ಪುಟ:ವತ್ಸರಾಜನ ಕಥೆ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܧܩ - ಕರ್ಣಾಟಕ ಕಾವ್ಯಕಲಾನಿಧಿ, - ಇವಳು ರಾಜಪುತ್ರಿಯೇ ಆಗಿರಬೇಕು, ಅಲ್ಲದಿದ್ದರೆ ಯಾವನೊಬ್ಬ ನೋ ಧನಿಕನಾ ದವನ ಮಗಳಾಗಿರಬೇಕು. ಇವು ಎರಡು ಅಲ್ಲದೆ ಇದ್ದರೆ ಈ ರೀತಿಯಾದ ಕಯವಿ ಲ್ಲದ ರತ್ನಾಭರಣಗಳ ಪ್ರಾಪ್ತಿಗೆ ಮತ್ತೊಂದು ಕಾರಣವೂ ತೋರಲಾರದು, ಆದರೂ ಇವಳ ಮುಖವಚನದಿಂದ ಎಲ್ಲಾ ವೃತ್ತಾಂತವನ್ನು ತಿಳಿಯುವೆನೆಂದು, ಆಲೋಚಿಸಿ, ಆ ರತ್ನಾ ವಳಿಯಂ ಕುರಿತು,- ( ಎಲೆ ತಾಯೇ, ನೀನು ಯಾರು ? ಯಾರ ಮಗಳು ? ನಿನಗೆ ಈ ಸಮುದ್ರಮಧ್ಯದಲ್ಲಿ ಈ ಅವಸ್ಥೆಯು ಹೇಗೆ ಪ್ರಾಪ್ತವಾಯಿತು ? ಇದೆಲ್ಲ ವನ್ನೂ ವಂಚಿಸದೆ, ನನ್ನ ಮೇಲಣ ಪ್ರೀತಿಯುಳ್ಳವಳಾಗಿ ಹೇಳು ?” ಎಂದು ಅತ್ಯಂತ ವಿನಯಾನ್ವಿತನಾಗಿ ಕೇಳಲು ; ರತ್ನಾ ವಳಿಯು--ನಾನು ರಾಜಪುತ್ರಿಯೆಂದು ನಿಜ ವಾಗಿ ಹೇಳುವುದು ಈಗಿನ ರೀತಿಗೆ ಯುಕ್ತವಲ್ಲ, ಒಬ್ಬ ವರ್ತಕನ ಮಗಳೆಂದು ಹೇಳಬೇಕೆಂದು, ತನ್ನ ಮನಸ್ಸಿನಲ್ಲಿ ಆಲೋಚಿಸಿ, ಉದ್ದವಾಗಿ ನಿಟ್ಟುಸಿರು ಬಿಡುತ್ತ, ಮುತ್ತಿನ ಮಣಿಗಳಂತೆ ಕಣ್ಣೀರಬಿಂದುಗಳನುಂಟುಮಾಡುತ್ತಿರಲು, ಧನಗುಪ್ತನು - ಎಲೆ ತಾಯೇ, ಕೇಳು. ಬಾದಿ ಸಮಸ್ತ ಮುನಿಜನಗಳಿಗೂ ಯಾವಯಾವ ಕಾಲಕ್ಕೆ ಏನೇನು ಅನುಭವಿಸತಕ್ಕುದಾಗಿರುವುದೋ ಆ ಕಾರವು ಬಂದಲ್ಲದೆ ಬಿಡದು. ಪ್ರಾರಬ್ಧ ಕರ್ಮಕ್ಕೆ ಅನುಭವದಿಂದಲೆ ನಾಶವಲ್ಲದೆ ದಾನಧರ್ಮ ತೀರ್ಥಯಾತ್ರೆ ಮುಂತಾದ ಸತ್ಕರ್ಮದಿಂದ ನಾಶವುಂಟಾಗಲಾರದು. ಸೀತಾದೇವಿ, ದೌಪದಿ ಮುಂತಾದವರಿಗೆ ಬಂದ ವಿಪತ್ತನ್ನು ಕೇಳಿ ಇಲ್ಲವೆ ? ಆಸ್ತರಾದವರಲ್ಲಿ ತನ್ನ ಕಷ್ಟ ನಂ ಪೇಳಿದಲ್ಲಿ ಅರ್ಧಕ್ರಮವು ಪರಿಹಾರವಾಗುವುದೆಂಬ ಲೋಕಮರಾದೆ ಇರುವುದು. ಯಾವುದಕ್ಕೂ ಭಯವಂ ಪೊಂದದೆ ನಿನ್ನ ವೃತ್ತಾಂತವನ್ನು ಪೇಳುವಳಾಗು ” ಎಂದು ನುಡಿಯಲು; ರತ್ನಾವಳಿಯು ಲಜ್ಞೆಯಿಂದ ತಲೆಯಂ ತಗ್ಗಿಸಿ, ಎಡದ ಮಂಡಿಯಮೇಲೆ ತನ್ನ ಕಪೋಲವನ್ನಿಟ್ಟು, ಅಯ್ಯಾ, ವರ್ತಕರೇ ! ಲೋಕದಲ್ಲಿ ಪುಣ್ಯವಂತರ ವಾರೆ ಯಂ ಕೇಳಬೇಕಲ್ಲದೆ ಭಾಗ್ಯಹೀನಳಾಗಿ ಪಾಪಿಯಾದ ನನ್ನ ವೃತ್ತಾಂತವನ್ನು ನಿಮ್ಮಂಥ ಪುಣ್ಯಶಾಲಿಗಳು ಕೇಳತಕ್ಕುದಲ್ಲ. ಆದರೂ ನೀವು ಪ್ರೀತಿಯಿಂ ಕೇಳಿದರೂ ಪ್ರತ್ಯು ತರವನ್ನು ಹೇಳದೆ ಪೋದಳೆಂದು ನಿಮ್ಮ ಚಿತ್ರಕ್ಕೆ ಆಯಾಸವು ತೋರುವುದೆಂಬ ಶಂಕೆ ಯಿಂದ ಪೇಳುವೆನು, ಕೇಳಿ, ನಾನು ಕಾಶ್ಮೀರದೇಶದ ರತ್ನ ಪಾಲನೆಂಬ ವರ್ತಕನ ಮಗಳು, ನಮ್ಮ ತಂದೆ ನಾನು ಒಬ್ಬಳೇ ಮಗಳಾದುದರಿಂದ ನನ್ನಲ್ಲಿ ಅಧಿಕಪ್ರೇಮ ಶಾಲಿಯಾಗಿ ಯಾವ ಸ್ಥಳಕ್ಕೆ ತಾನು ಹೋಗಬೇಕಾದರೂ ಎನ್ನ ನ್ನು ಸಂಗಡಲೇ ಕರೆ ದುಕೊಂಡು ಪೋಗುತ್ತಿರುವ ಪದ್ಧತಿಯೊಂದುಂಟು. ಈಗ ಮೊದಲ ಮೇರೆಯಲ್ಲಿ ಎನ್ನ ನ್ನು ಸಂಗಡಲೇ ಕರೆದುಕೊಂಡು ಹಡಗನ್ನೇರಿ ದ್ವೀಪಾಂತರದ ವಸ್ತುಗಳನ್ನು ತರುವದಕ್ಕೋಸುಗ ಪೋಗುತ್ತಿರುವಲ್ಲಿ, ದೈವಂಯೋಗದಿಂದ ಹುಟ್ಟಿದ ಕೆಟ್ಟ ಗಾಳಿಯ ವೇಗದಿಂದ ನಾವು ಕುಳಿತಿದ್ದ ಹಡಗು ಪಕ್ವತಕ್ಕೆ ಬಡಿದು ತುಂಡುತುಂಡಾಗಲಾಗಿ, ಅಲ್ಲಿಂದ ನನ್ನ ತಂದೆ ಮೊದಲಾದ ಸಮಸ್ಯಜನರೂ ಸಮುದ್ರದಲ್ಲಿ ಮುಳುಗಿಹೋಗಿ,