ಪುಟ:ವತ್ಸರಾಜನ ಕಥೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. -

ಅವಳು ತಮ್ಮ ಸನ್ನಿ ಧಿಗೆ ಬಂದಬಳಿಕ ಸತ್ವವೂ.ಚಿತ್ತಕ್ಕೆ ವೇದ್ಯವಾಗುತ್ತಿರುವುದು ?? ಎನಲು; ದೇವಿಯು- ಅಂಥ ಬಾಲಕಿಯು ನಮ್ಮ ಊಳಿಗಕ್ಕೆ ಅಗತ್ಯವಾಗಿ ಬೇಕಾ ಗಿರುವಳು. ಇಲ್ಲಿಗೆ ಕರೆದುಕೊಂಡು ಬರುವರಾಗಿ 2' ಎಂದು ನುಡಿಯಲು ; ಮಂತಿ ) ಯು ಪೋಗಿ ಗೋಪ್ಯವಾಗಿ ರತ್ನಾ ವಳಿಯನ್ನು ಪಾಲಕಿಯಲ್ಲಿ ಕುಳ್ಳಿರಿಸಿಕೊಂಡು ಅಂತಃಪುರಕ್ಕೆ ಕರೆತಂದು ಪಾಲಕಿಯಿಂದಿಳುಹಿಸಿ, ಕೆಯ್ಯಂ ಪಿಡಿದು, ಮುಂದಕ್ಕೆ ಕರೆತರುತ್ತ- ಎಲೆ ಬಾಲಕಿಯೇ, ಮುಂಬಾಗದಲ್ಲಿರುವ ರತ್ನ ಪೀಠದಲ್ಲಿ ರಾಜಿಸುವ ವಾಸವದತ್ತಾ ದೇವಿಯ ಪಾದಕ್ಕೆ ವಂದನೆಯಂ ಗೆಯ್ಯುವಳಾಗು ' ಎಂದು ನುಡಿ ಯಲು ; ರತ್ನಾ ವಳಿಯು ಪಾದಸರ ಗಗ್ಗರಗಳು ಘಲುಘಲೆಂದು ಕರ್ಣಸುಖವನ್ನು ಟುಮಾಡುವಂತೆ ಅಡಿಗಳನ್ನಿಟ್ಟು, ಮುಡಿಯಲ್ಲಿ ಮುಡಿದ ಮಾಲೆಗಳು ಮಂಡೆಯಂ ಮುಚ್ಚುತ ಮನೋಹರವಾಗುವಂತೆ ಮಂಡಿಗಳನ್ನೂ ರಿ, ಸೊಗಸಾಗಿ ನಮಸ್ಕಾರವಂ ಗೈದು, ತಲೆಯಂ ತಗ್ಗಿಸಿ, ಎದ್ದು ನಿಂತಿರಲು ; ವಾಸವದತ್ತಾದೇವಿಯು ಸರಿಯಾಗಿ ಸೇರಿಸಿರುವ ಮರಿದುಂಬಿಗಳ ಪರಿಯನ್ನನುಸರಿಸಿರುವ ಮುಂಗುರುಳುಗಳಿ೦ ಕೂಡಿದ ಮುಖಚ೦ದ ನಿ೦ ಏಳುತ್ತಿರುವ ಬಾಲಚಂದನೋ ಎಂಬಂತಿರುವ ವಜದ ಬೆಟ್ಟಿ ನಿಂದಲೂ, ಹುಬ್ಬುಗಳೆ೦ಬ ಕಾಮನ ಬಿಲ್ಲಿನ ಮಧ್ಯದಲ್ಲಿ ಕೆತ್ತಿದ ಕುರುವಿಂದದ ಮಣಿ ಯೋ ಎಂಬಂತಿರುವ ಕುಂಕುಮದ ಚುಕ್ಕಿಯ ಬೊಟ್ಟಿನಿಂದಲೂ, ಮಾರನು ಮೂ ರುಲೋಕವಂ ಜಯಿಸಲೋಸುಗ ಮುಖಚಂದ್ರನಿಗೆ ಬರೆದು ಕಳುಹಿಸಿದ ಪತ್ರಿಕೆಯೋ ಎಂಬಂತೆ ಸೊಗಸಾಗಿರುವ ಮಕರಿಕಾ ಪತ್ರಿಕೆಯಿಂದಲೂ, ಮಾರನ ಬಾಣಗಳ ತುದಿಯಲ್ಲಿ ಇಂದ್ರನೀಲಮಣಿಯಿಂ ಒತ್ತು ರೇಖೆಯಂ ಬರೆದಿರುವರೋ ಎಂಬಂತೆ ಶೋಭಿಸುವ ಕಣ್ಣು ಗಪ್ಪಿನ ಸೋಗೆಯಿಂದಲೂ, ಸಂಪಗೆಯ ಮೊಗ್ಗಿನ ತುದಿಯಲ್ಲಿ ಮೂಡಿದ ಮಲ್ಲಿಗೆಯೋ ಎಂಬಂತೆ ಒಪ್ಪುವ ಮೂಗುಬೊಟ್ಟಿನಿಂದಲೂ, ಒಂದೇ ಸ್ಥಳ ದಲ್ಲಿ ಹುಟ್ಟಿದ ಮಿತ್ರತ್ವದಿಂದ ಮುಖಚಂದ ನಂ ನೋಡಲೋಸುಗ ಬಂದಿರುವ ಸವ ಳಗಳೋ ಎಂಬಂತಿರುವ ತುಟಿಗಳಿಂದಲೂ, ಮುತ್ತಿನ ಕೆನ್ನಿ ರಂತೆ ಮುದ್ದಾಗಿ ಮುಖ ದಲ್ಲಿ ತಳತಳಿಸುವ ಯಯೌವನದ ಸೊನೆಯಿಂದಲೂ, ಮೊಳಗಿತೋರುವ ತೊಟ್ಟು ಗಳಿ೦ ದೊಪ್ಪಿ ಮಟ್ಟು ವಿಾರಿದ ಕಾಂತಿಯಂ ಪಟ್ಟ ಸುತ್ತ ಕಡೆದು ಮಡಗಿದ ಚಿನ್ನದ ಗುಂಡು ಗಳೋ ಎಂಬಂತೆ ಹೊಳೆಯುವ ಕುಚಗಳಿಗೆ ಸಂದುಸೇರುವೆಯಂ ಗೈದಂತೆ ಪಿಡಿ ದರೆ ಒಡೆಯುವಂತೆ ತೊಟ್ಟಿರುವ, ಸರಿಗೆಯಂ ಬರೆದ ಚಂದಗಾವಿಯ ಕುಪ್ಪಸದ ವೈಖರಿಯಿಂದಲೂ, ಕಚಕುಚಗಳ ಭಾರದಿಂದ ಬಡವಾಗಿರುವ ನಡುವಿಗೆ ಬಿಗಿ .ಯಾಗಿ ತೊಡಿಸಿರುವ ರತ್ನ ದ ಕಟ್ಟಿನಂತೆ ಮೆರೆಯುವ ಒಡ್ಯಾಣದ ಒಯ್ಯಾರದಿಂದ ಲೂ, ಗಂಡುನವಿಲು ತನ್ನ ಗರಿಗಳನ್ನು ಹರಹಿದ ಪರಿಯನ್ನು ತೋರುತ್ತಿರುವಂತೆ ಸೀರೆ ಯ ನಿರಿಗಳಂ ಪಸರಿಸುವ ಬೆಡಗಿನಿಂದಲೂ, ಮಾರನು ಮೂರು ಲೋಕಗಳಂ ಜಯಿಸಿ ನಾರಿಯಂ ಸಡಿಲಿಸಿ ನಿಲ್ಲಿಸಿದ ಬಿಲ್ಲಿನಂತೆ ಕೊಂಕುಗೂಡಿ ನಿಂತಿರುವ ರೀತಿಯಿಂದಲೂ,