ಪುಟ:ವತ್ಸರಾಜನ ಕಥೆ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ಶಾಜನ ಕಥೆ, v4 ನಾಗಿ, ಸುದಂತೆಯಾಗಿ ಶುಭೋದಂತೆಯಾಗಿ ಕಮಲದಳನೇತ್ರಾಂತೆಯಾಗಿ ನಮ್ಮ ಭೂಕಾಂತನಿಗೆ ಪ್ರಾಣಕಾಂತೆಯಾದ ಕಮಲಾವಳಿಯ ಗರ್ಭವೆಂಬ ಮುತ್ತಿನ ಚಿಪ್ಪಿಗೆ ಕೆರಮುತ್ತಿನಂತೆ ಮೆರೆಯುವ ರತ್ನಾ ವಳಿಯ ಪಾಣಿಗ್ರಹಣವಂ ಗೆಯ್ಯಲೋಸುಗ ಗಜಾರೋಹಣವಂ ಗೆಯತ್ತ ಬರುವನು. ಅವನನ್ನು ನೋಡಿ ನೇತ್ರಾನಂದವನ್ನು ಪೊಂದಬೇಕು ಎಂದು ಮೇಘಮಂಡಲದ ಒತ್ತಿನಲ್ಲಿ ಒಪ್ಪುತ್ತಿರುವ ಉಪ್ಪರಿಗೆಯನ್ನೇರಿ, ಬೆಡಗುಗಳಂ ಬೀರಿ, ಬಗಸೆಗಳಂ ಮೀರಿ ಅನುರಾಗವ ತೋರುತ್ತಿರುತ ಕೊಂಕು ಗೂಡಿ ಬಳ್ಳಿವರಿದು ಬಗೆಬಗೆಯಾದ ದೃಷ್ಟಿಗಳಿ೦ದ ಶ್ರೇಷ್ಠನಾದ ವತ್ಸ ರಾಜನನ್ನು ನೋಡಿನೋಡಿ ತೃಪ್ತಿ ಹೊಂದದೆ, "...ಇವನ ಕೈ ಹಿಡಿಯುವ ರತ್ನಾ ವಳಿಯು ಜನ್ಮಾಂ ತರದಲ್ಲಿ ಯಾವ ನೋಂಪಿಯನ್ನು ನೋ೦ತಳೊ ತಿಳಿಯದು , ಅವಳ ಭಾಗ್ಯವನ್ನು ಎಷ್ಟೊಂದು ಬಣ್ಣಿಸಲಿ...ಅವಳ ಪುಣ್ಯವು ೨೭೭ ದೇವಿಗೂ ಇಲ್ಲವಾಗಿರುವುದು...” ಎಂದು ಒತ್ತಿನಲ್ಲಿರುವ ನಾರಿಯರೊಡನೆ ವೇಣಿ ಹಂಬಲಿಸುತ್ತಿದ್ದರು. ಇ೦ತು ಪುರದ ನಾರಿಯರೆಲ್ಲರೂ ವರಿಸವಿಯಾದ ಸರಸೋಕ್ಕಿಗಳನ್ನು ಬೀರುತ್ತ, ಆ ವತ್ಸ ರಾಜನನ್ನು ರೆಪ್ಪೆಗಳನ್ನು ಮುಚ್ಚದೆ ಅನಿಮಿಷಸೀಯರಂತೆ ಅಂಬರಮಂ ಚುಂಬಿಸುತ್ತಿರುವ ಚಂದ್ರಶಾಲೆಗಳಲ್ಲಿ ನಿಂತು ನೋಡುತ್ತಿರಲು ; ಮುಂಬಾಗದಲ್ಲಿರುವ ಸಿಕ್ರಮಬಾಹುರಾಯನ ಅರಮನೆಯ ಮೇಲ್ಲ ಡೆಯಲ್ಲಿ ಎಣಿಕೆಗೆ ಅಳವಿಡದೆ ಗುಂಪುಗೂಡಿ ಚಿನ್ನದ ಗೊಂಬೆಗಳಂತೆ ಸನ್ನು ತರಾಗಿ ನಿಂತಿರುವ ಅಂತಃಪುರ ಸೀಜನನಂ ಕಂಡು ವಿದೂಷಕನು, ಅಯ್ಯಾ ರಾಜೇಂದ್ರನೇ, ನಿನ್ನ ಒತ್ತಿನಲ್ಲಿ ನಾನು ಕುಳಿತು ಗಾಂತವಾದ ಇಶ್ವರವನ್ನು ಅನುಭವಿಸಿದೆನು, ಎಂಬ ಸಂತೋಷವೇ ಬಲವಾಗಿದ್ದುದು, ಈಗ ಮುಂದುಗಡೆಯಲ್ಲಿ ನಿಂತಿರುವ ನಿಮ್ಮ ಮಾವನ ಮನೆಯ ಊಳಿಗದ ಹೆಣ್ಣು ಗಳನ್ನು ನೋಡಲಾಗಿ, ಅದಕ್ಕಿಂತಲೂ ಅತಿಶ ಯವಾದ ಹರ್ಷವು ಪ್ರಾಪ್ತವಾದುದು. ನೀನು ಈ ಬಾಲೆಯರ ಗುಂಪನ್ನು ಸೇರಿದ ಮೇಲೆ ಎನ್ನ ಸ್ಮರಣೆಯು ಉಂಟಾಗುವುದಿಲ್ಲವೆಂಬುವ ಸಂದೇಹವು ತೋರುತ್ತಿರು ವುದು !” ಎಂದು ವಿನೋದವಚನಗಳನ್ನು ನುಡಿಯುತ್ತಿರಲು ; - ಇತ್ತಲು, ವಿಕ್ರಮಬಾರುರಾಯನ ಪತ್ನಿಯಾದ ರತ್ನಾ ವಳಿಯ ಮಾತೆಯಾದ ಕಮಲಾವಳಿಯು ತನ್ನ ಪುತ್ರಿಯಾದ ರತ್ನಾ ವಳಿಯನ್ನು ಅಲಂಕರಿಸುವಂತೆ ಆಜ್ಞೆಯ ಸ್ನೇಯಲುಸಂತೋಷದಿಂದ ಸಂಗತರಾದ ಸಖಿಯರುಗಳ ರತ್ನಾ ವಳಿಯನ್ನು ಅಲಂ ಕಾರಮಂಟಪಕ್ಕೆ ಕರೆತಂದು ರತ್ನ ಪೀಠದಲ್ಲಿ ಕುಳ್ಳಿರಿಸಿ-ಒರ್ವ ಚ೦ಚಲಾಯು ಆಮೆಗಳಿಗಿಂತಲೂ ಅತಿಸುಂದರಳಾಗಿ ಕೆಂದಾವರೆಯ ಅಂದನಂ ನಿಂದಿಸುತ್ತ ರಕ್ತನಂ ಮುಕ್ಕುಳಿಸಿದಂತೆ ಒಪ್ಪ ಮೃದುಗಳಾದಚರಣಗಳಿಗೆ ಬಿರುದು ಕಡಗಗಳಂ ತೊಡಿ ಸುವಳೋ ಎಂಬಂತೆ ರತ್ನ ಮಯಗಳಾಗಿ ಮೇಲಾದ ಕಾಲುಸರಗಳನ್ನು ತೊಡಿಸಲು; ಇನ್ನೊ ರೈ ವಿಶಾಲಾಕ್ಷಿಯು ಕಮಲನಾಳದ ನೂಲಿನಂತೆ ಒಪ್ಪಿ ದೃಷ್ಟಿಗೆ ಗೋಚರವ