ಪುಟ:ವತ್ಸರಾಜನ ಕಥೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, → ೩ ವ.ಮಕರಂದೋದ್ಯಾನವನ್ನು ರಂಗವಲ್ಲಿ ಮುಂತಾದ ಮಂಗಳದ ವ್ಯಗಳಿಂದ ಅಲಂ ಕರಿಸುವಂತೆ ದೇವಿಯರು ಅಪ್ಪಣೆಯನ್ನಿತರೆಂದು ಕಲವಾಣಿಯು ಬಂದು ಹೇಳಿದ ವಾಕ್ಯವ ಕೇಳಿ ಸಂತೋಷದಿಂದ ಕೂಗುತ್ತ ಬಂದೆನು ” ಎಂದು ನುಡಿಯಲಾದಾಗ ರಿಕೆಯು ತನಗೆ ಮಿತ್ರಳಾದ ಸುಸಂಗತೆಯಂ ಕರೆದು- ಎಲೆ ಕಾಂತೆಯೇ, ವಸಂ ತೋತ್ಸವವೆಂದರೇನು ? ಮನ್ಮಥನ ಪೂಜೆಯೆಂದರೇನು ? ಸೇವಕಳಾದ ಈ ನಾಡಿಗೆ ಇಷ್ಟು ಸಂತೋಷವು ಪುಟ್ಟುವುದಕ್ಕೆ ಕಾರಣವೇನು ? ” ಎಂದು ಬೆಸಗೊಳ್ಳಲು ; ಅವಳು ಎಲೆ ಮಿತ್ರಳೆ, ಅದರ ಸಂಗತಿಯನ್ನು ಏಕಾಂತವಾಗಿ ನುಡಿಯು ವೆನು ?” ಎಂದು ಹೇಳುತ್ತಿರಲು ; ಅಷ್ಟರಲ್ಲೇ ದೇವಿಯು ಕಾಂಚನಮಾಲೆಯ ಕೈಲಾಗವಂ ಪಿಡಿದು ಪತ್ನಿ ಶಾಲೆಗೆ ಬಿಜಯಂಗೆಯ್ಯಲು ; ಸಾಗರಿಕೆಯು ಬೆದರಿದ ಹಲ್ಲೆಯಂತೆ ಕಾಲಂದುಗೆಯು ಘಲ್ಲೆಂದು ಶಬ್ದವ ನ್ನುಂಟುಮಾಡುವಂತೆ ಬೆಚ್ಚಿ ಪೀಠದಿಂದೆದ್ದು ದೇವಿಗೆ ನಮಸ್ಕಾರವಂ ಗೆಯ್ಯಲು ; ದೇವಿಯು ನಾಗರಿಕೆಯಲ್ಲಿ ಅಧಿಕವಾದ ಅಭಿಮಾನ ದಂ ತಾಳಿ, ( ಎಲೆ ಮಂ. ಗಳಾಂಗಿಯೇ, ನೀನು ಪಶಾಲೆಗೆ ಅಧಿಕಾರಕ್ಕೆ ಬಂದ ಬಳಿಕ ಯಾವ ಯಾವ ಪಕ್ಷಿಗಳು ಎಷ್ಟೆಷ್ಟು ಮೊಟ್ಟೆಗಳನ್ನು ಕೊಟ್ಟಿರುವುವು? ಕಸ್ತೂರೀಮೃಗ ಪುಣಗಿನ ಬೆಕ್ಕು ಜವ್ವಾಜಿಬೆಕ್ಕು ಹುಲ್ಲೆಗಳೂ ಸಹ ಎಷ್ಟು ಮರಿಗಳನ್ನಿದಿರು ವುವು ? ?” ಎಂದು ಅವಳ ಕರವಂ ಪಿಡಿದು, ಸಾಲಾಗಿ ಮೇಲಾಗಿ ಲೀಲೆಗನುಕೂಲ ವಾಗಿರುವ ಮೃಗಗಳಂ ನೋಡುತ್ತ, ಮೆಲ್ಲಮೆಲ್ಲನೆ ಪಲ್ಲವದಂತೆ ಮೃದುವಾದ ಪಾದಗಳನ್ನಿಟ್ಟು ಬರುತ್ತಿರಲು ; ಅಷ್ಟರಲ್ಲೆ ತರಳಿಕೆಯೆಂಬ ದ್ವಾರಪಾಲಿಕೆಯು ತ್ವರದಿಂದ ಓಡಿಬಂದು ದೇವಿ ಯಂ ಕುರಿತು ಎಲ್‌ ದೇವಿಯೇ, ರಾಜೇ೦ದನು ಮುತ್ತಿನ ಸಬಾರದಿಂದ ಮಣಿಪಚಾರಕ್ಕೆ ಬಂದು ನಿನ್ನ೦ ಕಾಣದೆ ಕಲಾವತಿಯ ಮುಖದಿಂದ ಪತ್ನಿ ಶಾಲೆ ಯಲ್ಲಿ ಇರುವಳನ್ನಾಗಿ ತಿಳಿದು ಇಲ್ಲಿಗೆ ದಯಮಾಡುತ್ತಿರುವನು ” ಎಂದು ಬಿನ್ನಿ ಸಲು ; ದೇವಿಯು ತಾವರೆಯೆಲೆಯ ಮೇಲೆ ಬಿದ್ದ ನೀರಿನಂತೆ ಚಂಡಲಹೃದಯಳಾಗಿ ಇನ್ನು ಮಾಡತಕ್ಕುದೇನೆಂದು ಯೋಚಿಸಿ, CC ಕಾಂಚನಮಾಲೆಯೇ, ಇಲ್ಲಿರುವ ಸಾಗ ರಿಕೆ ಮೊದಲಾದ ಈ ಬಾಲೆಯರುಗಳನ್ನು ಸಂಗೀತಶಾಲೆಗೆ ಕೂಡಿ ಬಾಗಿಲನ್ನು ಬಲ ವಾಗಿ ಹಾಕುವಳಾಗು ?” ಎಂದು ಏಕಾ೦ತವಾಗಿ ನುಡಿದು, ಎಲೆ ಬಾಲೆಯರಿರಾ, ನೀವೆಲ್ಲರೂ ಸಂಗೀತಶಾಲೆಗೆ ಹೋಗುವರಾಗಿ ” ಎ೦ದು ಗರ್ಜಿಸಿ ನುಡಿಯಲು ; ಕಾಂಚನಮಾಲೆಯು ನಾಗರಿಕೆ ಮೊದಲಾದ ಬಾಲೆಯರುಗಳನ್ನು ಪಕ್ಷಿಶಾಲೆಗೆ ಕೂಡು ತಿರುವಷ್ಟರಲ್ಲೇ ರಾಯನು ಬಂದು ಸ್ವಲ್ಪವಾಗಿ ನಾಗರಿಕೆಯ ಹಿಂಬಾಗವಂ ನೋಡಿ