ಪುಟ:ವತ್ಸರಾಜನ ಕಥೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಕಲಾನಿಧಿ, - ತಿಳಿದು- ಮೊದಲು ಸುನಂದೆಯ ಅಭಿಪ್ರಾಯವನ್ನು ತಿಳಿದಲ್ಲದೆ ಪುತ್ಯುತ್ತರವ ನೀಯಬಾರದು. ಇವರು ವರ್ತಕರಾದುದರಿಂದ ದ್ರವ್ಯದಾಸೆಗೆ ಇನ್ನು ಯಾರಿಗಾ ದರೂ ಮಾರಿದಲ್ಲಿ ನಾಲಗೆಯಂ ಹಿರಿದು ಪ್ರಾಣವಂ ಬಿಡುವೆನು ಲೋಕದಲ್ಲಿ ಸರರ ಮನೆಯಂ ಸೇರುವುದೇ ಬಹುಕಷ್ಟವಾಗಿರುವುದು, ದೌಸದಿಯು ವಿರಾಟರಾಯನ ಮನೆಯಂ ಪೊಂದಿ ಮಾನಭಂಗಕ್ಕೆ ಒಳಗಾದ ಸಂಗತಿಯು ಎನಗೆ ದೊರಕುವುದಾಗಿ ತೋರುವುದು ?” ಎಂದು ಯೋಚಿಸಿ, ಸುನಂದೆಯಂ ಕುರಿತು, (ಎಲೆ ತಾಯೇ, ಈರೀ ತಿಯಾಗಿ ಎನ್ನನ್ನು ಕೇಳುವುದಕ್ಕೆ ಕಾರಣವೇನಿರುವುದೋ, ಅದನ್ನು ಎನ್ನೊಡನೆ ವಂಚಿಸದೆ ಪೇಳಿ, ಆಬಳಿಕ ಮುಂದಿನ ಕಾಠ್ಯವನ್ನು ಆಲೋಚಿಸುವಳಾಗು ಎಂದು ಕಣ್ಣುಗಳಲ್ಲಿ ನೀರಂ ತುಂಬಿಕೊಳ್ಳಲು ; ಆ ಸುನಂದೆಯು ಅವಳ ಮುಖವಂ ನೋಡಿ, ಗಲ್ಲವಂ ಮುದ್ದಿಸಿ - ಎಲೌ ಕಲ್ಯಾಣಿಯೇ, ಕೇಳು, ನಿನ್ನ ರೂಪಿಗೆ ತಕ್ಕವನಾಗಿ ಅಖಂಡ ಭೂಮಂಡಲಕ್ಕೂ ದೊರೆಯಾಗಿರುವ ವತ್ಸ ರಾಜನ ಅಂತಃಪುರಕ್ಕೆ ಸೇರಿಸ ಬೇಕೆಂದು ಮಂತ್ರಿಯಾದ ಮೌಗಂಧರಾಯಣನು ಯೋಚಿಸಿ, ಮೊದಲು ನಿನ್ನ ನ್ನು ನೋಡಬೇಕೆಂದು ಇಚ್ಛೆಸುತ್ತಿರುವನು?” ಎನಲು ; ರತ್ನಾ ವಳಿಯು-IC ಎಲೆ ತಾಯೇ ಆ ಮಂತ್ರಿಯು ವೃದ್ದನೋ, ಯವನಸ್ಸನೋ, ಪಾವಭೀತನೋ, ದುಷ್ಟ ನೋ ? ಇವು ಮೊದಲಾದ ಅವನ ಗುಣಗಳಂ ಪೇಳುವಳಾಗು ' ಎಂದು ನುಡಿಯಲಾ ಸುನಂ ದೆಯು ಅವಳ ಮಾತಿಗೆ ಮೆಚ್ಚಿ ಎಲೆ ಸುಂದರಾಂಗಿಯೆ, ಕೇಳು, ಮಂತ್ರಿಯು ವೃದ್ದನಾಗಿ, ಪಾಪಭೀತನಾಗಿ, ಸ್ವಾಮಿಕಾಕ್ಯಾರ್ಥನಾಗಿ, ನೀತಿಪರನಾಗಿ, ಸ್ವಷ್ಟ ದ ಲ್ಲಾದರೂ ಪರಸ್ತ್ರೀಯರ ವಾರ್ತೆಯನ್ನು ಸ್ಮರಿಸದೆ ಇರುವನಾಗಿ, ಪ್ರಜಾಸಮ್ಮತನಾಗಿ ಇರುವನು, ಅವನಲ್ಲಿ ಯಾವ ಸಂದೇಹವನ್ನೂ ಹೊಂದಬೇಡ ?” ಎಂದು ನುಡಿಯಲು; ಧನಗುಪ್ತನೂ ರತ್ನಾ ವಳಿಯ ಅಭಿಪ್ರಾಯವನ್ನು ತಿಳಿದು ಎಲೆ ಕಲ್ಯಾಣಿಯೇ, ನಾನು ಪೂರೈಜನ್ಮದಲ್ಲಿ ಯಾರ ಮಕ್ಕಳಿಗೆ ಕಷ್ಟವನ್ನುಂಟುಮಾಡಿದೆನೋ, ಆ ಪಾಪದಿಂ ದಲೇ ನಾನು ಪುತ್ರಹೀನನಾಗಿರುವೆನು. ಹೀಗಿರುವಲ್ಲಿ ನಿನಗೆ ಸಂತೋಷವನ್ನು ೦ ಟುಮಾಡದೆ ಕಷ್ಟವನ್ನು ಹೊಂದಿಸಲಾರೆನು, ಈ ಮುಖ್ಯವಾದ ವಾಕ್ಯವನ್ನು ಕೇಳು. ಈ ಭೂಮಂಡಲಕ್ಕೆ ಅಧಿಪತಿಯಾಗಿ ಸುಂದರಾಂಗನಾದ ವತ್ಸ ರಾಜೇಂದ್ರನಿಗೆ ನಿನ್ನ ನ್ನು ಪತ್ನಿಯನ್ನಾಗಿ ಮಾಡಬೇಕೆಂದು ಇಚ್ಛೆಸಿರುವೆನು. ಏತಕ್ಕೂ ಚಿಂತಿಸಬೇಡ ? ಎಂದು ನುಡಿಯಲು ; ರತ್ನಾ ವಳಿಯು ಮನಸ್ಸಿನಲ್ಲಿ ಬಹಳ ಸಂತೋಷವಂ ಪೊಂದಿ, CC ಅಯ್ಯಾ ವರ್ತಕರೇ, ಎನ್ನ ಮಾನ ಪ್ರಾಣಗಳನ್ನು ನಿಮ್ಮ ಹಸ್ತಕ್ಕೆ ಒಪ್ಪಿಸಿರುವೆನೆಂದು ಮೊದಲೇ ನಾನು ಹೇಳಿರುವಲ್ಲಿ ಮರಳಿ ವಿಜ್ಞಾಪಿಸುವುದಕ್ಕೆ ಶಕ್ತಿ ಇಲ್ಲವು ?” ಎಂದು ನುಡಿಯಲಾ ಧನಗುಪ್ತನು ರಾಜಪತ್ನಿ ಯಾಗುವುದಕ್ಕೆ ಒಡಂಬಟ್ಟಿರುವ ರತ್ನಾ ವಳಿಯ ತಾತ್ಪರವಂ ತಿಳಿದು, ಅವಳನ್ನು ಪಾಲಕಿಯಲ್ಲಿ ಕುಳ್ಳಿರಿಸಿಕೊಂಡು, ಮಂತ್ರಿಯ ಮನೆಗೆ ಕರೆದುಕೊಂಡು ಪೋಗಿ, ಜನರೆಲ್ಲರನ್ನೂ ಹೊರಕ್ಕೆ ಹೊರಡಿಸಿ, ರತ್ನಾವಳಿ