ಪುಟ:ವತ್ಸರಾಜನ ಕಥೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, - ಭಾವಜ್ಜರಾದ ಸ್ವಾಮಿಯವರಿಗೆ ವಿಶೇಷವಾಗಿ ವಿಜ್ಞಾಪಿಸುವುದಕ್ಕೆ ಸಾಮರ್ಥ್ಯವಿಲ್ಲ ? ವೆಂದು ಬಿನ್ಲೈಸಲು ; ರಾಯನು ಎಲ್ವೆ ಮಂತ್ರಿಯೇ, ನೀನು ಹೇಳಿದ ವಾಕ್ಯವೇ ಯಥಾರ್ಥವಾದುದು. ಆದರೆ ಮುಂದೆ ಮಾಡತಕ್ಕ ಕಾರವು ಹೇಗೆ ? ಎಂದು ನುಡಿ ಯಲು ; ದೇವಶರ್ಮನು-II ಅಯ್ಯಾ, ರಾಜೋತ್ತಮನೇ, ಕೇಳು. ಈಗ ನಿನ್ನ ಆಜ್ಞೆಯನ್ನು ಅತಿಕ್ರಮಿಸಿದಂಧ ನಿನ್ನ ಪುತ್ರ ರುಗಳಿಗೆ ಶಿಕ್ಷೆಯನ್ನುಂಟುಮಾಡಿ, ಆಬಳಿಕ ವಿವಾಹ ಕಾರದಲ್ಲಿ ಉದ್ಯುಕ್ತನಾಗುವುದು ಯುಕ್ತವಲ್ಲ. ಈ ನಿನ್ನ ಸುತ | ರುಗಳು ತಿಳಿಯದಂತೆ ರತ್ನಾ ವಳಿಯನ್ನು ಮಂತ್ರಿಯೊಡಗೂಡಿಸಿ ಹಡಗನ್ನು ಹತ್ತಿಸಿ ಗೋಪ್ಯವಾಗಿ ಕೌಶಾಂಬೀನಗರಿಗೆ ಕಳುಹಿಸಿ ವಿವಾಹಕಾರವ ಬಳೆಯಿಸುವುದು ಯುವ, ಆ ಬಳಿಕ ನಿನ್ನ ಮಕ್ಕಳಾಗಲಿ ಇನ್ನಾ ರೇ ಆಗಲಿ ಏನನ್ನೂ ಮಾಡಲಾ ರರು. ಇದಲ್ಲದೆ ವಿಂದಾನುವಿಂದರುಗಳು ತಿಳಿಯುವಂತೆ ಕಳುಹಿಸಿದಲ್ಲಿ ಏನಾದರೂ ಒಂದು ವಿಪರೀತವಾದ ಕಾರವನ್ನು ನಕಲಿಸದೆ ಬಿಡರು, ಮತ್ತು ಗೃಹಕೃತ್ಯ ದಲ್ಲಿ ಕಲಹವನ್ನು ೦ಟುಮಾಡಿಕೊಂಡಲ್ಲಿ ಶತು ಗಳಾದ ರಾಯರು ಈ ವಾರ್ತೆಯಂ ಕೇಳಿ ಹಾಸ್ಯನಂ ಗೆಯ್ಯದೆ ಇರರು, ಯಾವ ಕಾರವನ್ನಾದರೂ ಉಪಾಯದಿಂದಲೇ ನಡೆಯಿಸುವುದು ಯುಕ್ತವಾಗಿರುವುದು ಎಂದು ವಿಜ್ಞಾಪಿಸಲು ; ಆ ಪುರೋಹಿತನಾ ಡಿದ ವಾಕ್ಯಕೆ ರಾಯನೂ ಕಮಲಾವಳೀದೇವಿಯ, ಮಂತ್ರಿಯ ಸಹ ಸಂತೋ। ಷಭರಿತರಾಗಲು ; ರಾಯನು ಭಾವಮೈದುನನಾಗಿ ಮಂತ್ರಿಯಾಗಿರುವ ವಸುಭೂ ತಿಯಂ ಕುರಿತು-ಎಲೈ, ಮಂತ್ರಿಯೇ, ನೀನು ಪೋಗಿ ನಿನಗೆ ಆಪ್ತರಾದ ಸೇವ ಕರನ್ನು ಕರೆದುಕೊಂಡು ಒಂದು ಹಡಗನ್ನು ಸನ್ಮಾ ಹನಂ ಗೆಸಿ ಸಮುದ್ರ ತೀರ ದಲ್ಲಿ ಕಾದಿರುವನಾಗು ' ಎಂದು ಅಪ್ಪಣೆಯನ್ನಿ (ಯಲು ; ಮಂತ್ರಿಯು ಆಶ್ಚಯಾ ದಂತೆ ನಡೆದುಕೊಳ್ಳುವೆನೆಂದು ನುಡಿದು ಪೋಗಲು ; ರಾಯನು – ( ಅಯ್ಯಾ, ಪುರೋಹಿತರೇ, ಕೌಶಾಂಬೀನಗರಿಯಿಂದ ಬಂದಿರುವ ಯಾರನಿಗೆ ಬಹುಮಾನವಂ ಗೈದು.ಮಂತ್ರಿಯೊಡಗೂಡಿಸಿ ಹಡಗನ್ನು ಹತ್ತಿಸುವರಾಗಿ ?” ಎಂದು ಅಪ್ಪಣೆಯನ್ನಿತ್ತು ಕಳುಹಿಸಿ, ಮನ್ಮಥನ ಸೌಭಾಗ್ಯದೇವತೆಯಂತೆ ಮಂಗಳಕರಳಾಗಿ ಮೆರೆಯುತ್ತಿ ರುವ ರತ್ತಾ ವಳೀದೇವಿಯಂ ಕರೆಯಿಸಿ ಒತ್ತಿನಲ್ಲಿ ಕುಳ್ಳಿರಿಸಿಕೊಂಡು ಮಂಡೆಯಂ ಸವರುತ್ತ- ಎಲೌ ಪುತಿ ಯೇ, ನಿನಗೆ ಅಕ್ಕನಾದ ವಾಸವದತ್ತಾ ದೇವಿಗೆ ಪತಿ ಯಾದ ವತ್ಸ ರಾಜನಿಗೆ ನಿನ್ನ೦ ಕೊಟ್ಟು ಮದುವೆಯಂ ಗೆಯ್ಯಬೇಕೆಂದು ಇಚ್ಛೆಸಿರು ವೆನು, ನೀನೂ ನಿನ್ನ ಅಣ್ಣಂದಿರುಗಳಾದ ವಿಂದಾನುನಿಂದರುಗಳಂತೆ ನನ್ನ ಆಜ್ಞೆ ಯನ್ನು ಮೀರತಕ್ಕವಳೋ, ಆಜ್ಞಾನುಸಾರವಾಗಿ ನಡೆಯತಕ್ಕವಳೋ ಪೇಳು ? ಎಂದು ನುಡಿಯಲು ; ಆ ರತ್ನಾವಳಿಯು ಸಮೀಪದಲ್ಲಿ ಕುಳಿತಿರುವ ತಾಯಾದ ಕಮ ಲಾವಳಿಯ ಮುಖವಂ ನೋಡಿ - ಎಲೈ ಸ್ವಾಮಿಯೇ, ನಿಮ್ಮ ಆಜ್ಞೆಯನ್ನು ಮೀರಿ ನಡೆದು ನಿಮ್ಮ ಚಿತ್ರಕ್ಕೆ ವ್ಯಸನವನ್ನುಂಟುಮಾಡುವ ನಾನು ಪುಟ್ಟ ಪ್ರಯೋಜನ