ಪುಟ:ವತ್ಸರಾಜನ ಕಥೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - ಇವಳ ವಿಚಾರವಾಗಿ ಕರಬುತ್ತಿದ್ದ ಎನ್ನ ಮನಕ್ಕೂ ಪ್ರಿಯವಂ ಪಟ್ಟಿ ಸುತ್ತಿರುವ ವಚನಮಾಧುರವು ಶತ್ರುಗಳನ್ನಾದರೂ ಸಹ ಮಿತ್ರರನ್ನು ಗೈಯುತ್ತಲಿರುವುದು ; ನಾನು ವ್ಯರ್ಥವಾಗಿ ಇವಳ ಮೇಲೆ ದೇವಿಯೊಡನೆ ನಾನಾಪ್ರಕಾರವಾದ ಚಾಡಿ ಯನ್ನು ಹೇಳಿದೆನೆಂದು, ತನ್ನ ಮನದಲ್ಲಿ ಯೋಚಿಸಿ, ದೇವಿಯಂ ಕುರಿತು ಎಲ್‌ ತಾಯೇ, ಇವಳು ಯಾವುದೋ ಒಂದು ದೇಶದ ರಾಯನ ಮಗಳಲ್ಲದೆ ಇದ್ದಲ್ಲಿ, ಪಕ್ಷಿಗಳ ಪಾಲನಾರೀತಿಯೂ, ರಾಜನೀತಿಯನ್ನು ಅನುಸರಿಸಿ ಸರಿಯಾದ ಮಾತಿನ ರೀತಿಯೂ, ಈ ಠೀವಿಯೂ ಸಹ ದೊರೆಯಲಾರವು, ಯಾರಿಗೇ ಆಗಲಿ ಕುಲಕ್ಕೆ ಸರಿಯಾದ ವಾಕ್ಯಗಳು ಕಡೆಯುತ್ತಲಿರುವುವು ” ಎಂದು ನುಡಿಯುತ್ತಲಿರಲು ; ಅಷ್ಟರಲ್ಲೇ ಕಮಲಪ್ರಭೆಯೆಂಬ ಕಾಂತೆಯು ಮರಕತದ ವೀಣೆಯಂ ಕರದಲ್ಲಿ ಪಿಡಿದು ಸಂಗೀತ ಶಾಲೆಯಂ ಪೊರಮಟ್ಟು ಪ್ರಶಾಲೆಯ ಕಡೆಯಾಗಿ ಪೋಗು ಲಿರಲು, ಸಾಗರಿಕೆಯು ಆ ವೀಣೆಯ ಸುಂದರತೆಗೆ ಮನಸೋತು- ಎಲೆ ಕಾಂತೆಯೇ, ವೀಣೆಯನ್ನು ಸಂಗೀತಶಾಲೆಯಿಂದ ಎಲ್ಲಿಗೆ ತೆಗೆದುಕೊಂಡು ಪೋಗುತ್ತಲಿರುವೆ : 12 ಎಂದು ನುಡಿಯಲು ; ಕಮಲಪ್ರಭೆಯು ಎಲೆ ಸಾಗರಿಕೆಯೇ, ದೇವಿಯರು ನುಡಿ ಸತಕ್ಕುದು ; ಚೆನ್ನಾಗಿ ಮೇಳವಂ ಮಾಡಿಸಿಕೊಂಡು ಬರುವಂತೆ ಅಪ್ಪಣೆಯನ್ನಿತ್ತುದ ರಿಂದ ಮದನಮಂಜರಿಯಬ ಸಂಗೀತ ಪಾರಂಗತೆಯ ಸಮೀಪಕ್ಕೆ ತೆಗೆದುಕೊಂಡು ಪೋಗಿದ್ದೆನು ” ಎನಲು; ಸಾಗರಿಕೆಯು ಆವೀಣೆಯನ್ನು ಜಾಣತನದಿಂದೆತ್ತಿ-( ಎಲೆ ಬಾಲೆಯೇ, ಈ ವೀಣೆಯು ದೇವಿಯರಿಗೆ ಯೋಗ್ಯವಾದುದರಿಂದ ನಮ್ಮಂಥವರು ನುಡಿಸಬಾರದು.ಆದರೂ ಮಾಡಿರುವ ಮೇಳದ ಹೆಚ್ಚು ಕಡಿಮೆಯನ್ನು ನೋಡುವೆನು ?” ಎಂದು ಕುಚಕ್ಕೆ ಒರಗಿಸಿಕೊಂಡು, ವರ್ಚ್ಯಾವರ್ಜ್ಯಗಳ ತಿಳಿದು, ಘನ ನಯ ದೇಸೀ। ಯಗಳೆಂಬ ಮೂರು ಪ್ರಕಾರವಾದ ಗಾನಭೇದವನ್ನೂ ಮೂರ್ಛನಾಕ್ರಮವನ್ನೂ ಆರ ಭಿ ಕಲ್ಯಾಣಿ ಮೊದಲಾದ ರಾಗಗಳಿಗೆ ಸಂಬಂಧಗಳುಂಟಾಗದಂತೆ ನಿಷಾದ ಋಷಭ ಗಾಂಧಾರ ಷಡ್ಡಗಳೆಂಬ ಸೊಂಪಾದ ಭೇದಗಳಂ ತಿಳಿದು ಕಿವಿಗೆ ಹಿತವಾಗಿ ನುಡಿ ಸುತ್ತ, ಸತ್ಯಲೋಕದಿಂದ ಸರಸ್ವತಿಯೇ ಭೂಲೋಕಕ್ಕೆ ಇಳಿದು ಬಂದಳೊ ಎಂಬ ಸಂದೇಹವಂ ಪುಟ್ಟಿಸುತ್ತಿರಲು ; ಇತ್ರ ದೇವಿಯು ಇವಳಿಗೆ ವೀಣಾವಿದ್ಯೆಯಲ್ಲಿರುವ ಪ್ರಜ್ಞಾ ವಿಶೇಷಪಂ ತಿಳಿದು, ಅತ್ಯಂತ ಆಶ್ಚರವನ್ನು ಹೊಂದುತ್ತಲಿರಲು ; ಕಾಂಚನಮಾಲೆಯು ಇವಳು ಯಾರೋ ದೇವತಾಸ್ತ್ರೀಯಾಗಿ ತೋರುವಳಲ್ಲದೆ ಮನುಷ್ಯ ಸ್ತ್ರೀಯೆಂದು ನಂಬ ಲಾಗದೆಂದು, ತನ್ನ ಮನದಲ್ಲಿ ತಿಳಿಯುತ್ತಿರುವಳಾಗಲು ; ಅತ್ತ ಕಮಲಪ್ರಭೆಯು ಎಲೆ ಸಾಗರಿಕೆಯೇ, ಇನ್ನೂ ಯಾವಯಾವ ವಿದ್ಯೆಗಳನ್ನು ಎಲ್ಲೆಲ್ಲಿ ಕಲಿತಿರುವೆ ? ಪೇಳುವಳಾಗು,' ಎನಲು ; ಸಾಗರಿಕೆಯು--