಾದ ವಾದ್ಯ ಧ್ವನಿಗಳು ದಿಕ್ತಟಗಳನ್ನು ತುಂಬುತ್ತಿ ರಲು ಸಮಸ್ಯರಾದ ಸುಜನ ಪುರಜನುಂ ದಲೂ ಅಪಲಧರಣಿಪಾಲಕರುಗಳಿಂದಲೂ ವೇದವೇದಾಂಗಪಾರಂಗತರಾದ ಬ್ರಾಹ್ಮಣೇತನರುಗಳಿಂದಲೂ ಯುಕ್ತನಾಗಿ ದೇವೇ೦ದ್ರನ ಐರಾವತವನ್ನೇರಿ ದೇವಸಮೂಹದಿಂದ ಪರಿವೃತನಾಗಿ ಭೂಮಿಯ ಸೌಭಾಗ್ಯವಂ ನೋಡುವುದಕೆ ಬಂದಿರುವನೋ ಎಂಬ ಸಂದೇಹವು ಹಬ್ಬುವಂತೆ ಬೀದಿಬೀದಿಯಲ್ಲಿ ಮೆರವಣಿಗೆಯಂ ಗೆಯ್ಲಿ ಕರೆದುಕೊಂಡು ಬರುತ್ತಿರಲು ; " ಆ ಸಮಯದಲ್ಲಿ ಆ ಪಟ್ಟಣದಲ್ಲಿರುವ ಯೌವನಸ್ಥರಾದ ಸ್ತ್ರೀಯರುಗಳು ವತ್ಸ ರಾಜನೆಂಬುವನು ವಸಂತ ಜಯಂತ ಕಂತು ಮುಂತಾದವರಗಿಂತಲೂ ಕಾಂತ