ಪುಟ:ವತ್ಸರಾಜನ ಕಥೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಇಳಿ -- ಕರ್ಣಾಟಕ ಕಾವ್ಯಕಲಾನಿಧಿ, - ಕೆಚ್ಚುಗೈದು, ದೈವವು ಸಮುದ್ರವಂ ನೋಡುವುದಕ್ಕೆ ಇದೊಂದು ವಿಲಾಸವಂ ವಿರ ಚಿಸಿದುದೋ ? ) ಎಂದು ನಾನಾಪ್ರಕಾರವಾಗಿ ಹಬ್ಬಿ ಪೋಗುತ್ತಿರುವ ಮನವನ್ನು ಬಿಗಿಗೈದು ತೇಲುತ್ತ ಬರುತ್ತಿರಲು ; ಅಷ್ಟರಲ್ಲೇ ಕೌಶಾಂಬೀನಗರಿಯ ಧನಗುಪ್ತನೆಂಬ ವರ್ತಕನು ರತ್ನ ದ್ವೀಪ ಗಳಿಂದ ರತ್ನ ಗಳಂ ತರುವೆನೆಂದು ಹಡಗನ್ನೇರಿ ಬರುತ್ತ, ಸಮುದ್ರ ಮಧ್ಯದಲ್ಲಿ ತೇಲಿ ಬರುತ್ತಿರುವ ರತ್ನಾ ವಳಿಯನ್ನು ದೂರದಲ್ಲೇ ಕಂಡು, ಚೆನ್ನಾಗಿ ದೂರದೃಷ್ಟಿಯ ಕೊಳ ವೆಯನ್ನಿಟ್ಟು ನೋಡಿ-ಇವಳಾರೋ ಒಬ್ಬ ಸ್ತ್ರೀಯಾಗಿ ಕಾಣುವಳು. ಅಗಾಧವಾದ. ಸಮುದ್ರ ಮಧ್ಯದಲ್ಲಿ ಈ ರೀತಿಯಾಗಿ ಬರುವ ಸ್ತ್ರೀಯು ಯಾವವಳೊ ನೋಡುವೆ ನೆಂದು ಹಡಗನ್ನು ಅತ್ಯಲಾಗಿ ತಿರುಗಿಸಿ, ಸಮಿಾಪವಂ ಸೇರಿ-ಸಾಭರಣಗಳಿ೦ ದಲೂ ಪೊಳೆಯುತ ಕಲ್ಪವೃಕ್ಷಗಳ ಚಿಗರುಗಳಿಗೆ ಕಾಂತಿಯನ್ನಿ ಯುತ್ತಿರುವ ಕಾಲು ಬೆರಳುಗಳಿಂದಲೂ, ಅಮೆಯನ್ನು ಅಲ್ಲಗಳೆಯುತ್ತಿರುವ ಮೇಗಾಲುಗಳಿ೦ದಲೂ, ಕೆ೦ ದಾವರೆಯ ಅಂದವಂ ನಿಂದಿಸಿ ಹೆಚ್ಚಾಗಿ ರಕ್ತವಂ ಮುಕ್ಕುಳಿಸಿ ತೋರುವ ಪಾದಗ ಳಿ೦ದಲೂ, ವಿಸ್ತಾರವಾಗಿ ಬೆಳೆದ ನಿತ೦ಬಗಳ ಭಾರವನ್ನು ಕೊಬ್ಬಿನಿಂದ ಜಜ್ಜಿ ತೋರಿ ಕುಂಭಗಳ ದಂಭ ವನ್ನು ನಿಂದಿಸಿ ನೆರೆದಿರುವ ವೆರ್ಮೊಲೆಗಳ , ಭಾರವಂ ಹೊರಲಾರದೆ ಆಯಾಸದಿಂದ ನೀಡಿದ ಮೇಗಾಲೆಂಬ ಆಮೆಗಳ ತಲೆಗಳೋ ಎಂಒಂ ತಿರುವ ಹಿಮ್ಮಡಿಗಳಿ೦ದಲೂ, ನಿನ್ನ ಮುಖದಿಂದ ನಮ್ಮ ಚಂದ್ರನಂ ಜಯಿಸಬೇಡ ವೆಂದು ಬಂದು ಎರಗಿದ ನಕ್ಷತ್ರಗಳೋ ಎಂಬಂತಿರುವ ಪಾದ ನಖಗಳಿ೦ದಲೂ, ಮೂರುಲೋಕವನ್ನೂ ಜಯಿಸಲೋಸುಗ ಸಾಣೆಗೈದು ಬಾಣಗಳಂ ತುಂಬಿ ಮಡ ಗಿದ ಮನ್ಮಥನ ಬತ್ತಳಿಕೆಗಳೋ ಎಂಬಂತೆ ಬಿತ್ತರವಾಗಿರುವ ಮೊಳಗಾಲುಗಳಿ೦ ದಲೂ, ಮನ್ಮಥನ ಅರಮನೆಯ ಬಾಗಿಲಲ್ಲಿ ಕಟ್ಟಿದ ಬಾಳೆಗಂಭಗಳೋ ಎಂಬಂತೆ ಇಂಬಾಗಿರುವ ತೊಡೆಗಳಿಂದಲೂ, ಪರರ ಹೆಚ್ಚುಗೆಯಂ ನೋಡಿ ಅಸೂಯೆಯಿಂದ ಕೃಶನಾಗುವ ಮನುಜನಂತೆ ನಿತಂಬಗಳ ಬಳೆವಳಿಕೆಯನ್ನೂ ಕುಚಗಳ ವೃದ್ಧಿಯನ್ನೂ ಸಹ ನೋಡಿ ಬಡವಾದುದೋ ಎಂಬಂತೆ ಪಿಡಿಗೆ ಅಡಗುವುದಕ್ಕೆ ಯೋಗ್ಯವಾದ ನ ಡುವಿನಿಂದಲೂ, ಲಾವಣ್ಯವೆಂಬ ನದಿಯ ಸುಳಿಯಂತೆ ಮೆರೆಯುವ ನಾಭಿಯಿಂದಲೂ, ಹೃದಯದಲ್ಲಿ ವಾಸವಂ ಗೈದ ಮನ್ಮಥನ ಮದ್ದಾನೆಯ ಕುಂಭಸ್ಥಳಗಳೋ ಎಂಬಂತೆ ಶೋಭಿಸುವ ಕುಚಗಳಿಂದಲೂ, ಸಂಪಿಗೆಯ ದಂಡೆಗಳಿಗೆ ಪಗೆಯಾಗಿ ಸೊಗಸಾಗಿ ಶೋಭಿಸುವ ತೋಳುಗಳಿ೦ದಲೂ, ಚಿಗುರುಗಳು ಪುಷ್ಪವಂ ಪೆತ್ತುವೋ ಎಂಬಂತೆ ಒಪ್ಪುವ ಹಸ್ತದ ಉಗುರುಗಳಿಂದಲೂ, ಬಲಮುರಿಯ ಶಂಖದ ಬಿಂಕವಂ ಮುರಿ ಯುವ ಕತ್ತಿನಿಂದಲೂ, ಪವಳದ ಬಣ್ಣವ ಕಡೆಗೊತ್ತುವ ತುಟಿಯಿಂದಲೂ, ಎಳ ಹೂವಿನ ಏಳ್ಯಂ ಬರಿಗೈದು ಕಣ್ಣುಗಳ ಎಲ್ಲೆಗಟ್ಟಿನ ಸುವರ್ಣದ ಶಿಲೆಯೋ ಎಂಬಂತೆ ತೋರುವ ನಾಸಿಕದಿಂದಲೂ, ಕಬ್ಬಿನ ಬಿಲ್ಲುಗಳೋ ಎಂಬಂತೆ ತೋರುವ