ಪುಟ:ವತ್ಸರಾಜನ ಕಥೆ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತುರಿಯ ತಿಲಕವಂ ತಿದ್ದಿ ಕಾಮನ ಬಿಲ್ಲುಗಳಂತೆ ಕಮನೀಯವಾಗಿರುವ ಹುಬು ಗಳ ಮಧ್ಯದಲ್ಲಿ ಕುರುವಿ೦ದದ ಹಿಡಿಯನ್ನುಂಟುಮಾಡುವಳೋ ಎಂಬಂತೆ ಕುಂಕು ಮದ ಚಿಕ್ಕಿಯ ಬೊಟ್ಟನ್ನಿಟ್ಟು, ಮಟ್ಟು ವಿಾರಿದ ಆನಂದವನ್ನು ಪೊಂದುತ್ತಿರಲು ; ಮತ್ತೊರ್ವ ಮಂದಯಾನೆಯು ಶ್ರೀಕಾರಗಳಂತೆ ರಾಜಿಸುವ ಕರ್ಣಗಳಲ್ಲಿ ಚಂದ್ರ ಮಂಡಲಗಳ೦ತೆ ಕಾಂತಿಯಂ ಬೀರುತ್ತಿರುವ ವಜ್ರದ ಕುಂಡಲಗಳನ್ನು ಸೇರಿಸಿ ಜೀವ ಕಿತ್ಯದ ಬಾವುಲಿ ಹೊನ್ನು ಹೂವು ಬುಗುಡಿಗಳನ್ನೂ ಜತೆಗೊಳಿಸಿ ಕಾಮನ ಅಂಬುಗ ಳಂತೆ ಇಂಬಾಗಿ ಮೀನುಗಳ ಮಾನಗಳಂ ಬರಿಗೆಯು ಕಮಲದಳದ ಕಾಂತಿಯಂ ಕಂದಿಸಿ ಮೆರೆಯುವ ಕಣ್ಣುಗಳಿಗೆ ಓರೆನೋಟದ ದಾರಿಯಂ ತೋರಿಸುವ ಎಂಬಂತೆ ಕಾಡಿಗೆಯಿಂದ ಕಿವಿಗಳು ಸೋಕುವಂತೆ ಸೋಗೆಯಂ ತಿದ್ದಿ ದೂರವಾಗಿ ಬಂದು ನಿಂತು ನೋಡುತ್ತಿರಲು ; ಇನ್ನೂ ರ್ವ ಸೊನೆಯೇರಿದ ಪ್ರಾಯದ ಬಾಲೇಂ ದುಫಾಲೆಯು ಕಲ್ಪವೃಕ್ಷದ ಚಿಗುರುಗಳಂತಿರುವ ಬೆರಳುಗಳಿಗೆ ವಜ್ರ ಸಜ್ಜೆ ಮುಂ ತಾದ ಉಂಗುರಗಳನ್ನು ತೊಡಿಸಿ ಶೀಘ್ರವಾಗಿ ವತ್ಸ ರಾಜನ ಕೆಯ್ಯಂ ಪಿಡಿಯುವ ೪ಾಗೆಂದು ನುಡಿಯುತ್ತಿರಲು ; ಮತ್ತೋರ್ವ ಸುಕೇಶಿಯು ಕಾರ್ಮುಗಿಲಂತೆ ಕಂಗೊ ಳಿಸುತ್ತಿರುವ ಕೇಶಗಳನ್ನು ನಕ್ಷತ್ರಗಳಂತಿರುವ ದುಂಡುಮಲ್ಲಿಗೆಯ ಮಾಲೆಯಿಂದ ಅಲಂಕರಿಸುತ್ತಿರಲು ; ಇನ್ನೊರ್ವ ಕಲವಾಣಿಯು ಕಮನೀಯವಾಗಿ ಸುವರ್ಣದ ಲತೆಯಂತೊಪ್ಪುತ್ತಿರುವ ದೇಹಕೆ ಮಿಂಚಿನ ಬಳ್ಳಿಯ ಸಂಚರಿದು, ಎಳವಿಸಿಲನ್ನು ಉಡಿ ಸುವಳೋ ಎಂಬಂತೆ ಸರಿಗೆಗಳಿ೦ ಮಿರುಗುತ್ತಿರುವ ಸೀರೆಯನ್ನು ಡಿಸಿ ನೆರೆಯಂ ಸರಿದು ಅದೊಂದು ಸರಿಯಾಗಿ ಅಲಂಕರಿಸುತ್ತಿರಲು ; ವಾಸವದತ್ತಾದೇವಿಯು ಬಂದು ಸರ್ವಾಲಂಕಾರಭೂಷಿತಳಾಗಿರುವ ರತ್ನಾ ವ ಳಿಯಂ ನೋಡಿ ದೃಷ್ಟಿತಾಗುವುದೆಂದು ಒತ್ತಿನಲ್ಲಿ ಗುಂಪಾಗಿ ನಿಂತಿರುವ ಊಳಿಗದ ಹೆಣ್ಣುಗಳ ಮೇಲೆ ಕೆಂಡದಂತೆ ಕಣ್ಣು ಗಳ೦ ಕೆಂಪುಗೂಡಿಸುತ್ತಿರಲು ; “ವತ್ವ ರಾಜೇಂದ್ರನು ಭೂದೇವೇಂದ್ರನಂತೆ ಗಜಾರೋಹಣವಂ ಗೆಯ್ಯು ಅರ ಮನೆಯ ಬಾಗಿಲವರೆಗೂ ಬಂದು ನಿಲ್ಲಲು ; - ಅನಂತರದಲ್ಲಿ ವಿಕ್ರಮಬಾಹುರಾಯನು ಸಮಸ್ತವಿಭವದಿಂದೊಡಗೂಡಿ ಬಾಗಿಲ ವರೆಗೆ ಬಂದು, ವತ್ಸ ರಾಜನನ್ನು ಹಸ್ತಲಾಗದವನ್ನು ಕೊಡುತ್ತ ವಿವಾಹಮಂಟಪವನ್ನು ಸೇರಿಸಿ, ಯಥಾವಿಧಿಯಾಗಿ ವಿವಾಹವನ್ನು ವಿರಚಿಸಿ, ಬ್ರಾಹ್ಮಣಶ್ರೇಷ್ಠರಿಗೂ ದೇಶಾ ಧಿಪತಿಗಳಿಗೂ ಸಹ ಮನ ದಣಿಯುವಂತೆ ಬಹುಮಾನವನ್ನುಂಟುಮಾಡುತ್ತಿರಲು; ವತ್ಸ ರಾಜನು ಶ್ರೀದೇವಿ ಭೂದೇವಿಯರಿಂದ ವಿರಾಜಿಸುವ ಮಹಾವಿಷ್ಣುವಿ ನಂತೆ ವಾಸವದತ್ತಾ ರಕ್ಷಾ ವಳಿಯರಿಂದೊಡಗೂಡಿ ಸುಖವಾಗಿರುತ್ತಿದ್ದನು.