ಪುಟ:ವತ್ಸರಾಜನ ಕಥೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ - ವತ್ಸ ರಾಜನ ಕಥೆ, - ತೃತೀಯ ಗುಚ್ಛಂ. ಅನಂತರದಲ್ಲಿ ವಿಕ್ರಮಬಾಹುರಾಯನು ಮಂತ್ರಿ ಪುರೋಹಿತರ ವಾಕ್ಯವನ್ನು ಕೇಳಿ ಅದೇಮೇರೆಯಲ್ಲಿ ಪುತ್ರ ರಾದ ವಿಂದಾನುವಿಂದರ ಅನುಮತಿಯಂ ತಿಳಿದು ಕಾರ್ಯವಂ ನಡೆಸುವೆನೆಂದು ನುಡಿಯುತ್ತಿರಲು; ಕಮಲಾವಳೀದೇವಿಯು-- ಎಲೈ ಸ್ವಾಮಿಯೇ, ಅರಟ್ಟ ದೇಶದ ಜಯವರ್ಮ ನಿಗೂ ವತ್ಸ ರಾಜನಿಗೂ ಅಜಗಜನ್ಯಾಯ ವಾದ ತಾರತಮ್ಯವಿರುವುದರಿಂದ ವತ್ಸ ರಾಜನಿಗೆ ನಮ್ಮ ರತ್ನಾ ವಳಿಯನ್ನು ಕೊಡು ವುದು ನ್ಯಾಯವಾಗಿಯೂ ಅತ್ಯಂತ ಸಂತೋಷಕರವಾಗಿಯೂ ಇದ್ದರೂ ಮಕ್ಕಳು ಗಳನ್ನು ಕರೆದು ಕೇಳಬಹುದು. ” ಎಂದು ವಿಜ್ಞಾಪಿಸುತ್ತಿರಲು ; - ಅಷ್ಟರಲ್ಲೇ ದ್ವಾರಪಾಲಕಿಯಾದ ಕಲಾವತಿಯು ಬಂದು -- ಎಲೈ ಮಹಾ ರಾಜನೇ, ಸೂರ್ಯಚಂದ್ರರುಗಳು ಏಕಕಾಲದಲ್ಲಿ ಬಂದು ಇರುವರೋ ಎಂಬಂತೆ ನಿಮ್ಮ ಪುತ್ರರುಗಳಾದ ವಿಂದಾನುವಿಂದ ರಾಯರುಗಳು ರಾಜ್ಯ ಕಾರ್ಯವನ್ನು ವಿಜ್ಞಾ ಪನೆಯ ಮಾಡುವುದಕ್ಕಾಗಿ ಬಂದು ಸುಂದರ ಹಜಾರದ ಬಾಗಿಲಲ್ಲಿ ನಿಂದಿರುವರು. 2) ಎಂದು ವಿಜ್ಞಾಪಿಸಲು ; ರಾಯನು ಎಲ್‌ ಕಲಾವತಿಯೇ, ಶೀಘದಿಂದ ಅವ ರನ್ನು ಕರೆದುಕೊಂಡು ಬರುವಳಾಗು ” ಎಂದು ಆಜ್ಞಾಪಿಸಲು ; ಅವಳು ಪೋಗಿ ತ್ವರೆಯಿ೦ದ ಆ ರಾಜಪುತ್ರರುಗಳಿಂದೊಡಗೂಡಿ ರಾಯನ ಮುಂದುಗಡೆಯನ್ನು ಬಂದು ಸೇರಲು ; ರಾಮಲಕ್ಷ್ಮಣರುಗಳ೦ತೆ ಪರಿಶೋಭಿಸುವ ಆ ವಿಂದಾನುವಿಂದರುಗಳು ರಾಯನಿಗೆ ಸಾಷ್ಟಾಂಗವಾಗಿ ನಮಸ್ಕರಿಸುತ್ತ ನಿಂದಿರಲು; ರಾಯನು- ಈಗ ತಾವ ಆಲೋಚಿಸಿ ಇರುವ ಕಾರ್ಯವನ್ನು ಮಕ್ಕಳಿಗೆ ತಿಳಿಹಿಸುವಂತೆ ಮಂತಿ ಪುರೋಹಿತರುಗಳಿಗೆ ಸಂಜ್ಞೆಯಂಗೆಯ್ಯಲು; ಅವರಿತ್ವರು ರಾಜ ಪುತ್ರರುಗಳನ್ನು ರ್ಮಣಿ ಹಟಾರದ ಪಾರ್ಶ್ವಭಾಗವಂ ಪೊಂದಿಸಿ, ಅವರುಗಳಂ ಕುರಿತು,- ಎಲೈ , ರಾಜಪುತ್ರರುಗಳಿರಾ : ನಿಮ್ಮ ಸಾದರಿಯಾದ ರತ್ನಾ ವಳಿಯು ಸಮಸ್ಯವಿದ್ಯೆಗಳಲ್ಲಿ ಕುಶಲ ಕಾಗಿ ವನದಿಂದ ವಿಭೂಷಿತಳಾಗಿ ದ್ದರೂ ಅವಳ ರೂಪಿಗೆ ತಕ್ಕ ವರನು ಎಲ್ಲಿಯೂ ಇಲ್ಲದುದರಿಂದ ನಿಮ್ಮ ಮಾತಾಪಿತೃ ಗಳಿಗೆ ಬಲವತ್ತರವಾದ ವ್ಯಸನವ ಪ್ರಾಪ್ತವಾಗಿರುವ ಸಂಗತಿಯು ನಿಮ್ಮ ಚಿತ್ರಕ್ಕೆ ವೇದ್ಯವಾಗಿ ಇದೆಯಷ್ಟೆ. ಈಗ ಕೌಶಾಂಬಿನಗರಿಗೆ ಅಧಿಪತಿಯಾಗಿ ನಿಮ್ಮ ಚಿಕ್ಕ ಪ್ರನಾದ ಪ ದ್ಯೋತರಾಯನ ಪುತಿ ಯಾದ ವಾಸವದತ್ತಾ ದೇವಿಗೆ ಪತಿಯಾದ ವತ್ಸ ರಾಜನು ರೂಪಿನಿಂದಲು ಗುಣದಿಂದಲ) ವಿಭೂಷಿತನಾಗಿ ಬಹುದೇಶಕ್ಕೆ ಅಧಿಪ ತಿಯಾಗಿರುವನೆಂಬುದು ನಿಮಗೂ ವಿದಿತವಾಗಿಯೇ ಇರಬಹುದು. ಈಗ ಆ ವತ್ಸ ರಾಜನು ನಮ್ಮ ರಾಜೇಂದ್ರನ ಬಳಿಗೆ, ರತ್ನಾವಳಿಯನ್ನು ಕೊಟ್ಟು ಮದುವೆಯನ್ನು