ಪುಟ:ವತ್ಸರಾಜನ ಕಥೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, - ಯನ್ನು ಪಾಲಕಿಯಿಂದ ಇಳುಹಿಸಿ, ಮಂತ್ರಿಗೆ ನಮಸ್ಕಾರವಂ ಗೆಯ್ಯುವಂತೆ ಪೇಳ ಲು ; ಆ ಮಂತ್ರಿಯು ಆ ರತ್ನಾವಳಿಯ ಅಂದವಂ ನೋಡಿ, ಆಶ್ಚರವಂ ಪೊಂದಿ, “ ಈ ಸುಂದರಾಂಗಿಯನ್ನು ನಿರ್ಮಾಣವಂ ಗೈದವನು ಮನ್ಮಥನೋ, ಚಂದನೋ, ಆಗಿ ರಬೇಕಲ್ಲದೆ ಚತುರುಖಬ್ರಹ್ಮನಿಗೆ ಇಷ್ಟು ಕುಶಲತ್ವವು ದೊರಕಲಾರದು. ಇವಳು ಸಿಂಹಳದೇಶದ ಅರಸಿನ ಮಗಳೇ ಆಗಿರಬೇಕು ” ಎಂದು ಸಂದೇಹವಂ ಪೊಂದಿ, ಆಲೋಚಿಸುತಿರ್ದನು. ఎంబగి ಶಿ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾದ್ಧವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ಶ್ರೀಕೃಷ್ಯರಾದ ಸೂಕ್ತಿಮುಕ್ಯಾವೆಯೆಂಬ ಗ್ರಂಥದೊಳೆ ತೃತೀಯಗುಚ್ಛಂ ಸಂಪೂರ್ಣವಿ. .... ಪಂಚಮ ಗುಚ್ಚ೦. ಅನಂತರದಲ್ಲಿ ಆ ಮಂತ್ರಿಯು ತನ್ನಲ್ಲಿ ತಾನೇ ಯೋಚನೆಯಂ ಗೈದು, ಧನಗು ಪನನ್ನು ಏಕಾಂತಸ್ಥಳಕ್ಕೆ ಕರೆದು ಅಯ್ಯಾ, ವರ್ತಕರೇ, ಈ ಬಾಲೆಯು ಯಾರ ಮಗಳೆಂದು ಕೇಳಿದ್ದೀರಿ, ಯಧಾರವಾಗಿ ಪೇಳುವರಾಗಿ ” ಎಂದು ನುಡಿಯಲು ; ಆ ವರ್ತಕನು-II ಅಯ್ಯಾ ಮಂತ್ರಿಗಳೇ, ಕಾಶ್ಮೀರದೇಶದ ವರ್ತಕನಾದ ರತ್ನ ಗುಪ್ತನ ಮಗಳೆಂದು ಹೇಳುತ್ತಿರುವಳು ?” ಎಂದು, ಅವಳು ದೊರಕಿದ ಸಂಗತಿಯೆಲ್ಲ ವನ್ನೂ ವಿಸ್ತಾರವಾಗಿ ಶು ತಪಡಿಸಲು ; ಮಂತ್ರಿಯು ರತ್ನಾ ವಳಿಯ ವೃತ್ತಾಂತ ವನ್ನು ಕೇಳಿ- ಅಯ್ಯಾ ವರ್ತಕರೇ, ಈ ಬಾಲೆಯನ್ನು ನೋಡಿದಾಗಲಿಂದಲೂ ಭೂಮಿಯಲ್ಲಿ ವಾಸವದತ್ತಾ ದೇವಿಗೆ ಸಮಾನವಾದ ರೂಪುಳ್ಳ ಸ್ತ್ರೀಯೇ ಇಲ್ಲವೆಂಬ ಸಂದೇಹವು ಪರಿಹರವಾದುದು, ಮತ್ತು ಇವಳನ್ನು ವತ್ಸ ರಾಜೇಂದ್ರನಿಗೆ ಒಪ್ಪಿಸಿದಲ್ಲಿ ರಾಯನು ಇವಳಲ್ಲಿ ಅನುರಕ್ತನಾಗಿರುವುದಕ್ಕೆ ಸಂದೇಹವಿಲ್ಲ. ನಾನಾಗಿ ದಂಪತಿ ಗಳಿಗೆ ವಿರೋಧವನ್ನು ೦ಟುಮಾಡುವೆನು, ಮತ್ತು ಈ ವೃತ್ತಾಂತವನ್ನು ವಾಸವದ ತಾದೇವಿಯು ತಿಳಿಯದೆ ಇರಳು, ಆಬಳಿಕ ಎನ್ನಲ್ಲಿ ಈಗಿರುವ ಬಲವಾದ 3 ತಿ ಯನ್ನು ಬಿಟ್ಟು ಬಲವಾದ ವಿರೋಧವಂ ತಾಳದೆ ಬಿಡಳು. ರಾಜೇ೦ದನು ತಿಳಿಯ ದಂತೆ ದೇವಿಯ ಸನ್ನಿಧಾನಕ್ಕೆ ಒಪ್ಪಿಸುವುದು ಯುಕ್ತವು, ಏಕೆಂದರೆ ಅಂತಃಪುರ ದಲ್ಲಿ ಸಂಚರಿಸುವ ಈ ಭಾಮೆಯನ್ನು ದೈವಯೋಗದಿಂದ ರಾಯನು ಕಂಡಲ್ಲಿ ವಿವಾ ಹವಾಗದೆ ಬಿಡನು. ಹಾಗಾದಲ್ಲಿ ನನ್ನ ಮೇಲಣ ನಿಷ್ಣು ರತ್ವವು ತಪ್ಪಿ ಹೋಗುತ್ತಲಿರು