ಪುಟ:ವತ್ಸರಾಜನ ಕಥೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ - ವತ್ಸರಾಜನ ಕಥೆ. -- ಮಾಡುತ್ತಿರುವೆ ? ?” ಎನ್ನಲು ; ರತ್ನಾ ವಳಿಯು ಕಣ್ಣುಗಳಲ್ಲಿ ನೀರನ್ನು ತುಂಬಿ ತಂದೆ ತಾಯಿಗಳ ಪಾದಗಳಿಗೆ ವಂದನೆಯಂ ಗೈದು, ಪುರೋಹಿತನು ತೋರಿಸುವ ಮಾರ್ಗ ವನ್ನು ಅನುಸರಿಸಿ ಹೋಗುತ್ತಿರಲು ; ರಾಯನು ಮಗಳ ಗಲ್ಲವಂ ಮುದ್ದಿಸಿ ಎಲೆ ತಾಯೆ, ನಮ್ಮ ವಂಶಕ್ಕೂ ನಿನ್ನ ಗಂಡನ ವಂಶಕ್ಕೂ ಸಂಪೂರ್ಣವಾದ ಕೀರ್ತಿಯ ನುಂಟುಮಾಡುತ್ತ ಬಾಳುವಳಾಗು ! ೨” ಎಂದು ಅವಳ ಕರವಂ ಪಿಡಿದು, ಕರಕೊಂಡು ಬಂದು, ಅಂತಃಪುರದಲ್ಲಿ ಇರುವ ಪಾಲಕಿಯಲ್ಲಿ ಕುಳ್ಳಿರಿಸಿ, ಅಯ್ಯಾ, ಪುರೋ ಹಿತರೇ, ಸಮುದ್ರ ಮಧ್ಯದಲ್ಲಿ ಹಡಗನ್ನು ನಡೆಸುವವನಂ ಜಾಗರೂಕನಾಗಿರತಕ್ಕು ದೆಂದು ಹೇಳುವಂತೆ ಮಂತ್ರಿಗೆ ಹೇಳಿ ಮಗಳನ್ನು ಹಡಗನ್ನು ಹತ್ತಿಸಿ ಬರುವ ರಾಗಿ ” ಎಂದು ಅಪ್ಪಣೆಯನ್ನಿ ತು, ಮಗಳ ಅಗಲಿಕೆಯಿ೦ ಪುಟ್ಟಿದ ಚಿಂತೆಯನ್ನು ಹೃದಯದಲ್ಲಿ ತಾಳಿ, ಕಣ್ಣೀರುಗಳನ್ನು ಕರವಸ್ತ್ರದಿಂದ ಒರಸುತ್ತ, ಅಂತಃಪುರವನ್ನು ಸೇರಲು ; ಕಮಲಾವಳಿಯು ಮಗಳು ಸ್ಮರಿಸಿ ಪೇಳ ಬಾರದ ವ್ಯಸನವಂ ತಾಳಿ, “ ಎನ್ನ ಮಗಳು ಪಾರವಿಲ್ಲದ ಸಮುದುವಂ ದಾ೦ಪಿ ವತ್ವ ರಾಜನಿಗೆ ಪತ್ನಿಯಾದಳೆಂಬ ವಾರ್ತೆಯನ್ನು ಕೇಳಿದಲ್ಲದೆ ಎನ್ನ ಹೊಟ್ಟಿಯಲ್ಲಿ ಪುಟ್ಟದ ಉರಿಯು ಆರಲಾರದು ! ? ಎಂದು ಹಾಸಿಗೆಯ ಮೇಲೆ ಬಿದ್ದು ಹೊರಳುತ್ತಿರಲು ; ಇತ್ತಲು ಪುರೋಹಿತನು ಸವಿಯರಿಂ ಸಹಿತಳಾದ ರತ್ನಾ ವಳಿಯನ್ನು ಅತಿ ಜಾಗರೂಕನಾಗಿ ಹಡಗನ್ನು ಹಸಿ ಮಂತ್ರಿಯನ್ನು ಕುರಿತು ಅಯ್ಯಾ, ಮಂತ್ರಿ ಗಳೇ, ಸಮುದ್ರ ಮಧ್ಯದಲ್ಲಿ ಸಂಚರಿಸುವರು ಅಧಿಕ ಪ್ರಯಾಸವೆಂಬುದು ನಿಮ್ಮ ಚಿತ್ರಕ್ಕೆ ವೇದ್ಯವಾಗಿರುವಲ್ಲಿ ವೇಳತಕ್ಕುದೇನು ?” ಎಂದು ನುಡಿದು, ಹಿಂದಿರುಗಿ, ಅರಮನೆಯ೦ ಕುರಿತು ಬರಲು; ಅತ್ತಲು ಮಂತ್ರಿಯು-ಧ್ವಜಗತವನ್ನು ಎತ್ತಿಕಟ್ಟಿ, ಹಡಗನ್ನು ನಡೆಸುವಂತೆ ಅಪ್ಪಣೆಯನ್ಶಿಯಲು; ರತಾ ವಳಿಯು ತನ್ನ ಬಲಗಣ್ಣು ಹಾರುವುದನ್ನು ತಿಳಿದು, ಹಡ ಗಿನ ಧ್ವಜಸಠದಲ್ಲಿ ಕುಳಿತು ಕೂಗುತ್ತಿರುವ ಗೂಗೆಯ ಧ್ವನಿಯಂ ಕೇಳಿ, ತನ್ನ ಸವಿಾಪದಲ್ಲಿ ಕುಳಿತಿರುವ ಕಾತ್ಯಾಯನಿಯೆಂಬ ಕಾಂತೆಯಂ ಕುರಿತು ಎಲೆ ಕಾತ್ಯಾಯನಿಯೇ, ನನ್ನ ಬಲಗಣ್ಣು ಹಾರುವುದಕ್ಕೂ ಹಡಗಿನ ಧ್ವಜದಂಡದಲ್ಲಿ ಮ೦ಡಿಸಿ ಕೂಗುವ ಆ ಗೂಗೆಯ ಶಬ್ದ ಕೂ ಏನು ದುಷ್ಟ ಫಲವು ಅನುಭವಿಸತಕ್ಕು ದೋ ತಿಳಿಯಕೂಡದು ! ?” ಎಂದು ನುಡಿಯಲು ; ಅಷ್ಟರಲ್ಲೇ ಪ್ರಳಯಕಾಲದ ಚಂಡಮಾರುತದಂತೆ ಬಿರುಸಾದ ಸುಳಿಗಾಳಿಯು ಬಂದು ಹಡಗನ್ನು ಮಾರ್ಗವಂ ತಪ್ಪಿಸಿ ಇನ್ನೊಂದು ಮಾರ್ಗವಾಗಿ ತೆಗೆದುಕೊಂಡು ಪೋಗಲು ; ಅಷ್ಟರಲ್ಲೇ ಆ ಹಡಗು ಸಮುದ್ರ ಮಧ್ಯದಲ್ಲಿರುವ ಮರ್ಮರವೆಂಬ ಸರತದ ಕೋಡುಗಲ್ಲಿಗೆ ಬಡಿದು ಕುಲಾಲಃಕಕದಂತೆ ತಿರುಗಿ ತುಂಡುತುಂಡಾಗಲು;