ಪುಟ:ವತ್ಸರಾಜನ ಕಥೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ - ಕರ್ಣಾಟಕ ಕಾವ್ಯಕಲಾನಿಧಿ, - ಗಳಂ ಮಾಡದೆ ಮರೆತಿರುವೆಯಾದರೆ ತಕ್ಕ ಶಿಕ್ಷೆಗೆ ಒಳಗಾಗುವೆ' ಎಂದು ಕಟ್ಟು ಮಾಡಿ, ತಾನು ಸಾಕಿದ ದುಂಡುಮಲ್ಲಿಗೆಯ ಬಳ್ಳಿಯಲ್ಲಿ ಮೂರುನಾಲ್ಕು ಪುಷ್ಪಗ ಳನ್ನು ಕೊಯ್ದು ಕರದಲ್ಲಿ ಪಿಡಿದು ಹಿಂದಿರುಗಿ ಬರುತ್ತಾ, ( ಎಲೆ, ರಂಭಯ೦ತೆ ರಾಜಿ ಸುವ ರತ್ತಾ ವಳಿಯೆ, ಗುಟುಕುದಂಬುಲವನ್ನೀಯದೆ ಸಲೀಲೆಯಿಂದ ಮೆಲ್ಲಮೆಲ್ಲನೆ ಎಲ್ಲಿಗೆ ಪೋಗುತ್ತಿರುವೆ ? ?” ಎಂದು ನುಡಿಯುವ ಅರಗಿಳಿಗಳ ಮಾತುಗಳಂ ಕೇಳಿ, ಮನಮರುಗಿ- ಈ ರೀತಿಯಾದ ವಸ್ತುಗಳ ಬಿಟ್ಟು ಪೋಗುವುದು ಒಹುಕಷ್ಟವಾಗಿರು ವುದು, ಕೆಟ್ಟ ದೈವವು ಸ್ತ್ರೀಯಾಗಿ ಎನ್ನನ್ನು ಏಕೆ ಹುಟ್ಟಿಸಿತೋ, ಎಂದು ಬಾರಿ ಬಾರಿಗೂ ಹೇರಳವಾದ ನಿಟ್ಟುಸಿರುಗಳಂ ಬಿಡುತ್ತಾ ಬಂದು, ತನ್ನ ನಡೆಗೆ ಕಡೆಯ ಈು ೦ಟುಮಾಡಿ, ಅಲ್ಲಿರುವ ತಾನು ಸಾಕಿದ ಹುಲ್ಲೆ ಯ ಮರಿಯಂ ವೈದಡಹಿ ಮಣಿಮಾ ಲೆಯಂ ಕರೆದು- ಎಲೆ, ಕಾಂತೆಯೇ, ಸತ್ವ ಮಂಗಳೆಯೆಂಬ ಈ ಹುಲ್ಲೆ ಮರಿಯನ್ನು ಪಿಡಿದು ಮೃಗಶಾಲೆಯಂ ಪೊಂದಿಸು ' ಎಂದು ನುಡಿದು ಬರುತ್ಯ, ಅಲ್ಲಲ್ಲಿ ನಿಂತು ಹಿಂದಿರುಗಿ, ತಾನು ಸಾಕಿದ ಗಿಣಿ ಕೋಗಿಲೆಗಳನ್ನು ನೋಡುತ್ತ, ಮೆಲ್ಲಮೆಲ್ಲನೆ ಹಟ್ಟೆ ಗಳನ್ನಿಡುತ್ತ ಬರುತ್ತಿರಲು; - ಇತ್ತಲು ವಿಕಮಬಾಹುರಾಯನು (ಎಲ್‌ ದೇವಿಗೆ, ರತ್ನಾ ವಳಿಯು ಪೋಗಿ ಬಹಳ ಹೊತ್ತಾದುದು, ಪ್ರಯಾಣಲಗ್ನವ್ರ ಮಿಾರಿಹೋಗುವದು ?” ಎ೦ದು ನುಡಿಯಲು ; ದೇವಿಯು ತಾನೇ ಪೋಗಿ ರತ್ನಾ ವಳಿಯನ್ನು ಕರೆತಂದು ಪೀಠದಲ್ಲಿ ಕುಳ್ಳಿರಿಸಿ, ಮುತ್ತುಗಳನ್ನು ಮರುಳುದು೦ಬಿರಿಸಿ, ಅರಿಸಿನ ಕುಂಕುಮಗಳಿಂದಲಂಕರಿಸಿ, ಗಂಧ ತಾಂಬೂಲ ಫಲಪುಷ್ಪಗಳನ್ನಿ ತು, ಅಕ್ಷತೆಯಂ ಕರದಲ್ಲಿ ಪಿಡಿದು,-- ಮಾರ್ಗ ದಲ್ಲಿ ನಿನಗೆ ಶುಭವಾಗಲಿ! ವತ್ಸ ರಾಜನಿಗೆ ಪತ್ನಿಯಾಗಿ ಸತ್ವ ಸೌಬ್ಬವನ್ನೂ ಅನುಭ ವಿಸಿ ಪ್ರತಾಪಶಾಲಿಗಳಾದ ಪುತ್ರರನ್ನು ಪಡೆಯುವಳಾಗು ? "” ಎಂದು ಅವಳ ಮಂಡೆ ಯಲ್ಲಿ ಅಕ್ಷತೆಗಳ೦ ಚೆಲ್ಲಿ, ಮುಖದಲ್ಲಿ ಮುತ್ತನ್ನಿ ೬ಟ್ಟು, ಸಂತೋಷವಾಗಿ ನೋಡು ತಿರಲು ; ಅಷ್ಟರಲ್ಲೇ ಪುರೋಹಿತನು ಬಂದು-17 ಎಲೈ ರಾಜೇಂದ್ರನೇ, ಸೂರನು ಪಶ್ಚಿಮದಿಕ್ಕೆ೦ಬ ಕಾಂತೆಯನ್ನು ಪೊಂದಿ ಐದು ಗಳಿಗೆಯಾಗಿ ಲಗ್ನವು ವಿಾರಿಪೋ ಗುತ್ತಿರುವುದು, ಮಂತ್ರಿಯು ನಿನ್ನ ಅಪ್ಪಣೆಯಾದಂತೆ ಹಡಗನ್ನು ಸನ್ಮಾ ಹವಂ ಗೆಯ್ದು ಕಾದಿರುವನು. ಅಂತಃಪುರದ ಬಾಗಿಲಲ್ಲಿ ಪಾಲಕಿಯನ್ನು ತಂದು ಇರಿಸುವಂತೆ ಹೇಳಿ ರುವೆನು ?” ಎಂದು ನುಡಿಯಲು ; ದೇವಿಯು ಕುಲಕ್ಕೆ ಮಾಗತವಾಗಿ ಪಾರತಿಯ ವರದಿಂದ ಬಂದ ರತ್ನ ಮಾಲೆಯನ್ನು ತಂದು ರತ್ನಾ ವಳಿಯ ಕತ್ತಿಗೆ ಹಾಕಿ ಆಪ್ತರಾದ ಕೆಲವು ಸಖಿಯರನ್ನು ಸಂಗಡ ಹೋಗುವಂತೆ ನೇಮಿಸಿ, ಅಡಿಗಡಿಗೂ ಮಗಳ ಆಲಿಂ ಗನವಂ ಗೈದು, ಮುದ್ದಾಡುತ್ತಿರಲು ; ರಾಯನು-- ಎಲೆ ದೇವಿಯೇ, ಎಷ್ಟು ಆಲಿಂಗನವನ್ನು ಗೈದರೂ ಮನದಲ್ಲಿರುವ ಪ್ರೇಮವ ತಪ್ಪುವುದೇ ? ಏಕೆ ತಡವಂ