ಪುಟ:ವತ್ಸರಾಜನ ಕಥೆ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಬಲ್ಲಿಗೆ ಚಂಡಕರಮಂಡೆಶೋಚ್ಛಂಡ ತೇಜಃಪ್ರಕಾಂಡ ಕಾಂಡಷಂಡಖಂಡಿತಾಖಂಡಿ: ಕೌರಮಂಡಿತಭಂಡನೆದ್ದಂಡಾರಿಮಂಡಲಕಂಡೂಲದೋರ್ದಂಡಪಾಂಡಿತ್ಯ ಪಾಕ ಡುರುಚಿ ಖಂಡಡಿಂಡೀರವುಂಡರೀಕಪರಿಪಾಂಡುರಯಶಃ ಪಿಚಂಡಿಲಬ್ರಹ್ಮಾಂಡಭಾಂ ಡೋದ್ಧಟೆಕಾಲಕೂಟಕದಟಪಟುನಿಶಾಟ ಕೂಟಪಾಟನಲಂಪಟ ನಿಲಪಟಘಟಿತ ವಿಕಟಕೃಪೀಟಯೋನಿತ್ತುತಿತಮೋಹಾಂಧಕಾರಚೆ ಬಾವಿಘಟನಪಟು ನಟಹಾ ನಟಮಕುಟತಟಪಟಟನೀ ತಟಾ೦ತರ೦ಗರಿಂಗದಭಂಗೋತ್ತುಂಗತರಂಗ ಸಂಗರ ಭಂಗದ ಸಂಭ್ರಮೋಜೃಂಭಮಾಣಗಂಭೀರವಾಗ್ಗು ೦ಭಸಂಭಾವಿತ ಗರನಗರವರ ನಿಲಯ ಚಂದ್ರಚೂಡ ಚರಣಾರವಿಂದಸೇವಾಮರಂದನಿರಂತರ ನಿಷೇವಣ ಸ್ವಯಂವೃತ ಕವಿತಾವಧೂರತ್ನ ರಾಜಾಧಿರಾಜ ಶ್ರೀಚಾಮರಾಜೇಂದ್ರಪುತ್ರಾಯಸಗೋತ್ರ ಪವಿತ್ರ ಚರಿತ್ರ ಕೆಂಪನಂಜಮಾ೦ಬಾಗರ್ಭ ಶ್ರೀಪಾರಾವಾರರಾಕಾಸುಧಾಕರಾಯ ಮಾಣ ಶಂಖಚಕಮಕರಮತ್ಸ ಶರಭಸಾಲ್ಯ ಗಂಡಭೇರುಂಡಧರಣೀವರಾಹ ಹನು ಮದ್ಯರುಡ ಕಂಠೀರವಾದ್ಯನೇಕ ಬಿರುದಾಂಕಿತ ಬಿರುದೆಂತೆಂಬರಗಂಡ ಪ್ರತಾಪಮಾ ರ್ತ೦ಡ ಶ್ರೀ ಚಾಮುಂಡಿಕಾವರಪ್ರಸಾದಲಬ್ಬ ಮಹೀಶರಮಹಾಸಂಸ್ಥಾನಮಧ್ಯ? ತಮಾನಯ್ಯದ್ಯಾನವದ್ಯಕುಲಕ್ರಮಾಗತದಿವ್ಯಸಿಂಹಾಸನಾರೂಡೋಭಯ ಕಸಿ ತಾಲಕ್ಷಣವಿಚಕ್ಷಣ ಶ್ರೀಕೃಷ್ಣರಾಜಕಂಠೀರವರಿಂ ಕರ್ಣಾಟಕಭಾಷೆಯಿಂ ಸರಸ ಜನಾನಂದಕರವಾಗಿ, ಲೋಕೋಪಕಾರಾರ್ಥವಾಗಿ, ನವರಸಭರಿತವಾಗಿ, ವಿರಚಿಸಲ್ಪಟ್ಟ ಶ್ರೀ ಕೃಷ್ಣರಾಜ ಸೂಕ್ತಿ ವಕ್ತಾವಳಿಯೆಂಬ ಗ್ರಂಥದೊಳ್ ವತ್ಸ ರಾಜನ ಕಥೆಯಲ್ಲಿ ರತ್ನಾವಳಿ ವಿವಾಹಂ ಸಮಾಸ್ಕ೦. ಇಪ್ಪತ್ತನಯ ಗುಚ್ಛಂ ಸಂಪೂರ್ಣ೦.

  • ಪ್ರಥಮಭಾಗಂ ಸಂಪೂರ್ಣo: *