ಪುಟ:ವತ್ಸರಾಜನ ಕಥೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - ಪ್ರಯತ್ನಗಳು ನಡೆಯಲಾರವು, ಅಥವಾ ನಡೆದರೂ ನಿಮಗೂ ರಾಯನಿಗೂ ಹಬ್ಬಿ ಕೊಂಡಿರುವ ವಿಶ್ವಾಸವು ಕೆಟ್ಟು ವಿರೋಧವು ದೊರಕುವದರಲ್ಲಿ ಸಂದೇಹ ಕಾಣಿ ಸಲಾರದು. ದೊರೆಯ ಕಟಾಕ್ಷವು ದೊರಕಬೇಕೆಂದು ಎಲ್ಲರೂ ಅಪೇಕ್ಷಿಸುವರಾದು ದರಿಂದ ಇಲ್ಲಿ ಇರುವ ನಮ್ಮ ಊಳಿಗದ ಪೆಣ್ಣುಗಳಲ್ಲಿ ಯಾವಳಾದರೂ ಇವಳ ವಾರ್ತೆ ಯನ್ನು ರಾಯನಿಗೆ ಬಿನ್ಲೈಸದೆ ಬಿಡಳು. ಆ ಬಳಿಕ ತುಟಿಯ ಮೀರಿದ ಹಲ್ಲು ಮುರಿ ಯುವುದಕ್ಕೂ ಮುಚ್ಚಿಕೊಳ್ಳುವುದಕ್ಕೂ ಹೇಗೆ ಆಗದೆ ಇರುವುದೋ, ಆ ರೀತಿ ಯಿಂದ ನಿಮ್ಮ ಶಿಕ್ಷೆಗೂ ರಕ್ಷೆಗೂ ಸಿಕ್ಕದೆ ಪೋಗುವಳು. ತುರುಚನ ಹಂಬನ್ನು ಮುಟ್ಟಿ ತುರಿಸಿಕೊಳ್ಳುವುದಕಿಂತಲೂ ಮುಟ್ಟದೆ ದೂರವಾಗಿ ಬಿಟ್ಟು ಕಳೆಯುವುದೇ ನ್ಯಾಯವಾಗಿ ತೋರುವಂತೆ, ಇವಳನ್ನು ಬಂದ ದಾರಿಯಲ್ಲಿ ಪೊಂದಿಸಿದಲ್ಲಿ ಮುಂದೆ ಯಾವ ವಿಚಾರದಲ್ಲಿ ನಿಮ್ಮ ಮನಸ್ಸಿಗೆ ವ್ಯಥೆಯು ಪಟ್ಟ ಲಾರದು. ಇವಳು ಅಂತಃ ಪುರದಿಂದ ಪೋದರೆ, ಸಮಸ್ತವಾದ ಊಳಿಗಗಳೂ ನಿಂತು ಪೋಗುವುದೆಂದು ಚಿತ್ರಕೆ ತೋರಿ ಇದ್ದಲ್ಲಿ ಇವಳನ್ನು ಇಲ್ಲೇ ಇರಿಸಿಕೊಂಡಿರಬಹುದು, ಇದುವರೆಗೂ ಇವ ಳಿಂದಲೇ ಸಮಸ್ತ ಕಾರವೂ ನಿಲ್ವಾಹವಾಗುತ್ತ ಇರಲಿಲ್ಲ. ಆದರೆ ತಮ್ಮ ಅಭಿವೃದ್ಧಿ ಯನ್ನು ಬಯಸುತ್ತಿರುವ ಗೌಡಿಯಾದುದರಿಂದ ಶಕ್ತಿಯಂ ವಿಾರಿ ವಿಜ್ಞಾಪನೆಯಂ ಗೈದಿರುವೆನು. ಇದರಮೇಲೆ ಪ್ರಭುಗಳಾದ ತಮ್ಮ ಚಿತ್ರಕ್ಕೆ ಸಮ್ಮತವಾದಂತೆ ಕಾರ್ ವಂ ನಡೆಸಬಹುದು ?” ಎಂದು ಬಿನ್ಲೈಸಲು ; ದೇವಿಯು ಆಗಿನವೇಳೆಗೆ ಕಾಂ ಚನಮಾಲೆಯ ವಚನಗಳ ಸಮ್ಮತಗಳಾಗಿ ತೋರಿದುದರಿಂದಲೂ, ಕಿವಿಗಳೇ ದೊರೆ ಗಳ ಕಣ್ಣುಗಳಾದುದರಿಂದಲೂ, ಅವಳ೦ ಕುರಿತು ಎಲೆ ಸ್ತ್ರೀಯೇ, ಈಗ ನೀನು ಪೇಳಿದ ವಾಕ್ಯವು ನಿಶ್ಚಯವೇ ಸರಿ. ಅಗರೆ ಈಗ ಪತ್ನಿ ಶಾಲೆಗೆ ಪೋಗಿ ಯಾವುದಾ ದರೂ ಒಂದು ನೆಪವಂ ಗೈದು ಅಪರಾಧಗಳನ್ನು ಅವಳಲ್ಲಿ ನಿಶ್ಚಯಿಸಿ, ಇಲ್ಲಿಂದ ಪೊರ ಮಡಿಸಬೇಕಲ್ಲದೆ ವ್ಯರ್ಥವಾಗಿ ಕೋಪಿಸಿ ಕಳುಹಿಸುವುದು ನ್ಯಾಯವಲ್ಲ ” ವೆಂದು ಪತ್ನಿಶಾಲೆಯ ಸವಿಾಪಕ್ಕೆ ಒ೦ದು- ಎಲೆ, ಕಾಂಚನಮಾಲೆಯೆ, ನಾವಿಬ್ಬರೂ ಆ ಸಾಗರಿಕೆಯು ಕಾಣದಂತೆ ನಿಂತು ಅವಳು ಮಾಡುವ ವಿಚಾರಣೆಯ ನೀತಿಯನ್ನೂ ದೇಷ್ಟೆ ಗಳನ್ನೂ ಸಹ ನೋಡುವ ” ಎನ್ನಲು ; ಕಾಂಚನಮಾಲೆಯು 14 ಈಗ ದೇವಿಯರು ಚೆನ್ನಾಗಿ ಅಪ್ಪಣೆಯನ್ನಿ ತಿರುವಿರಿ ” ಎ೦ದು, ಗವಾಕ್ಷ ರಂಧಗಳಲ್ಲಿ ಕಾಂಚನಮಾಲೆಯ ದೇವಿಯ ಸಹ ನೋಡುತ್ತಿರಲು ; ಇತ್ತಲು, ಸಾಗರಿಕೆಯು ಒತ್ತಿನಲ್ಲಿ ಬಿತ್ತರವಾಗಿ ಚಿತ್ರವಾಗಿ ಉತ್ತಮವಾಗಿ ರುವ ಮಾಕಂದವನದ ಸದ್ಯಸರೋವರದಲ್ಲಿ ಸ್ನಾ ನವಂ ಗೈದು; ಗರಿ ಮುರಿಯದೆ ಪಾಲ ನೊರೆಯಂತೆ ವೆ ರೆಯುತ್ತ, ಸರಿಗೆಯ ಸೆರಗಿನಿಂದ ಪರಿಶೋಭಿಸುತ್ತಿರುವ ಸೀರೆಯ ನ್ನು ಟ್ಟು; ಕರಿಯ ಕವಚ ತೊಡಿಸಿದ ಕಾಮನ ಕೈ ಕಠಾರಿಗಳಂತೆ ಮೆರೆಯುತ್ತ ಕ್ಷಣ ಕ್ಕೊಂದು ಸರಿಯಾಗಿ ಉಬ್ಬಿ ಬರುವ ಕುಚಗಳನ್ನು ಮೇಘವರ್ಣದಂತೆ ಮೇಲಾದ