ಪುಟ:ವತ್ಸರಾಜನ ಕಥೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ -- ಕಣರ್»ಟಕ ಕಾವ್ಯಕಲಾನಿಧಿ - ಗಿಯೂ, ಅವನ ಪುತ್ರಿಯರನ್ನು ತಾವು ಮದುವೆಯಂ ಮಾಡಿಕೊಳ್ಳಬೇಕೆಂಬುದಾ ಗಿಯೂ ನಿಶ್ಚಯವಂ ಗೈದಿರುವರೆಂಬ ವರ್ತಮಾನವಂ ಕೇಳಿರುವೆನು.' ಲೋಕದಲ್ಲಿ ಮಕ್ಕಳು ಯೌವನಸ್ಥರಾದ ಬಳಿಕ ಮಿತ ರೋಪಾದಿಯಲ್ಲಿ ಕಾಣಬೇಕೆಂಬ ಮರಾ ದೆಯೂ ಇರುವುದರಿಂದ ಈಗ ಸ್ವಾಮಿಯವರು ಯೋಚಿಸಿರುವ ಕಾರ್ಯವನ್ನು ಅವ ರೊಡನೆ ಆಲೋಚಿಸಿ, ಅವರ ಅಭಿಪ್ರಾಯವನ್ನೂ ತಿಳಿದ ಬಳಿಕ, ಮುಂದಣ ಶುಭ ಕಾರ್ಯದಲ್ಲಿ ಪ್ರಯತ್ನ ವಂಗೆಯ್ಯಬಹುದಾಗಿ ತೋರುತ್ತಿರುವುದು ಇದರ ಮೇಲೆ ಸರ್ವಜಿರಾದ ಸ್ವಾಮಿಯವರ ಚಿತ್ರಕ್ಕೆ ಹೇಗೆ ಸಮ್ಮತವೋ ಆರೀತಿಯಾಗಿ ನಡೆದು ಕೊಳ್ಳುವೆನು ?” ಎಂದು ನುಡಿಯಲು; ರಾಯನು-II ಅಯ್ಯಾ ಪುರೋಹಿತರೇ, ನಾವು ಮಾಡುವ ಕಾರ್ಯವನ್ನು ಆ ಪುತ್ರ ರೊಡನೆ ಆಲೋಚನೆಯಂ ಮಾಡುವುದು ನಿಮ್ಮ ಚಿತ್ರಕ್ಕೆ ಯುಕ್ತವಾಗಿ ತೋರುವುದೇ ? ” ಎನ್ನಲು; ಆ ಪುರೋಹಿತನು-- ಎಲ್ಯ, ರಾಜೇಂದ್ರನೇ, ಮಂತ್ರಿಯಾದ ವಸುಭೂತಿಯು ಯುಕ್ತವಾಗಿಯೇ ವಿಜ್ಞಾಪನವಂ ಗೆಯ್ದಿ ರುವನು. ” ಎ೦ದು ಅನ್ನಿಸುತಿರ್ದನು. ಎಂಬಲ್ಲಿಗೆ # ಕೃಹ್ಮರಾಜ ಕಂಠೀರವರಿಂ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಶಿ ಕೃಷ್ಣರಾಜ ಸೂಕ್ತಿಮುಕ್ಸಾನ'ಯಂಬ ಗ್ರಂಥದೊಳೆ ದ್ವಿತೀಯಗುಚ್ಛಲ ಸಂಪೂರ್ಣ ೦. ೦.