ಪುಟ:ವತ್ಸರಾಜನ ಕಥೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

tܩ - ವತ್ಸರಾಜನ ಕಥೆ, - ಹುಬ್ಬುಗಳಿಂದಲೂ, ಮನ್ಮಥನ ವಿಜಯಧ್ವಜದಲ್ಲಿ ಮಂಡಿಸಿದ ಕನ್ನಡಿಗಳಂತೆ ತಳ ತಳಿಸುತ್ತಿರುವ ಕಪೋಲಗಳಿ೦ದಲೂ, ಆತ್ಮ ಮಾಚ೦ದ್ರನಿಗೆ ಮಟ್ಟು ವಿಾರಿದ ಲಜ್ಞೆ ಯಂ ಪುಟ್ಟಿಸುತ್ತ ಹದವಾಗಿ ಶೋಭಿಸುವ ಹಣೆಯಿಂದಲೂ, ಕೃಷ್ಣ ಸರ್ಪದ ಕಾಂತಿ ಯನ್ನು ಕಡೆಗೊತ್ತಿ ಕಂಗೊಳಿಸುವ ಜಡೆಯಿಂದಲೂ, ಒವ್ರತ ಸಾ೦ಗಸುಂದರಿ ಯಾದ ಆ ರತ್ಯಾ ವಳಿಯಂ ಕಂಡು, ತವರುಮನೆಯಂ ನೋಡಲು ಬಂದ ಆದಿಲಕ್ಷ್ಮಿ ಯೋ, ಭೂಲೋಕದ ಸೌಭಾಗ್ಯವನ್ನೂ ಸಮುದ್ರದ ವಿಸ್ತಾರವನ್ನೂ ಸಹ ನೋಡಲು ಬಂದ ಆದಿಶೇಷನ ಪತ್ನಿ ಯೋ, ಆಕಾಶದಲ್ಲಿ ಪೋಗುವ ವಿಮಾನಗತಿಯಿಂ ತಪ್ಪಿ ಸ ಮುದ್ರದಲ್ಲಿ ಬಿದ್ದಿರುವ ಶಚೀದೇವಿಯೋ, ಆ ಗಂಡನು ಅನಂಗನಾದ ಮೇಲೆ ಇನ್ನಿರ ಬಾರದೆಂದು ಸಮುದ್ರ ಪ್ರವೇಶವಂ ಗೆಯ್ಯಲೋಸುಗ ಬಂದಿರುವ ರತೀದೇವಿಯೋ, ಎನ್ನ ಪತಿಯು ಪೀರಿದುದಲ್ಲದೆ ಇನ್ನೆಷ್ಟು ವಿಷವಿರುವುದೋ ಎಂದು ಪರೀಕ್ಷೆಯಂ ಗೆ ಯ್ಯಲು ಬಂದ ಪಾಶ್ವತಿಯೋ, ಎಂದು ನಾನಾ ಸಂದೇಹವಂ ಪೊಂದು, ಸವಿಾಪಕ್ಕೆ ಬಂದು ಚೆನ್ನಾಗಿ ನೋಡಿ, ರೆಪ್ಪೆಯನ್ನಿ ಸ್ಟುವ ಕಣ್ಣುಗಳಿ೦ದ ಒಪ್ಪುತ್ತಿರುವುದರಿಂದ, -ಇವಳು ದೇವತಾ ಸ್ತ್ರೀಯಲ್ಲ, ಮನುಷ್ಯಪುತ್ರಿಯೇ ಸರಿ; ಯಾರಾದರೂ ಜಲದಲ್ಲಿ ಬಿದ್ದು ನರಳುತ್ತಿರುವವರನ್ನು ತೀರ್ವವಾಗಿ ಎತ್ತಿಸಲಹುವುದೇ ಮುಖ್ಯಧರ್ಮವು ಎಂದು, ತಾನೇ ಒಂದು ಕೈ ಹಡಗನ್ನೇರಿ ಪೋi), ಹಲಗೆಸಹಿತವಾಗಿ ಆ ರತ್ನಾವಳಿ ಯನ್ನು ಹಡಗನ್ನು ಹತ್ತಿಸಿ ದೊಡ್ಡ ಹಡಗನ್ನು ಸೇರಿಸಲು; ರತ್ನಾವಳಿಯು ಧನಗುಪ್ತ ನಂ ನೋಡಿ - ಇವನು ವರ್ತಕನಾಗಿ ತೋರುವನು, ಎನಗೆ ಪ್ರಾಣೋಪಕಾರವಂ ಮಾಡಿದುದರಿಂದ ಎನಗೆ ಜನ್ಮಾಂತರದ ತಂದೆಯಾಗಿರುವನು. ಇವನು ದುಷ್ಯನೋ ಧರ್ಮಿಷ್ಟನೋ ತಿಳಿಯಲಾಗದು, ಮನುಷ್ಯರ ಡೀಲಸ್ವಭಾವವನ್ನು ತಿಳಿಯಬೇಕಾ. ದಲ್ಲಿ ಬಹುಕಾಲದ ಪರಿಚರವು ಬೇಕಾಗಿರುವುದು, ಒಡೆದುಹೋದ ಹಡಗು ಮರಳಿ ಸಮುದ್ರ ಮಧ್ಯದಲ್ಲಿ ದೊರಕುವುದಂಥದಾದುದು, ಮುಂದಣ ಕಾರವು ಹೇಗೆ ಕೈಗೂಡಿ ಬರುವುದೋ ಕಾಣೆ ಎಂದು, ಲಚ್ಛೆಯಿಂದಲೂ ಭಯದಿಂದಲೂ ತಲೆ ತಗ್ಗಿಸಿ ಕೊಳ್ಳುತ್ತಿರಲು ; ಧನಗುಪ್ತನು ರತ್ನಾ ವಳಿಗೆ ರಮಣೀಯವಾದ ಹಾಸಿಗೆಯಂ ಹಾಸಿ, ಅವಳ೦ ಕುರಿತು-( ಎಲೆ ತಾಯೇ, ನೀನು ಈ ದುಷ್ಟವಾದ ಹಲಗೆಯಂ ಬಿಟ್ಟು ಹಾಸಿಗೆ ಯಲ್ಲಿ: ಕುಳಿತುಕೊಳ್ಳು ವಳಾಗು ” ಎಂದು ನುಡಿಯಲು; ರತ್ನಾ ವಳಿಯು-ಎಲೆ ತಾಯೇ, ಎಂದು ತನ್ನನ್ನು ಈ ವರ್ತಕನು ಕರೆದ ಶಬ್ದ ವಂ ಕೇಳಿ ಮನಸ್ಸಿನಲ್ಲಿ ಬಹಳವಾದ ಆನಂದವುಂಟಾದುದೆಂದು ಆ ಹಲಗೆಯಂ ಬಿಟ್ಟು, ಹಾಸಿಗೆಯಲ್ಲಿ ಕುಳಿತುಕೊಳ್ಳಲು; ಆ ಧನಗುಪ್ತನು-ಸPಾಲಂಕಾರಭೂಷಿತಳಾಗಿ ಬೆಲೆಯಿಲ್ಲದೆ ಇರುವ ರತ್ನದ ಹಾರವಂ ಧರಿಸಿ ಪೂಳೆಯುತ್ತಿರುವೀಬಾಲೆಯು ಯಾವನೋ ಒಬ್ಬ ದೇಶಾಧಿಪತಿಯ ಮಗಳಾಗಿ ತೋರುವಳು. ಇವಳ ಅಂಗಗಳಲ್ಲಿ ತೋರುವ ಅಲಂಕಾರದ ರೀತಿಯು ನಮ್ಮ ವತ್ವ ರಾಜನ ಅಂತಃಪುರದ ಸ್ತ್ರೀಯರು ಅಲಂಕರಿಸುವ ಸೊಬಗನ್ನು ಅನುಸರಿಸುತ್ತಿರುವುದು.