ಪುಟ:ವತ್ಸರಾಜನ ಕಥೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y - ಕರ್ಣಾಟಕ ಕಾವ್ಯಕಲಾನಿಧಿ, - ವೇನು ” ? ಎಂದು ನುಡಿಯಲು ; ಆ ವಾಕ್ಯವಂ ಕೇಳು ರಾಯನು ಅಧಿಕ ಸಂತೋ। ಷಭರಿತನಾಗಿ, ಆ ರತ್ನಾ ವಳಿಯ ಮುಖಕಮಲವಂ ಮುದ್ದಿಸಿ, ಕಮಲಾವಳಿಯಂ ಕುರಿತು-- ಎಲ್‌ ದೇವಿಯೇ, ನಿನ್ನ ಪುತಿ ಯಾದ ರತ್ನಾ ವಳಿಯನ್ನು ಸಲ್ಯಾಭರಣ ಗಳಿಂದಲೂ ಅಲಂಕರಿಸುವಳಾಗು ” ಎಂದು ನುಡಿದು, ಎಲೌ ಪುತ್ರಿಯೇ, ನಿನ್ನ ಮುಖವು ಎನಗೆ ಇನ್ನು ದುರ್ಲಭವಾಗಿರುವುದು. ಲೋಕದಲ್ಲಿ ಹೆಣ್ಣು ಮಕ್ಕಳು ಗಳನ್ನು ಹೆತ್ತವರಿಗೆ ದುಃಖವು ಸಿದ್ದವಾಗಿರುವುದೆಂಬ ವೂಜ್ಯರ ವಾಕ್ಯವು ಯಥಾ ಈವೇ ಸರಿ ” ಎಂದು ಕಂಬನಿಯಂ ಬಿಡುತ್ತಿರಲು ; ಕಮಲಾವಳೀದೇವಿಯು ರತ್ನಾವಳಿಯನ್ನು ಸಲ್ವಾಭರಣಗಳಿಂದ ಅಲಂಕರಿಸಿ, ತನ್ನ ತೊಡೆಯಲ್ಲಿ ಕುಳ್ಳಿರಿಸಿ( ಎಲೌ ಪುತ್ರಿಯೇ, ಪುಟ್ಟಿದು ಮೊದಲಾಗಿ ಇದುವರೆಗೂ ಒಂದು ದಿನವಾದರೂ ಎನ್ನ ಮಗ್ಗುಲಂ ಬಿಟ್ಟು ಮಲಗಿದವಳಲ್ಲ. ಹೆಣ್ಣು ಮಕ್ಕಳಂ ಪೆತ್ತಮೇಲೆ ಸರ ಪುರುಷನಿಗೆ ಕೊಟ್ಟು ಪುಣ್ಯವಂತರಾದವರು ನೇತ್ರಾನಂದವನ್ನು ಅನುಭವಿಸುತ್ತಿರು ವರು. ಮಂದಭಾಗ್ಯಳಾದ ನಾನು ಅಂಥ ಪುಣ್ಯಕೆ ಯೋಗ್ಯಳಾಗಲಿಲ್ಲ !?” ಎಂದು ಮಗಳನ್ನು ತಬ್ಬಿಕೊಂಡು, ರೋದನವಂ ಗೆಲುದ್ಯುಕ್ತಳಾಗಲು ; ರಾಯನು ದೇವಿಯಂ ಏಕಾಂತ ಸ್ಥಳಕ್ಕೆ ಕರೆದು- ಎಲೌ ಕಾಂತೆಯೇ, ಕೇಳು, ಈ ಸಮ ಯದಲ್ಲಿ ಮಗಳಿಗೆ ದುಃಖವು ಪುಟ್ಟ ದಂಥ ಮಾತುಗಳನ್ನು ಹೇಳಿ ಕಳುಹಿಸಿಬೇಕ ಲ್ಲದೆ ನೀನು ರೋದನವಂ ಗೆಯ್ಯುವದು ನ್ಯಾಯವಲ್ಲ. ಒತ್ತಿನಲ್ಲಿರುವ ಊಳಿಗದ ಪೆಣ್ಣುಗಳು ನೀನು ಅಳುವುದಂ ಕಂಡು ಏನೋ ಒಂದು ಸಂದೇಹವಂ ಪೊಂದುವರು. ಈ ಕಾಲಕ್ಕೆ ಸರಿಯಾಗಿ ಧೈಲ್ಯವನ್ನು ಅವಲಂಬಿಸಬೇಕು ' ಎಂದು ನುಡಿಯಲು ; ದೇಯು ವ್ಯಸನವಂ ತೊರೆದು ರತ್ನಾ ವಳಿಯಂ ಕುರಿತು - ಎಲೌ ಪುತ್ರಿಯೇ, ಕೌಶಾಂಬಿಯ ಪಟ್ಟಣವಂ ಪೊಂದಿ ವಿವಾಹವಾದ ಮೇಲೆ ಪತಿಯಾದ ವತ್ಸ ರಾಜನಲ್ಲಿ ಗರ್ವವನ್ನು ತಾಳದೆ, ಸ್ವವ ದಲ್ಲಾದರೂ ಪತಿಯಲ್ಲಿ ಭಕ್ತಿಯಂ ಬಿಡದೆ, ದುಷ್ಟ ರಾದ ಸತಿಯರ ದುರ್ನೀತಿಗೆ ಕಿವಿಯಂ ಕೊಡದೆ, ಸವತಿಯಾದ ವಾಸವದತ್ತಾ ದೇವಿ ಯಲ್ಲಿ ವೈರವಂ ಸಂಪಾದಿಸದೆ, ಹಿಂದಾದ ಐಶ್ವರದ ಮೋಡಿಯಂ ವಹಿಸದೆ, ಸೇವಕ ರಾದ ಸ್ತ್ರೀಯರಿಗೆ ಹೇರಳವಾದ ಆಯಾಸವಾದರೂ ಬೀರದೆ, ಮರೆತಾದರೂ ಪತಿ ಯಲ್ಲಿ ಸುಳ್ಳು ಮಾತುಗಳಂ ನುಡಿಯದೆ, ಗುರುಹಿರಿಯರ ವಾಕ್ಯಗಳನ್ನು ಮೀರಿ ನಡೆ ಯದೆ, ಪತಿಹಿತಕರವಾದ ನಾರಿಯಲ್ಲಿ ವೈರವಂ ತಾಳದೆ, ಪ್ರಾಣ ಕಷ್ಟವಾದರೂ ಪಾತಿವ್ರತ್ಯಕ್ಕೆ ಹಾನಿಯಂ ಸಂಪಾದಿಸದೆ, ಪತಿಯೇ ಪರಲೋಕ ಬಂಧುವೆನುತಲೂ ಅವನ ಮುಖದರ್ಶನವೇ ಸಮಸ್ಯವಾದ ದೇವತಾದರ್ಶನವೆನುತಲೂ ಅವನಿಗೆ ವಿಹಿತ ವಾದ ಕಾರವಂ ಗೆಯ್ಯುವುದೇ ಪುಣ್ಯಕರವಾದ ವ್ರತಾಚರಣೆಯೆನುತಲೂ ಅವನ ಕಥೆಯನ್ನು ಕೇಳುವುದೇ ಪುರಾಣಶ್ರವಣವೆನುತಲೂ ಅವನ ಗುಣಗಳನ್ನು ಪೊಗಳು ವುದೇ ಮಂತ್ರ ಜಪವೆನುತಲೂ ಅವನಿಗೋಸುಗ ಸಂಚಾರವಂ ಗೆಯ್ಯುವುದೇ ಪುಣ್ಯ