ಪುಟ:ವತ್ಸರಾಜನ ಕಥೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ: -- ಬಲವಂತನಾದವನಲ್ಲಿ ವಿರೋಧವಂ ಗೈದು ಜೀವಿಸುವುದು ಯುಕ್ತವಾಗಿ ತೋರಲಾ ರದು, ನಾವು ನಿರ್ವಂಚನೆಯಿಂದ ಈ ವಾರ್ತೆಯಂ ಪೇಳಿದಬಳಿಕ ಮಂತ್ರಿಯು ಮನಬಂದಂತೆ ಕಾರವಂ ನಡೆಸಿಕೊಳ್ಳಲಿ ” ಎಂದು ನುಡಿಯಲು ; ಧನಗುಪ್ತನು ತನ್ನ ಪತ್ನಿ ಯ ವಾಕ್ಯವಂ ಯುಕ್ತವೆಂದು ತಿಳಿದು, ಮಂತ್ರಿಯ ಮನೆಯಂ ಕುರಿತು ಪೋಗಲು ; ಮಂತ್ರಿಯು ಕುಶಲಪ್ರಶ್ನೆ ಯಂ ಗೈದು,- ( ಅಯ್ಯಾ ವರ್ತಕರೇ, ರತ್ನ ದ್ವೀಪಕ್ಕೆ ಪೋಗುತ್ತಲಿದ್ದು ಸಮುದ್ರ ಮಧ್ಯದಿಂದ ಏನು ನಿಮಿತ್ತವಾಗಿ ಹಿಂತಿ ರುಗಿ ಬಂದಿರಿ? ೨ಎಂದು ನುಡಿಯಲು ; ಆ ವರ್ತಕನು ಮಂತ್ರಿಯನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಪೋಗಿ ರತ್ನಾ ವಳಿಯು ದೊರಕಿದ ಸಂಗತಿಯನ್ನು ವಿಸ್ತಾರ ವಾಗಿ ವಿಜ್ಞಾಪಿಸಲು ; ಮಂತ್ರಿಯು- ಅಯ್ಯಾ ವರ್ತಕರೇ, ಜಗತ್ತಿನಲ್ಲಿ ಇಲ್ಲದ ರೂಪವತಿ ಎಂದು ಹೇಳುವ ನಿಮ್ಮ ವಾಕ್ಯದಿಂದ ಆ ಸ್ತ್ರೀಯು ರಾಜಯೋಗ್ಯಳಾಗಿ ಕಾಣುವಳು. ಆ ಬಾಲೆಯನ್ನು ನಾನು ಒಂದುವೇಳೆ ನೋಡುವೆನೆ೦ಬ ಇಚ್ಚೆಯಿರು ವುದು ” ಎಂದು ನುಡಿಯಲು ವರ್ತಕನು ನುಂತಿ ಯ ತಾತ್ಸಲ್ಯವನ್ನು ತಿಳಿದು, ಆ ಬಾಲಕಿಯನ್ನು ಕರೆದುಕೊಂಡು ಬರುವೆನೆಂದು ನುಡಿದು, ತನ್ನ ಮನೆಗೆ ಬಂದು ಸೇರಲು ; ಇತ್ತಲು, ಮಂತಿ)ಯು- ಒಡೆದ ಹಗೆಯಮೇಲೆ ತೇಲುತ್ತಿದ್ದ ಬಾಲೆಯು ದೊರಕಿದಳೆಂದು ಪೇಳಿದ ವರ್ತಕನ ವಾಕ್ಯವನ್ನು ಆಲೋಚಿಸುವಲ್ಲಿ, ಎನ್ನ ಪತ್ರಿಕೆ “ ಯಿಂದ ಬರುತಿದ್ದ ಸಿಂಹಳದೇಶದ ರಾಜಪುತಿಯೋ, ಇಲ್ಲವಾದಲ್ಲಿ ವರ್ತಕನ ಮಗ ಲೇ ನಿಶ್ಚಯವೋ ತಿಳಿಯದು, ಎಂದು ಆಲೋಚಿಸುತ್ತಿರಲು ; ಧನಗುಪ್ತನು ತನ್ನ ಪತ್ನಿ ಯೊಡನೆ ಮಂತ್ರಿಯ ತಾತ್ಸರವಂ ವೇಳಲಾಕಾಂತೆ ಯು- ದೈವಯೋಗದಿಂದ ಈ ಬಾಲಕಿಯು ರಾಯನ ಅಂತಃಪುರವನ್ನು ಸೇರಿ ವತ್ವ ರಾಜನ ದೃಷ್ಟಿಗೆ ಗೋಚರಳಾದಲ್ಲಿ ಆ ರಾಯನು ಕ್ಷಣವಾದರೂ ಇವಳನ್ನು ಬಿಟ್ಟಿರಲಾ ರನು. ಆದರೆ ಈ ಬಾಲಕಿಯ ಅಭಿಪ್ರಾಯವೆಂತಿರುವುದೋ ತಿಳಿಯಬೇಕು ” ಎಂದು, ರತಾ ವಳಿಯಂ ಕರೆದು ಒತ್ತಿನಲ್ಲಿ ಕುಳ್ಳಿರಿಸಿಕೊಂಡು ... ಎಲೌ ಮಂಗಳಾಂಗಿಯೇ, ನಿನ್ನ ಚಿತ್ರಕ್ಕೆ ಆಯಾಸವು ತೋರದೆ ಇದ್ದಲ್ಲಿ ಒಂದು ವಾಕ್ಯವಂ ಪೇಳುವೆನು, ಅನ್ನ ವಸ್ತ್ರವನ್ನು ಕೊಟ್ಟು ಸಲಹಲಾರದೆ ಈ ವಾಕ್ಯವನ್ನು ಹೇಳಿದರೆಂದು ತಿಳಿಯದಿರು. ಯಾವ ಪ್ರಕಾರದಲ್ಲಾದರೂ ನೀನು ಅಧಿಕವಾದ ಐಶ್ವರವನ್ನು ಪೊಂದಿದಲ್ಲಿ ನಮ್ಮಂಥ ಬಹುಜನವನ್ನು ಸಂರಕ್ಷಿಸುವಳೆಂಬ ಸಂತೋಷ ವ ಎನಗೆ ಬಲವಾಗಿರುವುದು?” ಎನಲು; ರತ್ನಾ ವಳಿಯು- ಇವಳ ವಾಕ್ಯವನ್ನು ಕೇಳುವಲ್ಲಿ ಯಾವನೋ ಒಬ್ಬ ಐಶ್ವರ್ಯ ವಂತನ ಮನೆಯನ್ನು ಸೇರಿಸುವ ಳಾಗಿ ತೋರುವಳು. ಇವಳ ಮನೆಯ ಬಿಟ್ಟಲ್ಲಿ ವತ್ಸ ರಾಜನ ಅಂತಃಪುರವೊಂದು, ಅದಲ್ಲದಿದ್ದರೆ ಪರಲೋಕವೊಂದು, ಇವು ಎರಡ ಇದೆ ಎನಗೆ ಇನ್ನೊಂದು ಸ್ಥಾನವೂ ವಾಸಯೋಗ್ಯವಾಗಿ ತೋರುವುದಿಲ್ಲ ?” ವೆಂದು