ಪುಟ:ವತ್ಸರಾಜನ ಕಥೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OY - ಕರ್ಣಾಟಕ ಕಾವ್ಯಕಲಾನಿಧಿ, - ಮಂತ್ರಿಯಾದ ಗಂಧರಾಯಣನು ತಾನು ಬರೆದ ಪತ್ರಿಕೆಗೆ ಪ್ರತ್ಯುತ್‌ ರವೂ ಚಾರನೂ ಸಹ ಬಾರದೆ ಇದ್ದುದರಿಂದ ಕಾರ್ಯವೇ ಕೈಗೂಡಲಿಲ್ಲವೋ, ಎನ್ನೊಡನೇ ಬ್ರಾಹ್ಮಣನೇ ಸುಳ್ಳು ಮಾತುಗಳಂ ಪೇಳಿದನೋ, ವಾಸವದತ್ತೆಯು ಇರುವಲ್ಲಿ ತನ್ನ ಮಗಳಂ ಕೊಡುವುದು ನ್ಯಾಯವಲ್ಲವೆಂದು ನನ್ನ ಪತ್ರಿಕೆಯನ್ನು ತಿರಸ್ಕರಿಸಿದನೋ, ಯಾವ ವಾರ್ತೆಯ ತಿಳಿಯಲಿಲ್ಲ. ಆದರೂ ಸಿಂಹಳದೇಶದಲ್ಲಿ ಇನ್ನೊಂದು ವಾರೆಯನುಂಟುಮಾಡುವೆನು” ಎ೦ದು, ಅವನು ಒಬ್ಬ ಚಾರನಂ ಕರೆದು ಅವನ ಕಿವಿಯಲ್ಲಿ ಒಂದು ವಾಕ್ಯವಂ ಪೇಳಿ, ಸಿಂಹಳದೇಶಕ್ಕೆ ಕಳುಹಿಸಿಕೊಡಲು ; ಇತ್ತಲು, ಧನಗುಪ್ತನು ಒಂದಾನೊಂದು ದಿನದಲ್ಲಿ ಇನ್ನೂ ರತ್ನಾ ವಳಿಗೆ ವಿವಾ ಹವಿಲ್ಲವೆಂಬ ಸಂಗತಿಯನ್ನು ತಿಳಿದು, ತನ್ನ ಪತ್ನಿಯನ್ನು ಏಕಾಂತಸ್ಥಳಕ್ಕೆ ಕರೆದು, (ಎಲೆ ಕಾಂತೆಯೇ, ಈ ಬಾಲೆಯು ರೂಪಿನಲ್ಲಿ ಲಕ್ಷ್ಮಿಯಂತೆಯೂ, ಬುದ್ದಿಯಲ್ಲಿ ಸರ ಸ್ವತಿಯಂತೆಯ ಇರುವಳು. ಇವಳಿಗೆ ಸಮಾನನಾದ ವರನು ನಮ್ಮ ರಾಜೇ೦ದ ನೇ। ಹೊರತು, ಮತ್ತೊಬ್ಬನೂ ಯೋಗ್ಯನಾಗಲಾರನು. ದಿನಕೊಂದು ಬಗೆಯಾಗಿ ಉಕ್ಕಿ ಬರುವ ವನವುಳ್ಳಂಥ ಈ ಬಾಲೆಯನ್ನು ಯೋಗ್ಯನಾದ ವರನಿಗೆ ಕೊಟ್ಟು ವಿವಾಹವಂ ಗೆಯ್ಯದೆ ಮನೆಯಲ್ಲಿ ಇರಿಸಿಕೊಂಡಿರುವುದು ನ್ಯಾಯವಲ್ಲ ' ಎಂದು ನುಡಿಯಲು; ಸುನಂದೆಯು, (ಎಲೈ ಸ್ವಾಮಿಯೆ ! ನೀವು ಹೇಳುವ ವಾಕ್ಯವು ಯುಕ್ತ ವೇ ಸರಿ. ಇವಳ ಮೃದುನುಡಿಗಳ ಚಮತ್ಕಾರವನ್ನೂ ಸಕಲ ವಿದ್ಯಗಳಲ್ಲಿರುವ ಜಾಣತನವನ್ನೂ ಸಹ ನೋಡುವಲ್ಲಿ ಒಂದು ಕ್ಷಣವಾದರೂ ಇವಳನ್ನು ಬಿಟ್ಟಿರುವು ದಕ್ಕೆ ಸ್ತ್ರೀಯಾದ ಎನ್ನ ಮನಸ್ಸು ಒಡಂಬಡದೆ ಇರುವುದು, ಇನ್ನು ಪುರುಷರ ವಿಚಾ ರವನ್ನು ಪೇಳತಕ್ಕದ್ದೇನು ? ” ಎಂದು ನುಡಿಯಲು; ಧನಗುಪ್ತನು-ನಾನು ರಾಯ ನಿಂದಲೂ ಮಂತ್ರಿಯಿಂದಲೂ ಅಪ್ಪಣೆಯಂ ಪಡೆದು ರತ್ನ ದ್ವೀಪಕ್ಕೆ ಪೋಗುವೆನೆಂದು ಪೋಗಿ, ಮರಳಿ ಬಂದು ವರ್ತಮಾನವನ್ನು ಇದುವರೆಗೂ ಅವರಿಗೆ ಶ್ರುತಪಡಿಸದೆ ಇದ್ರಲ್ಲಿ ಏನು ಸಂದೇಹವಂ ಪೊಂದುವರೋ ? ಮತ್ತು ಮಂತ್ರಿಯು ಶೀಘ್ರದಿಂದ ಧನಗುಪ್ತನು ಬರುವುದಕ್ಕೆ ನಿಮಿತ್ತವೇನೆಂದು ಹೇಳಿದನೆಂಬ ವರ್ತಮಾನವನ್ನು ಕೇಳಿ ರುವೆನು, ಮತ್ತು ಈ ಬಾಲೆಯು ದೊರಕಿದ ವಾರ್ತೆಯಂ ನಾನಾಗಿ ಮೊದಲೇ ಹೇಳದೆ ಮುಂತಿಯೇ ಇನ್ನು ಯಾರ ಮುಖದಿಂದಲಾದರೂ ತಿಳಿದಲ್ಲಿ ಎನ್ನ ಮೇಲೆ ದ್ವೇಷವನ್ನು ತಾಳದೆ ಇರನು. ಇದಕ್ಕೆ ನಿನ್ನ ಬುದ್ದಿಗೆ ಏನು ತೋರುವದು ? ” ಎಂದು ನುಡಿಯಲು: ನೀತಿಶಾಲಿಯಾದ ಸುನಂದೆಯು- ಎಲೈ ಕಾಂತನೆ, ಸಮಸ್ತಭೂಮಂಡ ಲಕ್ಕೂ ಮಂತ್ರಿಯಾಗಿ ಪ್ರಭು ಕಟಾಕ್ಷಕ್ಕೂ ಪಾತ್ರನಾಗಿ ನಮಗೆ ಬಹುದಿವಸದಿಂ ದಲೂ ಆಪ್ತನಾಗಿ ಬಲವಂತನಾಗಿರುವ ಮಂತ್ರಿಯಲ್ಲಿ ನಾವು ನಿಮಿತ್ತವಿಲ್ಲದೆ ದ್ವೇಷ ಮಂ ಸಂಪಾದಿಸಿಕೊಳ್ಳುವುದು ನ್ಯಾಯವಲ್ಲ. ಈಗ ಪೇಳದೆ ವಂಚಿಸಿದಲ್ಲಿ ಈ ವಾ ರ್ತೆಯು ಕಾಲಾನಂತರದಲ್ಲಾದರೂ ತಿಳಿದು ಅನರ್ಥವನು, ೦ಟುಮಾಡದೆ ಬಿಡದು.