ಪುಟ:ವತ್ಸರಾಜನ ಕಥೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ಕರ್ಣಾಟಕ ಕಾವ್ಯಕಲಾನಿಧಿ, - ಕುಪ್ಪಸದಿಂದ ಅರೆಯಾಗಿ ತೋರುವಂತೆ ಬಿಗಿದು , ಹದವರಿದು ಕಟ್ಟಿದ ತುದಿಗಂಟಿ ನಿಂದೊಪ್ಪಿ ನವಿಲುಗರಿಯ ನಾಚಿಕೆಯ೦ ತೆಗೆದು, ಮೋಡದ ಮುಖಭಂಗವಂ ಗೈದು, ಕತ್ತಲೆಯ ಕಾಂತಿಯನ್ನೂ ತರಿಸಿ, ಅರೆಯಾಗಿ ಒಂದು ಪರಿಯಾಗಿ ಕಿವಿಗಳಂ ಮುಳ್ಳಿ, ತುದಿಯಲ್ಲಿ ಅರೆಬಿರಿದ ಇರುವಂತಿಗೆಯ ಮಾಲೆಯಿಂದ ಮೇಲಾಗಿ ನಿತಂಬಗಳಲ್ಲಿ ಜೋಲುತ್ತ ತುಂಬಿಗಳ ಗರಿಯ ಕರಿಯ ಬಣ್ಣಕ್ಕೆ ಸರಿಯಾಗಿ ಮೆರೆಯುತ್ತಿರುವ, ಕೇಶ ಕಲಾಪದಿಂ ವಿಭೂಷಿತಳಾಗಿ ; ಮುಖಕಮಲಕ್ಕೆ ಸರಿಯಾಗಿ ಎರಗಿದ ಮರಿದುಂಬಿಗಳ ಪರಿಯಂ ಅನುಸರಿಸಿ ಮೆರೆಯುವ ಕರೀತಿಲಕದಿಂದ ಪರಿಶೋಭಿಸುತ್ತ; ಮನ್ನ ಥನ ಪಟ್ಟದ ರಾಣಿಯ ಗಜದ ಕುಂಭಸ್ಥಳದಲ್ಲಿ ಅಲಂಕರಿಸಿದ ದುಂಡುಮಲ್ಲಿಗೆಯ ದಂಡೆಯೋ ಎಂಬಂತೆ ಮೆರೆಯುವ ಆಣಿ ಮುತ್ತಿನ ಮಾಲೆಯಿಂದ ಮೇಲಾದ ಕುಚ ಕುಂಭಗಳಿಂದ ಮನೋಹರಳಾಗಿ ; ಆ ಪಕ್ಷಿಶಾಲೆಯ ಮಧ್ಯದಲ್ಲಿರುವ ಪೀಠದಲ್ಲಿ ಕುಳಿ ತು; ಅಲ್ಲಿರುವ ಊಳಿಗದ ಹೆಣ್ಣು ಗಳ೦ ಕುರಿತು- " ಎಲೆ, ಚಂದ್ರಮುಖಿಯೇ, ನೀನು ಚಕವಾಕಪಕ್ಷಗಳ ಹಿಂಡಿಗೆ ನುಗ್ಗದೆ ಹಿಂದಿರುವಳಾಗು. ಎಲೆ ನಾಗವೇಣಿ ಯೇ, ನವಿಲುಗಳು ನಾಟ್ಯವಾಡುವ ಸ್ಥಳಕ್ಕೆ ನಲಿಯುತ್ತ ಪೋಗದಿರು. ಎಲೈ ಸಿಂಹ ಮಧ್ಯಳೇ, ಉಲ್ಲಾಸದಿಂದ ಹುಲ್ಲುಗಳು ಮೆಲ್ಲುತ್ತಲಿರುವ ಹುಲ್ಲೆಯ ಮರಿಗಳ ಮರಕತದ ಮನೆಯ ಹೊಸತಿಲ ಮೆಟ್ಟ ದಿರು, ಎಳೆ ಪಲ್ಲವರ್ಪಾಣಿಯೇ, ನೀನು ನಿಂತಲ್ಲಿ ನಿಲ್ಲದ ಕೋಗಿಲೆಗಳಿರುವ ಗೂಡುಗಳಿಗೆ ಕೆಯ್ಯಂ ನೀಡದಿರು ಎಲೆ ಬಿಂ ಬಾಧರೆಯೇ, ನೀನು ಹಂಬಲಿಸುತ್ತ ಇ೦ಪಾಗಿ ಪಂಜರದಲ್ಲಿ ರಂಜಿಸುತ್ತ ಕಿವಿಗಿಂ ಪಾದ ಸೊಲ್ಲುಗಳ೦ ಸೊಲ್ಲಿಸುತ್ತಿರುವ ಗಿಳಿಗಳ ಬಳಿಯಲ್ಲಿ ಸುಳಿಯದೆ ಸುಮ್ಮನಿರುವ ೪ಾಗು. ಎಲೆ ಪಿಂಗಾಯೆ, ಮುಂಗಡೆಯಲ್ಲಿ ಮಂಗಳವಾದ ಅಂಗಳದಲ್ಲಿ ಮೇವ ರಿತು ಮೆಲ್ಲುತ್ತ ಸಂಚರಿಸುತ್ತಿ ರುವ ಪಾರಿವಾಳಗ ಪಕ್ಷಿಗಳಂ ಹಾರಿಸುವೆನೆಂದು ಓರೆ ನೋಟಗಳಿ೦ ನೋಡಿ ಒಯ್ಯಾರವಂ ತೋರಿ ಎನ್ನ ಮಾತುಗಳಂ ಮಿಾರಿ ಪೋಗದೆ ನಿಲ್ಲುವಳಾಗು. ಎಲೆ ಘನಕೇತಿಯೇ, ಹಸಿವಿನಿಂದ ಹಂಬಲಿಸುತ್ತ ಚಪಲಗಳಾದ ಚಾತಕ ಪಕ್ಷಿಗಳ ಮರಿಗಳಿಗೆ ಹಿಮಜಲಬಿಂದುಗಳಂ ಕೊಟ್ಟು ಸಂತೋಷವಂ ಪಟ್ಟಿ ಸುವಳಾಗು. ಎಲೆ ಕಮಲಮುಖಿಯೇ, ನಡುಬಾವಿಯ ತಡಿಯಲ್ಲಿ ಎಡೆಯಾಡುತ್ತ ಎಡೆಬಿಡದೆ ಕೆ೦ಕಾರವಂ ಗೆಯ್ಯುವ ಅಂಚೆಯ ಮರಿಗಳಿಗೆ ಸಂಚರಿತು ಮಿಂಚುತ್ತಿ ರುವ ತಾವರೆಯ ದಂಟುಗಳನ್ನು ಮೆಲ್ಲಿಸುವಳಾಗು. ಎಲೆ ತುಂಬುಜವ್ವನದ ಕುಂಭ ಕುಚೆಯೇ, ನೀನು ನಿನ್ನ ಪೆರ್ಮೊಲೆಗಳಂ ಪೊರುವುದೆ ನಿನಗೆ ಊಳಿಗವಾಗಿರುವುದ ಲ್ಲದೆ ದೇವಿಯರು ಬಿಜಯಂಗೆಯ್ಯುವ ದಾರಿಗೆ ಕಸ್ತೂರಿಯ ಸಾರಣೆಗೈದು ಕುಂಕು ಮದ ಕಾರಣೆಯಂ ಬಿಟ್ಟು, ಪಚ್ಚಗಪ್ಪರದ ರಂಗವಲಿಯನ್ನಿ ಕುವುದಂ ಮರೆದು ಸೊಕ್ಕಿನಿಂದಿರುವುದು ನ್ಯಾಯವೆ ಪೇಳು. ಎಲೆ ಶುಕವಾಣಿಯೇ, ಎಚ್ಚರಿಕೆ ಪರಾ ಕೆಂದು ದೇವಿಯರ ಬಿರುದು ಪದ್ಯಗಳಂ ಪರಿಪರಿಯಾಗಿ ಮಾಡುವುದಲ್ಲ ಮರೆತು ಮರು