ಪುಟ:ವತ್ಸರಾಜನ ಕಥೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಿ - ವತ್ಸರಾಜನ ಕಥೆ. - ಎಂಬಲ್ಲಿಗೆ ಶಿ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾರವಾಗಿ ನವರಸಭರಿತವಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ತಿ ಕೃಷ್ಣರಾಜ ಸೂಕ್ತಿಮುಕ್ಸಾವಯೆಂಬ ಗ್ರಂಥದೊಳೆ ತೃತೀಯಗುಚ್ಛಂ ಸಂಪೂರ್ಣ ಪು. %ll ಚತುರ್ಥ ಗುಚ್ಛಂ. ಅನಂತರದಲ್ಲಿ ರತ್ನಾ ವಳಿಯು ಭಯವಂ ಪೊಂದಿ, ಆ ತೆರೆಗಳಲ್ಲಿ ನೀರಿನ ನಾರಿ ಯಂತೆ ತೇಲುತ್ತ ಪೋಗುವಲ್ಲಿ,-IC ವಿಾನೂ ಮೊಸಳೆಗಳೂ ಎನ್ನ ನ್ನು ಭಕ್ಷಿಸಿದರಂತೂ ಬಹಳ ಸಂತೋಷವೇ ಸರಿ. ಅಲ್ಲಲ್ಲಿ ಹಡಗನ್ನು ಏರಿಬರುವ ವರ್ತಕರುಗಳ ಕೈಗೆ ಸಿಕ್ಕಿದಲ್ಲಿ ಯಾರ ಮಗಳೆಂದು ಪೇಳಲಿ ! ಎನ್ನ ಪಾತಿವ್ರತ್ಯವನ್ನು ಹೇಗೆ ಸಂರಕ್ಷಿಸಲಿ ! ಎನ್ನ ನ್ನು ಕಂಡ ಪುರುಷರು ಮೋಹಿಸದೆ ಹೇಗೆತಾನೆ ಸುಮ್ಮನಿರುವರು ! ಕೆಟ್ಟ ದೈವವು ಎನಗೆ ಈ ರೂಪವನ್ನೂ ವಿದ್ಯೆ ಬುದ್ದಿ ಗಳನ್ನೂ ಈ ಪ್ರಾಯವನ್ನೂ ಏಕೆ ಉಂಟುಮಾ ಡಿತೋ ! ಇನ್ನು ವತ್ಸ ರಾಜನೆಂದರೇನು, ನಮ್ಮಿಬ್ಬರಿಗೆ ಸಂಘಟನೆ ಎಂದರೇನು ? ಇನ್ನು ಅವನಿಗೆ ಪತ್ನಿ ಯಾಗುವೆನೆಂಬ ಚಿ೦ತೆಯು ಭ್ರಾ೦ತಿಯಾಗಿರುವುದು ! ಮತ್ತು ಅಂಥ ಐಶ್ವರದಲ್ಲಿದ್ದು ಈ ಅವಸ್ಥೆಯನ್ನು ಹೇಗೆ ಹೊಂದಿದೆನು ? ಮುಂದೆ, ಇನ್ನೇನು ಅವಸ್ಥೆಯನ್ನು ಹೊಂದುವೆನು ? ?” ಎಂದು ಯಾರು ಬಲ್ಲರು ? ಇಂಥ ಸಮುದ್ರಮಧ್ಯ ದಲ್ಲಿ ಮುಳುಗಿದರೂ ಪ್ರಾಣವಂ ಬಿಡದೆ ದೈವಯೋಗದಿಂ ದೊರಕಿದ ಹಲಗೆಯನ್ನು ಹತ್ತಿ ಜೀವಿಸಿರುವುದನ್ನು ಆಲೋಚಿಸಿದಲ್ಲಿ ದೈವಕೃಪೆಯಿಂದ ವತ್ಸ ರಾಜನಿಗೆ ಪತ್ನಿಯಾ ದರೂ ಆಗಬಹುದು, ಮತ್ತು ದರಿದನು ಸೌಖ್ಯವಂ ಬಯಸುವಂತೆ, ನಪುಂಸಕನಿಗೆ ದೊರಕಿದ ನಾರಿಯ ಜಾಣ್ನೆಯಂತೆ, ಎನ್ನ ಮನೋರಥವೆಲ್ಲವೂ ಅರಣ್ಯದಲ್ಲಿ ಬಿದ್ದ ಬೆಳುದಿಂಗಳಂತೆ ವ್ಯಕ್ಷವಾಗಿ ತೋರುವುದು, ಇನ್ನೂ ಬಳಲಿ ಬಾಯಾರಿ ಬಗೆಬಗೆ ಯಾಗಿ ಹಂಬಲಿಸುತ್ತ ದಿಕ್ಕುಗಳಿಗೆ ಬಾಯಿಬಿಡುತ್ತ ರೋದನವಂ ಗೈದರೂ ಫಲವಂ ಕಾಣೆನು ! ಸಂಪೂರ್ಣವಾಗಿ • ಜಲದಲ್ಲಿ ಮುಳುಗಿದವನಿಗೆ ಚಳಿಯ ಗಾಳಿಯ ಭಯ ವೇನೆಂಬ ' ನ್ಯಾಯವು ಎನಗೆ ಪ್ರಾಪ್ತವಾದುದು, ವಿಪತ್ತು ಬಂದಾಗ ಧೈರ್ಯ ವನ್ನೂ ಸಂಪತ್ತಿನಲ್ಲಿ ವಿನಯವನ್ನೂ ಅವಲಂಬಿಸಬೇಕೆಂದೂ, ಧೈರವೇ ಸತ್ವಸೌ ಖ್ಯಕ್ಕೂ ಕಾರಣವಾಗುವುದೆಂದೂ ನೀತಿಯಂ ಬಲ್ಲವರು ಪೇಳುವೆ ವಾಕ್ಯವು ವ್ಯಕ್ತ ವಾಗಲಾರದು. ಆದುದರಿಂದ ನಾನು ಸಕಲವಾದ ವ್ಯಸನವಂ ತೊರೆದು, ಎದೆಯಂ