ಪುಟ:ವತ್ಸರಾಜನ ಕಥೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, - ಕರ್ಣಾಟಕ ಕಾವ್ಯಕಲಾನಿಧಿ, - • ಎಲೆ ಕಾಂತೆಯೇ, ಕೇಳು. ಎನಗೆ ಬಾರದ ವಿದ್ಯಗಳೇ ಇಲ್ಲ. ನಾನು ಕಲಿತ ಸ್ಥಳಗ ಳನ್ನು ಪೇಳುವೆನೆಂದರೆ ಎನ್ನ ನಾಲಗೆಯು ಹಿಮ್ಮೆಟ್ಟುತ್ತಿರುವುದು, ಕೆಟ್ಟ ಚಳಕ ಯಾವ ವಿದ್ಯೆಗಳಿದ್ದರೂ ಏನು ಫಲವು ? ಲೋಕದಲ್ಲಿ ಲಕ್ಷ್ಮಿ ಸರಸ್ವತಿಯರು ಅತ್ತೆ ಸೊಸೆಯರಾದುದರಿಂದ ಒಂದೇ ಸ್ಥಳದಲ್ಲಿರುವದು ದುರ್ಲಭವು, ಕೆಟ್ಟ ಬ್ರಹ್ಮನು ವ್ಯರ್ಥವಾಗಿ ಎನ್ನ ಪುಟ್ಟಿಸಿದನು. ಸಕಲೈಶ್ವರವಂ ಬಿಟ್ಟು ಕೆಟ್ಟು ಬಂದು ಈ ಸದ್ದು ಣ ಶಾಲಿಯಾದ ವಾಸವದತ್ತಾ ದೇವಿಯಂ ಬ೦ದು ಸೇರಿರುವೆನು. ಅವಳು ಹಾಲಲ್ಲಿ ಅದ್ದುವಳೊ ಸೇರಿದವರ ಮಾತುಗಳಂ ಕೇಳಿ ನೀರಲ್ಲಿ ಮುಳುಗಿಸುವಳೊ ತಿಳಿ ಯೆನು ಲೋಕದಲ್ಲಿ ಪರಸೇವೆಯೇ ಕಷ್ಟವಾಗಿರುವುದು, ಇದರಲ್ಲಿ ರಾಜಸೇ ವೆಯ ವಿಚಾರವಂ ಪೇಳತಕ್ಕುದೇನು!” ಎಂದು ಕಣ್ಣುಗಳಲ್ಲಿ ನೀರು ತುಂಬಿ, ಕೆಯ್ಯಲ್ಲಿ ಪಿಡಿದಿದ್ದ ವಸ್ತ್ರದಿಂದ ಒರಿಸುತ್ತಿರಲು ; * ವಾಸವದತ್ತಾ ದೇವಿಯು ಮನಮರುಗಿ ಎಲೆ ಕಾಂಚನಮಾಲೆಯೇ, ಸಾಗ ರಿಕೆಯು ಪೇಳಿದ ವಾಕ್ಯವಂ ಕೇಳಿದೆಯಾ ?” ಎಂದು ನುಡಿದು, ( ಇವಳನ್ನು ಯಾರು ಕ್ಷುದ್ರವಂ ಪೇಳುತ್ತಿದ್ದರೂ ಕೈ ಬಿಡದೆ ಸಲಹುವೆನು ?” ಎಂದು, ಮನದಲ್ಲಿ ನಿತ್ಯ ಯಿಸುತ್ತಿರಲು, ಕಾಂಚನಮಾಲೆಯು `ನಾಗರಿಕೆಯ ವಚನವ ಕೇಳಿ ಕರುಣವಂ ತಾಳಿದ ದೇವಿಯು, ನಾನು ಕ್ಷುದ್ರನಂ ಪೇಳಿದುದಕ್ಕೆ, ಕಾಂಚನಮಾಲೆಯೇ ನಾಗರಿ ಕೆಯ ವಚನವ ಕೇಳಿದೆಯಾ ?' ಎಂದು ನುಡಿದ ವಾಕ್ಯವೇ ಎನಗೆ ಶಿಕ್ಷೆಯಂ ಗೈದ೦ ತಾದುದು ?” ಎಂದು ಯೋಚಿಸುತ್ತಿರಲು; ಸಾಗರಿಕೆಯು--( ಎಲೆ ಕಮಲಪ್ರಭೆಯೇ, ನಿನ್ನ ಊಳಿಗದ ವೇಳೆ ಯು ವಿಾರಿ ಪೋಗುವುದು, ವೀಣೆಯಂ ದೇವಿಯ ಸನ್ನಿಧಿಗೆ ತೆಗೆದುಕೊಂಡು ಪೋಗುವ ಳಾಗು ” ಎಂದು ನುಡಿಯುತ್ತಿರಲು ; ಇತ್ತಲಾಕಾಂಚನಮಾಲೆಯು ಮನದಲ್ಲಿ ತಲ್ಲಣವಂ ಪೊಂದುತ,– ದೊರೆ ಗಳ ಹೃದಯವು ಅಗಾಧವಾಗಿ ಇರುವುದರಿಂದ ಹಿಂದುಮುಂದನ್ನು ಆಲೋಚಿಸದೆ ಒಂದು ಕಾರವನ್ನಾ ದರೂ ವಿಜ್ಞಾಪಿಸುವುದು ಕಷ್ಟವಾಗಿರುವುದು, ನಮ್ಮ ದೇವಿಗೆ ಸಾಗರಿಕೆಯಲ್ಲೇ ಬಲವಾದ ಅಭಿಮನವು ಬಲಿತಿರುವುದು, ಮುಂದೆ ನನಗೆ ಯಾವ ರೀತಿಯಾದ ಶಿಕ್ಷೆಯಾಗುವುದೋ ? ” ಎಂದು ಯೋಚಿಸುತ್ತಿರಲು ; - ಅಷ್ಟರಲ್ಲೇ ಕಮಲದ ಭಯಂಬ ಕಾಂ ತೆಯು, ಮಕರಂದೋದ್ಯಾನ ವನ ದಿಂದ ( ನಮ್ಮೆಲ್ಲರಿಗೂ ಬಹಳವಾದ ಆನಂದ ಉಂಟಾಗುವುದು ?” ಎಂದು ಕೂಗುತ ಓಡಿಬರಲು ; ಸಾಗರಿಕೆಯ ಮಿತ್ರಳಾದ ಸುಸಂಗತೆಯು ಕಮಲಪ್ರಭೆಯೆಂಬ ಕಾಂತೆಯಂ ಕುರಿತು-II ಎಲೆ ನಾರಿಯೆ, ಎಲ್ಲರಿಗೂ ಹೇಗೆ ಸಂತೋಷವಾಗುವುದು ? ಏತಕ್ಕೆ ಈರೀತಿ ಕೂಗುತ್ತ ಬಂದೆ ? " ಎಂದು ನುಡಿಯಲು; ಅವಳು- ಎಲೆ ಸುಸಂ ಗತೆಯೇ, ಕೇಳು, ವಸಂತಕಾಲವು ಪ್ರಾಪ್ತವಾದುದರಿಂದ ನಾವು ಬಿಜಯಂಗೆಯ್ಯುವೆ