ಪುಟ:ವತ್ಸರಾಜನ ಕಥೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥ, - ಯಾತ್ರೆಯೆನುತಲೂ ಮನೋವಾಕ್ಕಾಯಕಗಳಲ್ಲಿ ತಿಳಿದು ನಡೆದೆಯಾದರೆ ಪತಿವು ತಾಶಿರೋಮಣಿಯೆಂದು ಲೋಕದಲ್ಲಿ ಪ್ರಸಿದ್ದಿಯಂ ಪಡೆದು ಇಹಪರಲೋಕಗಳ ಸೌಖ್ಯಕ್ಕೂ ಯೋಗ್ಯಳಾಗುತ್ತ ಇದ್ದೀಯೆ. ಪತಿಭಕ್ತಿಯಂ ತಾಳಿ ನಡೆದ ಅನ ಸೂಯೆ ಅರುಂಧತಿ ಮೊದಲಾದ ಪತಿವತಾಸ್ತ್ರೀಯರ ಕಥೆಯಂ ಕೇಳಿರುವೆಯಷ್ಟೆ. ಲೋಕದಲ್ಲಿ ಯಾವ ಸ್ತ್ರೀಯು ಪತಿಯಲ್ಲಿ ವಿರೋಧವಂ ಸಂಪಾದಿಸಿಕೊಂಡು ವ್ರತಾ ಚರಣೆ ತೀರ ಯಾತ್ರೆ ದಾನಧರ್ಮಗಳನ್ನು ಮಾಡುತ್ತಿರುವಳೊ ಅವುಗಳೆಲ್ಲಾ ಬೂದಿಯಲ್ಲಿ ಹೋಮವಂ ಮಾಡಿದಂತೆ ನಿಷ್ಪಲಂಗಳಾಗುತ್ತಿರುವುವು. ಆದುದರಿಂದ ಯಾವ ಸ್ತ್ರೀಯರಿಗೂ ಪತಿಭಕ್ತಿಯೇ ಮುಖ್ಯವಾಗಿರುವುದು, ತಾಯಿತಂದೆಗಳಾದ ನಾವು ಯವನ ಬರುವವರೆಗೂ ಸಂರಕ್ಷಕರೇ ಹೊರತು ಆಬಳಿಕ ಸಂರಕ್ಷಿಸಲಾರೆವು. ನೀನು ಸಮಸ್ತ ವ್ಯಸನವಂ ತೊರೆದು ಸತಿಯಂ ಸೇರಿ ಸುಖದಲ್ಲಿರುವ ಮಾರ್ಗವನ್ನು ಅನುಸರಿಸುವಳಾಗು ” ಎಂದು ನೀತಿಮಾರ್ಗವಂ ಬೋಧಿಸಲು ; ರತ್ನಾ ವಳಿಯು ತಾಯಿ ಯ ಮುಖವ ನೋಡಿ ಮುತ್ತಿನ ಸರದಂತೆ ಕಣ್ಣೀರುಗಳಂ ಬಿಡುತ, ಎಲೆ ತಾಯೆ, ನಾನು ಸಾಕಿದ ಗಿಳಿಮರಿ ಹುಲ್ಲೆ ಕೋಗಿಲೆ ಅಂಚೆ ನವಿಲು ಪಾರಿವಾಳ ಚಕ್ರವಾಕ ಮುಂತಾದ ಪಕ್ಷಿಗಳನ್ನೂ, ಪ್ರಮೋದ ವನದಲ್ಲಿ ಸಾಕಿದ ಸೀಮಾವು ಸುರಗಿ ಸುರಹೊನ್ನೆ ಮುಂತಾದ ಮರಗಳನ್ನೂ, ಚಾಜಿ ಸೇವಂತಿಗೆ ಮೊಲ್ಲೆ ಮಲ್ಲಿಗೆ ಮುಂತಾದ ಲತೆಗಳೂ ಒಂದು ಬಾರಿ ನೋಡಿ ಬರುವೆನು ?” ಎಂದು ನುಡಿದು, ಪೋಗು ತಿರಲು ; ಕಮಲಾವಳಿಯು ಮಗಳ ಸಲ್ವಾಂಗಮಂ ನೋಡಿ ದೃಷ್ಟಿ ತಾಗುವುದೆಂದು ತನ್ನ ನೇತ್ರಗಳನ್ನು ಹಿಂದಿರುಗಿಸಿ, ಈ ನನ್ನ ಪುತ್ರಿಯು ವತ್ಸ ರಾಜನೊಡನೆ ಸೌಖ್ಯ ದಲ್ಲಿ ಬಾಳುವುದನ್ನು ನೋಡಿದೆನಾದರೆ ನನ್ನ ಜನ್ಮವು ಸಾರಕವಾಗುವುದೆಂದು ಪತಿ ಯಾದ ವಿಕ್ರಮಬಾಹುರಾಯನೊಡನೆ ನುಡಿಯುತ್ತಿರಲು ರತಾ ವಳಿಯು ಪತ್ನಿಶಾಲೆಗೆ ಪೋಗಿ ಬರುತ್ತಾ ಅಲ್ಲಿ ಗೊತ್ತು ಗಾತಿಯಾಗಿರುವ ಮಣಿಮಾಲೆಯಂ ಕರೆದು- ಎಲೆ ಬಾಲೆ, ನಾನು ಅ೦ತಃಪುರದಲ್ಲಿದ್ದುಕೊಂಡು ಗೌರಿಯ ನೋ೦ಪಿಯನ್ನು ಮಾಡಬೇಕಾಗಿ ಇರುವುದರಿಂದ ನಾನು ಮರಳಿ ಇಲ್ಲಿಗೆ ಬರುವವರೆಗು ಸುತ್ತಲೂ ಮುತ್ತಿನ ಬಲೆಗಳಂ ಬಿಟ್ಟು ಎತ್ತಲೂ ಹಾರಿ ಹೋಗದಂತೆ ಈ ಪಕ್ಷಿಗಳನ್ನು ಸಾಕುವುದಲ್ಲದೆ, ನವಿಲುಗಳಿಗೆ ನಾಟ್ಯವನ್ನೂ, ಗಿಳಿಗಳಿಗೆ ನಡೆ ಯನ್ನೂ , ಪಾರಿವಾಳಗಳಿಗೆ ದೂರವಾಗಿ ಹಾರುವ ಆಟಗಳನ್ನೂ, ಹಂಸೆಯ ಮರಿಗಳಿಗೆ ನಡೆಯನ್ನೂ ಕಲಿಸುತ್ತ ಕಾಲಕಾಲಕ್ಕೆ ಮೇವುಗಳನ್ನು ಹಾಕಿ ಸಲಹುತ್ತಿರುವುದು? ಎಂದು ಅಪ್ಪಣೆಯನ್ನಿತ್ತು, ಅಲ್ಲಿಂದ ಪ್ರಮೋದವನಕ್ಕೆ ಪೋಗಿ ಸಮಸ್ತ ವೃಕ್ಷಲತೆಗಳಂ ಪಾಲಿಸುವ ನೀಲಾವತಿಯಂ ಕರೆದು- ಎಲೆ ಕಾಂತೆಯೆ, ಇನ್ನು ಮೇಲೆ ನಾನು ಇತ್ತಲು ಬರುವುದಕ್ಕೆ ಕಾರಣವನ್ನು ಪತ್ನಿಶಾಲೆಯ ಮಣಿಮಾಲೆಗೆ ಪೇಳಿರುವೆನು. ಆದರೆ ಇನ್ನು ಮೇಲೆ ವೃಕ್ಷಲತೆಗೆ ಕಾಲಕಾಲವರಿತು ಮಾಡುವ ದೋಹಳಕ್ರಿಯೆ