ಪುಟ:ವತ್ಸರಾಜನ ಕಥೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ - ಕರ್ಣಾಟಕ ಕಾವೃಕಲಾನಿಧಿ, - ಇ೦ದುಕಾ೦ತ ಶಿಲೆಯಿ೦ ಸುಂದರವಾದ ದೇವಿಯ ಗದ್ದುಗೆಯಂ ಸಿದ್ಧವಂ ಗೆಯ್ಯದೆ ಮುಗ್ಧಳಂತೆ ಮುಖವನ್ನೆತ್ತಿ ಹಾರುವ ಪಾರಿವಾಳಗಳನರೆದೃಷ್ಟಿಯಿಂದ ಏಕೆ ನೋ ಡುತ್ತ ನಿಂದಿರುವೆ.? ಎಲೆ ಬಿತ್ತರಿಯ, ಮುತ್ತಿನ ಮಾಲೆಯು ಕಿತ್ತು ಪೋಗದಂತೆ ಕತ್ತಿ ನಲ್ಲಿ ನಿಂತು ಪಕ್ಷಿಗಳಂ ಪಾರಿಸೆಂದು ನೀರಜ್ರಾಕ್ಷಿಯಂ ನಿಲ್ಲದೆ ಪೋಗಿ ಸೊಲ್ಲಿಸುವ ಳಾಗು. ಎಲೆ ರಾಜೀವಪಾದೆಯೇ, ರಾಜೋಪಚಾರಕ್ಕೆ ರಾಜಿಸುತ್ತ ಸೋಜಿಗವಂ ತೋರಿ ಈ ಜಗಕ್ಕೆ ಮೆಟಾಗಿರುವ ಗಂಧ ತಾಂಬೂಲ ಫಲ ಪುಷ್ಪಗಳನಿಂಬಾಗಿ ತಟ್ಟೆ ಗಳಲ್ಲಿ ತುಂಬಿ ಮಡಗಿ, ಪ್ರಶಸ್ತವಾದ ಹಸ್ತಪಾವಡೆಯಂ ಮುಚ್ಚಿ, ದೇವಿಯರ ಪಾದವಂ ತೊಳೆಯಲೋಸುಗ ಪದ್ಮರಾಗದೆಣೆಯಿಲ್ಲದಣಿ ಯಾದ ಪಾತ್ರದಲ್ಲಿ ಸನ್ನಿ ರಂ ತುಂಬಿ, ದೊಂಬಿಗೊ೦ಡು ತುಂಬಿಬರುವ ದುಂಬಿಗಳ ದಾರಿಗನುಸಾರವಾಗಿ ಸೊಂಪಾದ ಸಂಪಿಗೆಯ ಮೊಗ್ಗುಗಳನ್ನು ಒಗ್ಗು ಗೂಡಿಸಿ, ದೇವಿಯರ ಪಾದಸೇವೆಯಲ್ಲಿ ಮೋದ ದಿಂದ ಕಾದಿರುವಳಾಗು. ಎಲೆ ರಂಗುದುಟಿಯ ತುಂಗಸ್ವನದ ಮಂಗಳಾಂಗಿಯೇ, ಸಿಂಗರಂಗೊ೦ಡು ಮು೦ಗಡೆಯ ಅಂಗಣದಲ್ಲಿ ಬಂಗಿಯಂ ತಿಂದ ಮಂಗನಂತೆ ನಿಂತು ನೋಡದೆ ಪಕ್ಷಗಪ್ಪುರದ ಪುಡಿಯಂ ಕೆಲ್ಲಿ ಸನ್ನಿ ರ ಚಳೆಯವನ್ನಿತ್ತು ಲಾಮಂಚದ ತಡಿಕೆಯ ಅಂಚಿನಲ್ಲಿ ಕಳೆಗುಂದದ ಚೆ೦ದದ ಕುಂದದ ಮಾಲೆಗಳನ್ನು ಅಳವಡಿಸಿ ದುಂಡುಮಲ್ಲಿಗೆಯ ದಂಡೆಗಳ ತಂಡಗಳನ್ನು ತುಂಡುಗೈದು ಹೆಚ್ಚಾದ ಕುಚ್ಚುಗಳಂ ರಚಿಸಿ, ದಿಕ್ಕುದಿಕ್ಕುಗಳಲ್ಲಿ ಪಲಬಗೆಯ ಹಕ್ಕಿಗಳು ಪೊಕ್ಕು ಕೊಕ್ಕುಗಳಿ೦ ಕುಕ್ಕಿ ಚಪ್ಪರದ ಚಿಗುರುಗಳಂ ಚದುರಿಸದಂತೆ ಬೆದರಿಸುತ, ಚದುರತನದಿಂ ನಿಂತು ಕಾದಿರು ವಳಾಗು. ಎಲೆ ಬಾಲೆಯರುಗಳಿರಾ, ಕೇಳಿ, ಲೋಕದಲ್ಲಿ ರಾಜಸೇವೆಯು ಹರ ಸಿದ ಹಾವಂ ಮುತ್ತಿಕ್ಕಿದಂತೆ ಮಹಾಪ್ರಯಾಸವಾಗಿರುವುದು, ಅದುದರಿಂದ ಭಯ ಭಕ್ತಿ ಯುಕ್ತರಾಗಿ ಇದ್ದಲ್ಲಿ ದೇವಿಯ ಕಟಾಕ್ಷವು ಕೈಗೂಡುವುದು, ದೊರೆಗಳೂ ಅವರ ಪತ್ನಿ ಯರೂ ಸಹ ದೇವಾಂಶವಾಗಿರುವರು ಎಂದು ತಿಳಿಯುವರಾಗಿ, ಈಗ ದೇವಿಯರು ಬರುವ ಸಮಯವಾದುದು ?” ಎಂದು ಸಖಿಯರ ಕುರಿತು ಹೇಳು ತಿರಲು ; ದೇವಿಯು ಕಿವಿಗೆ ಹಿತವಾದ ಸಾಗರಿಕೆಯ ವಾಕ್ಯವಂ ಕೇಳಿ, ಒತ್ತಿನಲ್ಲಿ ನಿಂದಿದ್ದ ಕಾಂಚನಮಾಲೆಯ ಮುಖವಂ ನೋಡಿ, ಎಲೆ ನಾರಿಯೆ, ನಾಗರಿಕೆಯ ಮೇಲಾ ದ ನುಡಿಯನ್ನು ಅಲೈಸಿದೆಯೊ ? ಇವಳು ವರ್ತಕನ ಮಗಳೇ ಆದಲ್ಲಿ ಈ ರೀತಿಯಾದ ವಾಕ್ಯಗಳು ವದನದಿಂದ ಪೊರಮಡುವುದೆ ಹೇಳು ? ಮತ್ತು ಇವಳು ಪೀಠದಲ್ಲಿ ಕುಳಿತಿರುವ ಠೀವಿಯ, ಹುಬ್ಬುಗಳನ್ನೆಬ್ಬಿಸುವ ಒಯ್ಯಾರವೂ, ಇಂಬಾಗಿ ತಂಬು ಲವನ್ನೂ ತರಿಸಿರುವ ಬೆಡಗೂ, ಮಡಿಯ ತುದಿಗಂಟನ್ನು ಕಟ್ಟಿರುವ ಬಿತ್ತರವೂ, ಹೊಸಸರಿಯಾಗಿ ನಮಗೂ ದೊರೆಯದೆ, ವರ್ತಕರ ಕುಲಕ್ಕೆ ದೂರವಾಗಿ ಪೋಗುವ ಸೊಬಗನ್ನು ಪುಟ್ಟಿಸುತ್ತಿರುವುವು ?” ಎಂದು ನುಡಿಯಲು ; ಕಾಂಚನಮಾಲೆಯು