ಪುಟ:ವತ್ಸರಾಜನ ಕಥೆ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vಳಿ - ರ್ಕಟಕಕಾವ್ಯಕಲಾನಿಧಿ -- ಲ್ಲದೆ ಇರುವ ಮಧ್ಯಭಾಗವನ್ನು ಪದ್ಮರಾಗದ ಒಡ್ಯಾಣದಿಂದ ಅಲಂಕರಿಸಲು ; ಮತ್ತೊತ್ವ ಕಂಬುಕಂಠಿಯು ನಾಧಿಯೆಂಬ ಪಾತೆಯಿಂದೆದ್ದು ಬೆಳೆದ ರೋಮರಾಜಿ ಯೆಂಬ ಲತೆಗೆ ಫಲಗಳಂತೆ ಮೆರೆಯುತ್ತ, ಹೃದಯದಲ್ಲಿರುವ ಮನ್ಮಥಮಹಾರಾಜನ ಮದ್ದಾನೆಯ ಕುಂಭಸ್ಥಳಗಳಂತೆ ತೋರುತ್ತ, ಲೋಕದಲ್ಲಿರುವ ಯೌವನಪುರುಷ ರನ್ನು ವಂಚಿಸಲೋಸುಗ ಮನ್ಮಥನೆಂಬ ಸಿದ್ಧ ಪುರುಷನು ಮೋಹವೆಂಬ ಚೂರ್ಣ ವನ್ನು ತುಂಬಿ ಮಡಗಿರುವ ಸುವರ್ಣದ ಭರಣಿಗಳೋ ಎಂಬಂತೆ ಹೊಳೆಯುತ್ತ, ಹೈ ದಯವೆಂಬ ಕೊಳದಿಂದ ಮೇಲಕ್ಕೆ ಎದ್ದಿರುವ ತಾವರೆಯ ಮೊಗ್ಗು ಗಳೊ ಎಂಓಂತೆ ರಾಜಿಸುತ್ತ, ರತ್ನಾ ವಳಿಯ ದೇಹವೆಂಬ ಸುವರ್ಣಭೂಮಿಯಲ್ಲಿ ಮನ್ಮಥಮಹಾರಾಜ ನಿಗೆ ಪಟ್ಟಾಭಿಷೇಕವಂ ಗೆಯ್ಯಲೋಸುಗ ಯೌವನವೆಂಬ ಪುರೋಹಿತನಿಂದ ತ೦ದಿರಿ ಸಿರುವ ಅಮೃತಕಲಶಗಳೋ ಎಂಬಂತೆ ಕಣೋಳಿಸುತ್ತ, ಮುಖಚಂದ್ರನ ಭಯಕೆ ಅಡಗಿರುವ ಚಕ್ರವಾಕಷ್ಟಗಳೆ ಎಂಬಂತೆ ಎಸೆಯುತ್ತ, ಕಠಿನವಾದ ಮುನಿಜನರ ಮನವೆಂಬ ದುರ್ಗವನ್ನು ಭೇದಿಸಲೋಸುಗ ಮನ್ಮಥನೆಂಬ ಶೂರನು ತಂದಿರಿಸಿರುವ ಪಿರಂಗಿಯ ಚಿನ್ನದ ಗುಂಡುಗಳೋ ಎಂಬಂತೆ ಹೊಳೆಯುತ್ತ, ಪಟುವಾಗಿ ಒಟುವಾಗಿ ಮಿಂಚುರೋರಿ ನುಣುಪಾಗಿ ಒತ್ತಾಗಿ ಮೊತ್ತವಾಗಿ ಎತ್ತರವಾಗಿ ಬಿತ್ತರವಾಗಿ ಮು ಇಗಿದ ಮೊನೆಗಳಾಗಿರುವ ದುಂಡುಮೊಲೆಗಳಿಗೆ ಕಾಮನ ಕೈ ಕಠಾರಿಗಳಿಗೆ ಒರೆಗ. ಳನ್ನು ತೋಡಿಸುವಳೋ ಎಂಬಂತೆ ಸರಿಗೆಯಿ೦ ಮಿರುಗುವ ಕುಪ್ಪಸವಂ ತೋಡಿಸಲು; ಮತೋರ್ವ ಬೆಡಗುಗಾತಿಯು ಘನವಾದ "ನಗಳೆಂಬ ಹಿಮಗಿರಿಯಿಂದಿಳಿದು ಬರುವ ದೇವಗಂಗೆಯ ಶಂಕೆಯನ್ನು ೦ಟುಮಾಡುವಳೋ ಎಂಬಂತೆ, ಕ೦ಠವೆಂಬ ಶಂಖದೊಡಹುಟ್ಟಿದ ಮುತ್ತುಗಳನ್ನು ಒಂದು ಸ್ಥಾನಕ್ಕೆ ಸೇರಿಸುವಳೋ ಎಂಬಂತೆ, ಮೊತ್ತವಾದ ಮುತ್ತಿನ ಹಾರವನ್ನು ಕುಶಾಗ್ರಗಳನ್ನು ಸೇರುವಂತೆ ಕತ್ತಿಗೆ ಅಳವಡಿಸಿ ನಿಂತು ನೋಡುತ್ತಿರಲು ; ಇನ್ನೂ ರ್ವ ಸನ್ನು ತಾಂಗಿಯಾದ ಕನೈಯು ರತೀದೇವಿಯ ಕೈ ಕನ್ನಡಿಯಂತೆ ಕಳಂಕವನ್ನು ಬಿಟ್ಟ ಪೌರ್ಣಮಿಯ ಚಂದ್ರನಂತೆ ಅಮೃತಸರೋ ವರದಲ್ಲಿ ಪುಟ್ಟಿದ ಕಮಲದಂತೆ ನೌಂದಯ್ಯರಸಕ್ಕೆ ನ್ಯಾನದಂತೆ ಒಪ್ಪತಿರುವ ಮುಖ ವನ್ನು ಪನ್ನಿರಿನಿಂದ ನನೆದ ಹಸ್ತಸಾವಡೆಯಿಂದ ಹದವರಿತು ಒರಸಿ ಕನ್ನಡಿಯಂತೆ ತಳತಳಿಸುತ್ತಿರುವ ಕಪೋಲದಲ್ಲಿ ನಯವಾಗಿ ಮಕರಿಕಾ ಪತ್ರಗಳಂ ಬರೆದು ಸಂಪಗೆ ಮೊಗ್ಗಿನ ತುದಿಯಲ್ಲಿ ಸೊಂಪಾದ ಅರಳಿದ ಮಲ್ಲಿಗೆಯು ಪುಟ್ಟಿ ರುವುದೋ ಎಂಬ ಸಂದೇಹವನ್ನು ೦ಟುಮಾಡುವಳೋ ಎಂಬಂತೆ ಎರಡು ಕಣ್ಣುಗಳ ಮಧ್ಯದಲ್ಲಿ ನೆಟ್ಟ ಎಲ್ಲೆಗಲ್ಲೋ ಎಂಬಂತೆ ಒಮ್ಪತಿರುವ ನಾಸಿಕವನ್ನು ವಜ್ರದ ಮೂಗುತಿಯಿಂದ ಶೃಂಗರಿಸಿ, ಅಷ್ಟ ಮಿಯ ಚಂದ್ರನಂತೆ ಮನ್ಮಥನ ಜಯಪತ್ರಿಕೆಯಂತೆ ಒಪ್ಪುತ್ತಿರುವ ಹಣೆಯಲ್ಲಿ ಕಳಂಕವನ್ನುಂಟುಮಾಡುವಳೋ ಎಂಬಂತೆ ಯೌವನಪುರುಷರ ಎದೆಯಂ ಭೇದಿಸುವಂತೆ ಮಾರನ ಬಾಣಗಳಿಗೆ ಅಲಗನ್ನು ತಿದ್ದುವಳೋ ಎಂಬಂತೆ ಮುದ್ದಾಗಿ