ಪುಟ:ವತ್ಸರಾಜನ ಕಥೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, fH ವಂ ಪಿಡಿದು ಕರೆದುಕೊಂಡು ಬರುತ, ಏನೋ ಒಂದು ವಾಕ್ಯವಂ ಕೇಳುವಂತೆ ಕಾಂಚ ನಮಾಲೆಯಂ ಕರೆದು, ಕಿವಿಯಲ್ಲಿ ರಹಸ್ಯವಾದ ವಾಕ್ಯವಂ ಪೇಳಿ ಕಳುಹಿಸಲು ; ರಾಯನು-ಮೊದಲೇ ಪಕ್ಷಿಶಾಲೆಯಿಂದ ಎನ್ನನ್ನು ಹೊರಡಿಸಬೇಕೆಂಬ ದೇವಿಗೆ ಪಂಜ ರವು ಕಿತ್ತು ಬಿದ್ದು ದೆಂಬ ವಾಕ್ಯವು ಸಹಾಯವಂ ಗೈದುದೆಂದು ಯೋಚಿಸುತ್ತ, ಆಪ್ತ ವಿದೂಷಕನು ಇಲ್ಲವೆಂದು ಎಡಬಲವಂ ನೋಡುತ್ತ ಬರುತ್ತಿರಲು ;

  • ಅಷ್ಟರಲ್ಲೇ ವಸಂತಕನೆಂಬ ವಿದೂಷಕನು--ಮಕರಂದೋದ್ಯಾನ ವನದಲ್ಲಿ ದೇವಿಯು ಮನ್ಮಥನ ಪೂಜೆಯಂ ಗೆಯ್ಯುವುದೇ ನಿಜವಾಗಿದ್ದಲ್ಲಿ ಎನಗೆ ಬಾಗಿನವೂ ದಕ್ಷಿಣೆಯೂ ಸಹ ಬಾರದೇ ಇರದು. ನಾನು ವತ್ಸ ರಾಜನ ಸನ್ನಿ ಧಿಯಂ ಬಿಟ್ಟು ಬಹು ಹೊತ್ತಾದುದು. ಇಂಥ ಉತ್ಸವಕಾಲದಲ್ಲಿ ರಾಜನ ಸನ್ನಿ ಧಿಯಲ್ಲೇ ಇರಬೇಕೆಂದು ಯೋಚಿಸುತ್ತಾ, ಬರುತ್ತಿರಲು ; ಎಚ್ಚರಿಕೆ ಪರಾಕೆಂದು ಹೇಳುವ ಊಳಿಗದ ಹೆಣ್ಣು ಗಳು ಉಚ್ಛರಿಸುವ ಶಬ್ದವಂ ಕೇಳಿ, ಇದೊ! ಇತ್ತಲು, ರಾಯನು ಉತ್ತಮವಾದ ಮುತ್ತಿನ ಹಜಾರದ ಹತ್ತಿರವ ಸೇರುವನಂತೆ ತೋರುವುದು, ನಾನೂ ಶೀಘ್ರದಿಂ ಪೋಗುವೆನು ” ಎಂದು ಬಂದು, ದೇವಿಯರಿಂದೊಡಗೂಡಿದ ರಾಯನಂ ಕಂಡುರೋಹಿಣೀನಕ್ಷತ್ರವಂ ಪೊಂದಿದ ಪೂರ್ಣಚಂದ್ರನಂತೆ ದೇವಿಯರಿಂದೊಡಗೂಡಿ ಮುಂ ದುಗಡೆಯಲ್ಲಿ ಆನಂದದಿಂ ಬರುವನಾದರೂ ನಮ್ಮ ರಾಯನ ಮುಖವಂ ನೋಡಿದರೆ, ಏನೋ ಒಂದು ಯೋಚನೆಯಲ್ಲಿ ಅವನ ಚಿತ್ರವು ತಗಲಿಕೊಂಡಿರುವಂತೆ ತೋರುವು ದೆಂದು ಯೋಚಿಸುತ್ತ ಬಂದು, “ಎಲೈ, ರಾಜೇಂದ್ರನೇ,ನೀನು ದೇವಿಯಿಂದೊಡಗೂಡಿ ಶಾಶ್ವತವಾದ ಭೂಮಣ್ಣಲವಂ ಪರಿಪಾಲಿಸುವನಾಗು!?” ಎಂದು ಕರವನ್ನೆ ಆಶೀ ದ್ವಾದವಂ ಗೆಯ್ಯಲು; ರಾಯನು ಬಡವನಿಗೆ ಭಾಗ್ಯ ಬಂದಂತೆ ಅತ್ಯಂತಸಂತೋಷವಂ ಪೊ೦ದಿ-ಎನ್ನ ಮನದ ಸಂದೇಹವನ್ನು ಆಪ್ತನಾದವನೊಡನೆ ಹೇಳಿದಲ್ಲದೆ ಮನದ ಕಳವಳವು ಪೋಗಲಾರದೆಂದು ಯೋಚಿಸಿ-II ಅಯ್ತಾ ವಸಂತಕನೇ, ನಿನಗೆ ಕ್ಷೇಮ ವೇ ? ೨” ಎಂದು ಬೆಸಗೊಳ್ಳಲು ; ವಿದೂಷಕನು ರಾಯನ ವಾಕ್ಯವಂ ಕೇಳದವನಂತೆ ಸಾಗರಿಕೆಯ ಸಂದೇಹದಿಂ ಬರುವ ದೇವಿಯಂ ನೋಡಿ- ಎಲೌ ಪೂಜ್ಯಳಾದ ದೇವಿಯೇ, ಏನೋ ಒಂದು ಯೋಚನೆಯಲ್ಲಿ ನಿನ್ನ ಚಿತ್ತವು ತಗಲಿಕೊಂಡಿರುವುದ ರಿಂದ ನಿನ್ನ ಕೃಪಾದೃಷ್ಟಿ ಯು ಎನ್ನಲ್ಲಿ ಬೀಳಲಿಲ್ಲವು ” ಎನಲು, ದೇವಿಯು-ಇವನು ಮಹಾ ಜಾಣನಾಗಿರುವುದರಿಂದಲೇ ಎನ್ನ ಯೋಚನೆಯ ಪರಿಯಂ ತಿಳಿದುದು, ಇವ ನಿಗೆ ತಕ್ಕ ಉತ್ತರವಂ ಪೇಳುವೆನೆಂದು ಯೋಚಿಸಿ, “ ಅಯ್ಯಾ ವಿದೂಷಕನೇ, ಮುತ್ತಿನ ಹಜಾರದಲ್ಲಿ ಶಾರಿಕೆಯ ಪಂಜರವು ಕಿತ್ತು ಬಿದ್ದು ದೆಂಬ ವಾರ್ತೆಯಂ ಕೇಳಿ ದುದರಿಂದ ಮನದ ಕಳವಳದಿಂದ ನಿನ್ನ ನ್ನು ನೋಡಲಿಲ್ಲ ” ಎಂದು ನುಡಿಯಲು ; ಆವೇಳೆಗೆ ಕಾಂಚನಮಾಲೆಯು ದೇವಿಯ ಸನ್ನಿ ಧಿಯಂ, ಸೇರಿ, ಎಲೌ ತಾಯೇ ನೀನು ಅಪ್ಪಣೆಯನಿ ತಂತೆ ಸಂಗೀತಶಾಲೆಯ ಬಾಗಿಲಂ ಹಾಕಿ, ಪತ್ನಿ ಶಾಲೆಯ ಬೀಗವಂ