- ವತ್ಸರಾಜನ ಕಥೆ, - ಪಾಪಿಯಾದ ನಾನೊಬ್ಬಳೇ ಉಳಿದು ಬಂದೆನು, ತಂದೆಗೆ ಬದಲುತಂದೆಯಾದ ನಿಮ್ಮ ಸ ಸ್ತಕೆ ಸಿಕ್ಕಿರುವೆನು. ಎನ್ನ ಮಾನ ಪ್ರಾಣಗಳು ನಿಮ್ಮ ವಶಗಳಾಗಿರುವುವು ?” ಎಂದು ಮುಖಕ್ಕೆ ಸೀರೆಯ ಸೆರಗನ್ನು ಹೆಚ್ಚಿ, ಕುಚಗಳು ಕುಲಕುವಂತೆ ಬಿಕ್ಕಿಬಿಕ್ಕಿ ರೋದ ನವಂ ಗೆಯ್ಯುತ್ತಿರಲು ; ಧನಗುಪ್ತನು ಕರುಣಾಶಾಲಿಯಾಗಿ ಇತರಹಿತನಾಗಿ ಇದ್ದು ದರಿ೦ದ ಅವಳ ವಾಕ್ಯವನ್ನು ಕೇಳಿ, ಮನಮರುಗಿ- ಎಲೆ, ತಾಯೆ, ನೀನು ಯಾವ ವಿಚಾರದಲ್ಲಿ ವ್ಯಸನವಂ ಪೊಂದಬೇಡ. ತಂದೆಗಿಂತಲೂ ಹೆಚ್ಚಾದ ಪ್ರೇಮದಿಂದ ನಿನ್ನ ನ್ನು ಸಲಹುತ್ತ ನಿನ್ನ ಇಚ್ಛೆಯಾದಂತೆ ನಡೆದುಕೊಳ್ಳುವೆನು ?” ಎನ್ನಲು ; ರತ್ನಾ ವಳಿಯು ಸಂತೋಷವಂ ತಾಳಿ, ತನ್ನ ಪುಣ್ಯದಿಂದ ವರ್ತಕನು ವತ್ಸ ರಾಜನ ಪಟ್ಟಣ ದವನೇ ಆದಲ್ಲಿ ತನ್ನ ಮನೋರಥವು ಸಿದ್ದಿಸಬಹುದೆಂದು ಯೋಚಿಸಿ, ( ಅಯ್ಯಾ, ವರ್ತಕರೇ, ನೀವು ಯಾವ ದೇಶದವರು ? ಈಗ ಎಲ್ಲಿಗೆ ಪೋಗುತಲಿದ್ದೀರಿ ? ನಿಮ್ಮ ನಾಮಧೇಯವೇನು ? ಇವೆಲ್ಲವನ್ನೂ ಮಗಳಾದ ನನ್ನ ಮೇಲಣ ಪ್ರೀತಿಯಿಂದ ಅಪ್ಪಣೆಯನ್ಶಿಯಬೇಕು ' ಎಂದು ವಿನಯಾನ್ವಿತಳಾಗಿ ಬೇಡಿಕೊಳ್ಳಲು ; ಅವನು (ಎಲೆ ಬಾಲಕಿಯೇ, ಕೇಳು, ದಶಾರ್ಣವ ದೇಶಕ್ಕೆ ಅಲಂಕಾರವಾದ ಕೌಶಾಂಬೀ ನಗರಿಗೆ ಅಧಿಪತಿಯಾದ ವತ್ಸ ರಾಜನಿಗೆ ಪ್ರೇಮಪಾತ್ರನಾದ ಎನ್ನ ನ್ನು ಧನಗುಪ್ತ ನೆಂದು ಹೇಳುತ್ತಿರುವರು. ನಮ್ಮ ದೊರೆಯು ಕೆಲವು ರತ್ನ ವಾಗಬೇಕೆಂದು ಪೇಳಿ ದುದರಿಂದ ಈಗ ರ ದ್ವೀಪಕ್ಕೆ ಹೋಗುತ್ತಲಿದ್ದೆನು, ದರಿದ್ರನಿಗೆ ಭಾಗ್ಯಲಕ್ಷ್ಮಿ ಯೇ ಇದಿರುಗೊಂಡು ಬಂದಂತೆ ನಿನ್ನ ಸಂದರ್ಶನದಿಂದ ಸಂತೋಷಭರಿತನಾದೆನು ೨೨ ಎಂದು ನುಡಿದು ತನ್ನ ಕಡೆಯವರನ್ನು ರತ್ನ ದ್ವೀಪಕ್ಕೆ ಕಳುಹಿಸಿ ಕೊಟ್ಟು, ತಾನು ಕುಳಿತಿದ್ದ ಹಡಗನ್ನು ಕೌಶಾಂಬೀಪುರಕ್ಕೆ ತಿರುಗಿಸಿ, ಯಾರೂ ತಿಳಿಯದಂತೆ ರಾತ್ರಿ ವೇಳೆಯಲ್ಲಿ ರತ್ನಾ ವಳಿಯನ್ನು ಪಾಲಕಿಯಲ್ಲಿ ಕುಳ್ಳಿರಿಸಿಕೊಂಡು, ತನ್ನ ಮಂದಿರವಂ ಪೊಂದಿ, ತನ್ನ ಪತ್ನಿ ಯಾದ ಸುನಂದೆಯಂ ಕರೆದು- ಎಲೌ ಕಾಂತೆಯೇ, ನಿನ್ನ ಚಿತ್ಯದಲ್ಲಿ ಪುತ್ರರಿಲ್ಲವೆಂಬ ಸಂದೇಹವ ಬಲವಾಗಿ ಇದ್ದುದರಿಂದ ನಮ್ಮ ಭಾಗದ ದೇವರು ಹೆಣ್ಣು ಮಗಳನ್ನು ಕೊಟ್ಟಿರುವುದು. ” ಎಂದು ನುಡಿದು, ರತ್ನಾ ವಳಿಯಂ ತೋರಿಸಲು ; ಆ ಸುನಂದೆಯು ರತ್ನಾ ವಳಿಯಂ ನೋಡಿ, ಅತ್ಯಂತವಾದ ಆಶ ರವಂ ಪೊಂದಿ, ಅವಳು ದೊರಕಿದ ಪರಿಯನ್ನು ತನ್ನ ಪತಿಯಿಂದ ತಿಳಿದು, ಸಂತೋಷ ಸಮುದದಲ್ಲಿ ಮುಳುಗುತ್ತ, ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳಿಗಿಂತಲೂ ಅತಿಶ ಯವಾದ ವಿಶ್ವಾಸವಂ ತಾಳಿ, ರತ್ನಾ ವಳಿಯನ್ನು ಸಲಹುತ್ತಿರಲು ; ಧನಗುಪ್ತನೂ ಸುನಂದೆಯೂ ಮಾಡುವ ಉಪಚಾರಗಳಿಂದ ರತ್ನಾ ವಳಿಯು ತನ್ನ ತಾಯಿತಂದೆಗಳಂ ಮರೆತು, ಸುಖದಿಂದಿರುತ್ತಿರಲು ; ಇತ್ತಲು, ಮಂತ್ರಿಯಾದ ವಸುಭೂತಿಯು ರತ್ನಾ ವಳಿಯಂತೆ ಒಂದು ಹಲಗೆ ಯನ್ನು ಅವಲಂಬಿಸಿ ಕೆಲವು ದಿವಸದ ಮೇಲೆ ಸಿಂಹಳದೇಶವನ್ನು ಹೊಂದಲು ;
ಪುಟ:ವತ್ಸರಾಜನ ಕಥೆ.djvu/೩೬
ಗೋಚರ