ಪುಟ:ವತ್ಸರಾಜನ ಕಥೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕಟಕ ಕಾವ್ಯಕಲಾನಿಧಿ - ಆಗ ಅಲ್ಲಿದ್ದ ರತ್ನಾ ವಳಿಯ ಮ೦ತಿ ಯ ಸಖಿಯರೂ ಸಹ ಸಮಸ್ತ ಜನರೂ ಸಮುದ್ರದಲ್ಲಿ ಮುಳುಗಿಹೋಗಲು ; ಅಗ್ನಿ ಅರಣ್ಯ ಬೆಟ್ಟ ಸಮುದಇವುಗಳ ಮಧ್ಯದಲ್ಲಿಯಾಗಲಿ, ಇವಲ್ಲದೆ ಇನ್ನು ಯಾವ ದುಷ್ಟ ಸ್ಥಳದಲ್ಲಿಯಾಗಲಿ ಇದ್ದ ಮನುಜನನ್ನು ಪೂರೈಪುಣ್ಯವು ಸಂರಕ್ಷಿಸುವುದೆಂಬ ವಾಕ್ಯವನ್ನು ಯಥಾ ರ್ಥವಂ ಗೆಯ್ಯಲೋಸುಗ ಆ ರತ್ನಾ ವಳಿಯ ಪೂರ್ವಪುಣ್ಯವು ಒಡೆದ ಹಡಗಿನ ಒಂದು ಹಲಗೆಯನ್ನು ದೊರಕಿಸಲು ; ಆ ರತ್ನಾ ವಳಿಯು ಸ್ವಲ್ಪವಾದ ನೀರಂ ಕುಡಿ ದು ಮಹಾಭೀತಿಯಿಂದೊಡಗೂಡಿ ದಿಕ್ಕುದಿಕ್ಕುಗಳನ್ನು ನೋಡುತ್ತ, ಕಾಡು ಗಿಚ್ಚಿನ ಮಧ್ಯದಲ್ಲಿ ದೊರಕಿದ ಹೆಣ್ಣು ಹುಲ್ಲೆಯಂತೆ ಬಾಯಿಬಿಡುತ್ಯ, ಬೇಡನ ಬಲೆಗೆ ಸಿಕ್ಕಿದ ಪೆಣಿ ಳಿಯಂತೆ ನಡುಗುತ್, ಭಯಂಕರವಾಗಿ ಬರುವ ವಿಾನು ಮೊಸಳೆ ಮುಂತಾದ ಜಲಚರ ಪ್ರಾಣಿಗಳಂ ಕಂಡು ಹಾಹಾರವಂ ಗೆಯ್ಯುತ್ತ ಬೆಟ್ಟ ಬೆಟ್ಟಗಳಂತೆ ಹುಟ್ಟಿ ಬರುವ ತೆರೆಗಳ ಕರ್ಣಕಠೋರವಾದ ಧ್ವನಿಗೆ ಕಳವಳವ ಪೊಂದುತ್ತ, ತನಗೆ ಅಕಾರಣವಾಗಿ ಬಂದ ವಿಪತ್ತನ್ನೂ ದೈವಯೋಗದಿಂ ದೊರಕಿದ ಹಲಗೆಯನೂ ಸಹ ನೋಡಿ ಆತ್ಮರವಂ ವೆತ್ತು,- ಎಲೈ ತಾಯಿತಂದೆಗಳಿರಾ ! ಅಣ್ಣ ತಮ್ಮಂದಿರಿರಾ ! ಎನ್ನನ್ನು ಕಾಡುಪಾಲು ಮಾಡಿದಿರಾ ? ಲೋಕದಲ್ಲಿ ದೈವವೇ ಕೆಡಿಸಲುದ್ಯುಕ್ತವಾದಲ್ಲಿ ದ್ರವ್ಯವಿದ್ದರೂ ಸಮಸ್ತ ಬಂಧುಗಳಿದ್ದರೂ ದೊರೆತನವಿ ದ್ದರೂ ಅವೆಲ್ಲವೂ ವ್ಯಕ್ಷವಾಗುವುದೆಂಬ ವಾಕ್ಯವು ಎನಗೆ ನಿದರ್ಶನವಾಯಿತು ! ಪೂರೈಜನ್ಮದಲ್ಲಿ ಯಾವ ದೇವಾಲಯವಂ ಮುರಿದೆನೋ, ಯಾವ ಬ್ರಹ್ಮಹತ್ಯವಂ ಮಾಡಿದೆನೋ, ತಾಯಿತಂದೆಗಳಿಂದೊಡಗೂಡಿದ ಯಾವ ಮಕ್ಕಳಂ ಅಗಲಿಸಿದೆನೋ, ಯಾವ ಗಂಡಹೆಂಡಿರಿಗೆ ವಿರೋಧವನ್ನು ೦ಟುಮಾಡಿದೆನೋ ತಿಳಿಯದು ! ಅಂಥ ಮಹಾಪಾಪಂಗಳಂ ಮಾಡಿದುದರಿಂದಲೇ ತಂದೆತಾಯಿ ಮೊದಲಾದ ಸಂಪತ್ತನ್ನೂ ತೊರೆದು ಸಮುದ್ರ ಮಧ್ಯದಲ್ಲಿರುವ ಜಲಜಂತುಗಳ ಬಾಯೆ ತುತ್ತಾದೆನು ! ಯಾರೊ. ಡನೆ ಎನ್ನ ದುಃಖವಂ ಪೇಳಲಿ ! ಎನ್ನ ನು ಯಾರು ಕಾಪಾಡುವರು ? ಎಲ್ಲಿಗೆ ಹೋಗಲಿ ? ಎಲೆ ದುಷ್ಟನಾದ ಬ್ರಹ್ಮನೇ ! ಎನ್ನ ಫಣೆಯಲ್ಲಿ ಈ ರೀತಿಯಾದ ಅವಸ್ಥೆಯನ್ನು ಹೊಂ ದುವಂತೆ ಬರೆಯುವುದಕ್ಕೆ ನಿನಗೆ ನಾನು ಏನು ಅವರಾಧವಂ ಗೈದೆನು, ಪೇಳು. ಆದರೆ ಈ ಹಡಗಲ್ಲಿದ್ದವರೆಲ್ಲರೂ ಈ ಜಲದಲ್ಲಿ ಮುಳುಗಿಹೋಗಿ ನಾನು ಮಾತ್ರ ಉಳಿದಿರುವುದನ್ನು ನೋಡಿದರೆ ಎನಗೆ ಇನ್ನೂ ಕೆಲವು ದಿವಸ ಭೂಮಿಯ ಋಣಾನು ಬಂಧವು ಇರುವಂತೆ ತೋರುವುದು, ಯಾವ ಕಾಲದಲ್ಲಿ ಯಾವ ದೇಶದಲ್ಲಿ ಯಾವ ಕ್ಷಣದಲ್ಲಿ ಏನು ವಿಪತ್ತೊ, ಏನು ಸಂಪತ್ತೊ ಅದೆಲ್ಲವೂ ದೈವಯೋಗದಿಂದ ಬಂದಲ್ಲದೆ ಬಿಡದೆಂದು ವಿದ್ವಾಂಸರು ಹೇಳುವ ವಾಕ್ಯವು ಯಥಾದ್ಧವೇ ಸರಿ! ೨ ಎಂದು ಚಿಂತಿಸುತ್ತಿರ್ದಳು.