•4 - ವತ್ಸರಾಜನ ಕಥೆ, - ಚಾರನು- ಅಯ್ಯಾ, ಮಂತ್ರಿಗಳೇ, ಕೇಳಿ, ವಾಸವದತ್ತಾ ದೇವಿಯು ಹಿತವಾದ ಕಾರ್ಯವಂಗೆಯ್ಯುತ್ತ ತನ್ನ ಪತಿಗೆ ಸಮ್ಮತಳಾಗಿರುವಳೇ ಎಂದು ದೊರೆಗಳು ಅಪ್ಪ ಣೆಯನ್ನಿತ್ತರು. ನಾನು ಅಂತಃಪುರದ ಸಂಚಾರಕ್ಕೆ ಯೋಗ್ಯನಲ್ಲವಾದುದರಿಂದ ಆ ಪ ಶೈಗೆ ಉತ್ತರವಂ ಪೇಳಲಾರೆನೆಂದು ಬಿನ್ನವಿಸಿದೆನು ” ಎನ್ನಲು; ರಾಯನು ಈ ಚಾರನ್ನ ವಾಕ್ಯದಿಂದ ವಾಸವದತ್ತಾ ದೇವಿಯು ಕ್ಷೇಮದಲ್ಲಿ ಇದ್ದಾಳೆಂಬ ವಾಕ್ಯವು ವ್ಯಕ್ತವಾಗಿ ತೋರಲಿಲ್ಲವೆಂದು ಮನದಲ್ಲಿ ಯೋಚಿಸಿ..- ಎಲ್ವೆ ಚಾರನೇ, ನೀನು ಅಂತಃಪುರದ ಸಂಚಾರಕ್ಕೆ ಯೋಗ್ಯನಲ್ಲದೆ ಇದ್ದರೂ ಆ ವಾಸವದತ್ತೆಯು 'ಅಂತಃ ಪುರದಲ್ಲಿ ಕ್ಷೇಮವಾಗಿದ್ದಾಳೆ೦ಬ ವಾರ್ತೆಯನ್ನಾದರೂ ಕೇಳಿಬಲ್ಲೆಯಾ ? ೨) ಎಂದು ನುಡಿಯಲು: ಚಾರನು-II ಅಯ್ಯಾ, ರಾಜೇಂದ್ರನೇ, ನಮ್ಮ ವಾಸವದತ್ತಾ ದೇವಿ ಯರು ವಸಂತಕಾಲವಾದುದರಿಂದ ಮನ್ಮಧನಂ ಪೂಜಿಸಲೋಸುಗ ಕೌಶಾಂಬೀನಗ. ರಿಯ ಒತ್ತಿನಲ್ಲಿ ಇರುವ ಸುಂದರವಾದ ವನಕ್ಕೆ ಅನೇಕವಾದ ಸುಂದರಿಯರಿಂದೊಡ ಗೂಡಿ ಮಂಗಳಕರವಾದ ಪಲ್ಲಕ್ಕಿಯನ್ನೇರಿ ಸಾರಿಯನ್ನು ಪೋಗಿ ಬಂದಿರ್ಪುದಂ ಕಂಡಿರುವೆನು. ಅಂತಃಪುರದಲ್ಲಿ ನಮ್ಮ ದೇವಿಯ ಸಂತೋಷದಲ್ಲಿ ಇರುವಳೆಂಬು ದರಲ್ಲಿ ಸಂದೇಹವು ಎಳ್ಳಷ್ಟಾದರೂ ತೋರುವುದಿಲ್ಲ ” ಎಂದು ಬೆನ್ನೈ ಸಲಾವಾಕ್ಯವಂ ಕೇಳಿ, ಎಲ್ಲರೂ ಸಂತೋಷಭರಿತರಾಗಿರಲು; ರಾಯನು-1 ( ಎಲೈ, ಚಾರನೇ, ನಾವು ಅಪ್ಪಣೆಯನ್ನೀ ಯುವವರೆಗೂ ಇಲ್ಲೇ ಇದ್ದುಕೊಂಡು ಇರುವವನಾಗು ಎಂದು ಅಪ್ಪ ಣೆಯನ್ನಿತ್ತು ಕಳುಹಲು; ಪುರೋಹಿತನು-II ಅಯ್ಯಾ ರಾಜೇಂದ್ರನೇ, ನಾನು ವಿಜ್ಞಾ ಪನೆಯಂಗೈದ ವಾಕ್ಯವು ಈಗಲಾದರೂ ನಿನ್ನ ಚಿತ್ರಕ್ಕೆ ಯಥಾರ್ಥವಾಗಿ ತೋರಿತೆ ? ಮುಂದೆ ಏನು ಅಪ್ಪಣೆಯನ್ನೀಯುತ್ತಿರುವೆ ? ?” ಎಂದು ಬಿನ್ಲೈಸಲು ರಾಜೇಂದ್ರನು ಒತ್ತಿನಲ್ಲಿದ್ದ ಪತಿವ್ರತಾ ಶಿರೋಮಣಿಯಾದ ಕಮಲಾವಳಿಯ ಮುಖವಂ ನೋಡಲು, ಕಮಲಾವಳೀದೇವಿಯು, ರಾಯನ ಅಭಿಪ್ರಾಯವಂ ತಿಳಿದು,- ಎಲೈ ಸ್ವಾಮಿ ಯೇ, ಆ ವತ್ವ ರಾಜಂಗೆ ಪುತ್ರಿಯನ್ನು ಕೊಡುವುದು ನಿಮ್ಮ ಚಿತ್ರಕ್ಕೆ ಸಮ್ಮತವಾದಲ್ಲಿ ಎನಗೂ ಅದೇ ವಾಕ್ಯವು ಸಮ್ಮತವೇ ಸರಿ. ೨) ಎಂದು ಬಿನ್ನೆಸಲು ; ಮಂತ್ರಿಯು ಕೈಗಳಂ ಮುಗಿದು- ಎಲೈ, ಸ್ವಾಮಿಯೇ, ನಿನ್ನ ಚಿತ್ರಕ್ಕೆ ಬೇಸರವು ತೋರದೆ ಇದ್ದಲ್ಲಿ ಒಂದು ವಾಕ್ಯವಂ ಬಿನ್ನಿಸುವೆನು ?” ಎಂದು ನುಡಿಯಲು ; ರಾಯನು « ಎಲೈ, ಮಂತ್ರಿಯೇ, ನೀನಾಡಿದ ವಾಕ್ಯದಲ್ಲಿ ಎಂದಿಗೂ ನನಗೆ ಬೇಸರವು ತೋ ರಲಾರದು, ಏನಿದ್ದರೂ ಭಯವಿಲ್ಲದೆ ಬಿನ್ನಿಸುವನಾಗು ” ಎಂದು ನುಡಿಯಲು ; ಮಂತ್ರಿಯು- ಎಲೈ ಸ್ವಾಮಿಯೇ, ನಿಮ್ಮ ಪುತ್ರರಾದ ವಿಂದಾನುವಿಂದರುಗಳು ಆರಟ್ಟ ದೇಶಾಧಿಪತಿಯಾದ ಜಯವರ್ಮರಾಯನಲ್ಲಿ ಬಹಳವಾದ ಮಿತ್ರತ್ವವನ್ನು ಬಳೆಯಿಸಿ ಈ ರತ್ನಾ ವಳೀದೇವಿಯನ್ನು ಅವನ ಮಗನಾದ ಕೀರ್ತಿವರ್ಮನಿಗೆ ಕೊಟ್ಟು ವಿವಾಹವನ್ನು ವಿರಚಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡಿರುವರೆಂಬುದಾ
ಪುಟ:ವತ್ಸರಾಜನ ಕಥೆ.djvu/೨೨
ಗೋಚರ