ಪುಟ:ವತ್ಸರಾಜನ ಕಥೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 - ವತ್ಸರಾಜನ ಕಥೆ, - ತೆಗೆದುಕೊಳ್ಳುತ್ತಿದ್ದ ನಾನು ಈಗ ಸಾಧಾರಣ ಸ್ತ್ರೀಯರೊಡನೆ ಹೇಗೆ ಊಳಿಗವಂ ಗೆಯ್ಯಲಿ ! ೨” ಎಂದು ಯೋಚಿಸುತ್ತಿರಲು ; ದೇವಿಯು ರತ್ನಾ ವಳಿಯಂ ನೋಡಿ~ಇವ ಳ ರೂಪೇ ಮನೋಹರವಾಗಿರುವುದು, ಇವಳಲ್ಲಿ ವಿದ್ಯಾಬುದ್ದಿ ಕೌಶಲವು ಎಂತಿ ರುವುದೋ ತಿಳಿಯಬೇಕೆಂದು, ಅವಳಂ ಕುರಿತು-ಎಲೆ ಬಾಲೆಯೇ, ನಿನ್ನ ವೃತ್ತಾಂತ ವನ್ನು ಮಂತ್ರಿಯ ಮುಖವಚನದಿಂದ ಕೇಳಿದ್ದರೂ ನಿನ್ನ ಮುಖದಿಂದ ಮರಳಿ ಕೇಳ ಬೇಕೆಂಬ ಇಚ್ಛೆಯು ತೋರುವುದರಿಂದ ವೀಳುವಳಾಗು ” ಎನಲು ; ರತ್ನಾ ವಳಿಯು ಕರಗಳ೦ ಮುಗಿದು- ಎಲೌ ದೇವಿಯ, ಮಂದಭಾಗ್ಯಳಾದ ಎನ್ನ ವಾರ್ತೆಯನ್ನು ಪೇಳುವ ಎನ್ನ ಹೃದಯವು ಶೋಕಾ) ಯಿಂದ ಸುಡುವದಲ್ಲದೆ ಕೇಳುವಂಥ ನಿಮಗೂ ಸೇಳಬಾರದ ವ್ಯಥೆಯು ಸಂಭವಿಸುತ್ತಿರುವುದು' ಎಂದು ಕಂಬನಿಗಳಂ ತುಂಬಿ ನಿಲ್ಲಲು; ವಾಸವದತ್ತಾ ದೇವಿಯು ಅವಳ ವ.ಖಮಂ ನೋಡಿ -1( ಎಲೌ ಬಾಲೆಯೇ, ನೀನು ಯಾವುದಕ್ಕೂ ವ್ಯಸನಂ ಪೊಂದಬೇಡ ?” ಎಂದು ನುಡಿದು, ತನಗೆ ಆಪ್ತಳಾದ ಕಾಂ ಚನಮಾಲೆಯಂ ಕರೆದು- ಎಲೆ ಕಾಂತೆಯೇ, ಈ ಬಾಲೆಯು ಸಾಗರದಲ್ಲಿ ಸಿಕ್ಕಿದು ದರಿಂದ ಎಲ್ಲರೂ ಇವಳನ್ನು ಸಾಗರಿಕೆಯೆಂದು ಕರೆಯತಕ್ಕುದು, ಮತ್ತು ಪ್ರಶಾಲೆ ಯಲ್ಲಿ ಇರುವ ಕಲರ್ವಾಣಿ, ಪ್ರಣಾಳಿಕೆ, ಮದನಿಕೆ, ಕಾಮಲತಿಕೆ ಮುಂತಾದ ಕಾಂತೆಯರ ಮೇಲುವಿಚಾರಣೆಯಂ ತೆಗೆದುಕೊಳ್ಳುತ, ಪ್ರಶಾಲೆಗೆ ಅವಳನ್ನು ಗೊತ್ತುಗೈದು, ನಾನು ಕರೆಯಿಸಿದಾಗ ಇಲ್ಲಿಗೆ ಬರುವಂತೆಯೂ ಇನ್ನೊಂದು ಸ್ಥಳಕ್ಕೆ ಎನ್ನಾಜ್ಞೆಯಿಲ್ಲದೆ ಪೋಗದಂತೆಯ ವೇಳೆ, ಈ ನಾಗರಿಕೆಯನ್ನು ಪತ್ನಿಶಾಲೆಗೆ ಕರೆ ದುಕೊಂಡು ಹೋಗುವಳಾಗು ಎಂದು ಅಪ್ಪಣೆಯನ್ನಿಯಲು ; ಕಾಂಚನಮಾಲೆಯು - ಆಜ್ಞೆಯಾದಂತೆ ನಡೆದುಕೊಳ್ಳುವೆನೆಂದು ಆ ನಾಗರಿಕೆಯನ್ನು ಪ್ರಶ್ನಿ ಶಾಲೆಗೆ ಕರೆದು ಕೊ೦ಡುಬಂದು, ಅಲ್ಲಿರುವ ಸ್ತ್ರೀಯರಿಗೆಲ್ಲಾ ದೇವಿಯ ಅಪ್ಪಣೆಯಂ ಪೇಳಿ ಎಲೆ ನಾಗರಿಕೆಯೆ, ದೇವಿಯು ನಿನ್ನ ಎದುರಾಗಿ ಅಣೆಯ ತಿರುವಲ್ಲಿ ಮರಳಿ ನಿನಗೆ ಪೇಳತಕ್ಕ ವಾಕ್ಯಗಳಿಲ್ಲ. ಬುದ್ದಿವಂತೆಯಾಗಿ ಇದ್ದು ಕೊಂಡು ಇರುವಳಾಗು ?” ಎ೦ದು ಪೇಳಿ, ದೇವಿಯ ಸಮೀಪಕೆ ಪೋಗಲು ; ನಾಗರಿಕೆಯು ಸಂತುಷ.೪ಾಗಿ, “ ದೇವರು ಕಣ್ಣು ಕಿತ್ತು ಮತಿಯಂ ಕೊಟ್ಟಂ ತೆ, ಎನಗೆ ಯೋಗ್ಯವಾದ ಊಳಿಗವೇ ದೊರಕಿತು ” ಎಂದು ಸುತ್ತಲೂ ಪ್ರಶಾಲೆ ಯಂ ನೋಡಿ, ಅಲ್ಲಲ್ಲಿ ಹುಲ್ಲೆಯ ಮರಿಗಳಿಗೆ ಎಳಗರುಕೆಯ ಭಾ೦ತಿಯನ್ನು ಉಂಟು ಮಾಡುತ್ತಿರುವ ಪಚ್ಚೆಯ ರತ್ನ ಗಳಿಂದ ಹೆಚ್ಚಾದ ಕಾಂತಿಯನ್ನುಂಟುಮಾಡುವ ಭೂಮಿ ಯನ್ನೂ, ಪಾರಿವಾಳ ಪಕ್ಷಿಗಳಿಗೆ ನೀರಿನ ಭಾಂತಿಯನ್ನು ಹೇರಳವಾಗಿ ಉಂಟುಮಾ ಡುತ್ತಿರುವ ವಜದ ಹಾಸರೆಗಲ್ಲುಗಳಿಂದ ಪರಿಶೋಭಿಸುವ ಸ್ಥಳಗಳನ್ನೂ, ಮಿಂಚುತ್ತ ೬೦ಚೆಮರಿಗಳಿಗೆ ಕೊಂಚವಾಗಿ ಕಮಲಗಳ ಶಂಕೆಯ೦ ಬೀರುವ ಪದ್ಮರಾಗ ಮಣಿ ಗಳ ಜಗಲಿಯನ್ನೂ, ಶೈತ್ಯಕ್ಕೆ ಜನ್ಮಭೂಮಿಯಾಗಿ ಹಾರಿ ಜಾರಿ ಬಾಯಾರಿ ಬಂದ