ಪುಟ:ವತ್ಸರಾಜನ ಕಥೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. -- ರ್ಜಿ ನುಡಿಯುತ್ತಿರಲು ; - ಇತ್ತಲು, ದೇವಿಯು ಮಣಿಹಚಾರವಂ ಪೊಂದಿ, .ಅಲ್ಲಿ ಕಿತ್ತು ಬಿದ್ದಿರುವ ಶಾರಿಕೆಯ ಪಂಜರವಂ ಕಂಡು, ಅಲ್ಲಿರುವ ಊಳಿಗದ ಬಾಲೆಯರ ಮೇಲೆ ಬಹಳ ವಾಗಿ ಕೋಪವಂ ತಾಳಿ, ಕಾಂಚನಮಾಲೆಯಂ ಕರೆದು- ಎಲೆ ಕಾಂತೆಯೇ, ಎನಗೆ ಪ್ರೇಮಪಾತವಾದ ಈ ಪಂಜರದ ಶಾರಿಕೆಯನ್ನು ಪಕ್ಷಿಶಾಲೆಗೆ ಕರೆದು ಕೊಂಡುಹೋಗಿ, ಕಾಲಕಾಲಕೆ ಸರಿಯಾಗಿ ಫಲಗಳನಿತ್ತು, ಪುರಾಣ ಪುಣ್ಯಕಥೆ ನಾಟಕ ಪ್ರಹಸನ ಮೊದಲಾದ ದಶರೂಪಕಗಳನ್ನು ಕಲಿಸಿ, ಸಲಹುವುದೆಂದು ಸಾಗರಿಕೆಯ ಹಸ್ತಕೆ ಕೊಟ್ಟು ಬರುವಳಾಗು ” ಎಂದು ಅಪ್ಪಣೆಯನೀಯಲು ; ಆ ವಳು-ಅಪ್ಪಣೆಯಾದಂತೆ ನಡೆದುಕೊಳುವೆನೆಂದು ಆ ಶಾರಿಕೆಯ ಪಂಜರವಂ ಕರದಲ್ಲಿ ಪಿಡಿದು ಪ್ರಶಾಲೆಯಂ ಪೊಂದಿ ನಾಗರಿಕೆಯಂ ಕುರಿತು ಎಲೆ ಮಂಗಳಾಂಗಿಯೇ, ಕೇಳು. ಈ ಶಾರಿಕೆಯ ಪಂಜರವಂ ತೆಗೆದುಕೊಳ್ಳು ವಳಾಗು. ಈ ಶಾರಿಕೆಯು ದೇವಿಗೆ ಪ್ರಾಣಪ್ರಿಯಕರವಾಗಿರುವುದು, ಯಾವ ಶಾಸ್ತ್ರವನ್ನೂ ಕೇಳಿದ ಮ ತದಿಂದಲೇ ಗ್ರಹಿಸುತ್ತಿರುವುದು, ದಂಪತಿಗಳಿಗುಂಟಾದ ಪ್ರಣಯಕಲಹವಂ ಪರಿಹರಿಸಬಲ್ಲುದು, ದೂತರಂತೆ ನೀತಿಯಂ ಪೇಳಿ, ಸೇರಿದ ನಾರಿಯರನ್ನು ನಾಯಕರಿರುವ ಸಂಕೇತಾನಕ್ಕೆ ಸೇರಿಸಬಲ್ಲುದು. ಆದುದರಿಂದ ಈ ಪಕ್ಷಿ ಶಾಲೆಯ ಲ್ಲಿರುವ ಇತರ ಪಕ್ಷಿಗಿಂತಲೂ ಇದರಲ್ಲಿ ಪ್ರೇಮವಂ ತಾಳಿ ಸಲಹುತ್ತಿರುವಂತೆ ದೇವಿಯ ಆಜ್ಞೆಯಾಗಿರುವುದು ' ಎಂದು ನುಡಿಯಲು ; ನಾಗರಿಕೆಯು ಮೊದಲು ತನ್ನ ಮನೆಯಲ್ಲಿದ್ದ ಪ್ರಶಾಲೆಯ೦ ಸ್ಮರಿಸುತ್ತಿದ್ದು, ( ಎಲೆ ಕಾಂಚನಮಾಲೆಯೇ, ಎನ್ನ ರಮನೆಯ ಪ್ರಶಾಲೆಯಲ್ಲಿ ಇಂಥ ಪಕ್ಷಿಗಳು ” ಎಂದು ನುಡಿಯುತ್ತಿರುವುದ ರಲ್ಲಿ ಜಾಗರೂಕಳಾಗಿ,-ಎಲೆ ಕಾಂತೆಯೇ, ಎನ್ನ ಅರಮನೆಯೆಂದು ತಪ್ಪಿ ನುಡಿ ದೆನು. ಮಂದಪುಣ್ಯಳಾದ ಎನಗೆ ಅರಮನೆಯೆಂದರೇನು ? ಆದರೂ ದೇವಿಯು ಎನ್ನಲ್ಲಿ ಅಧಿಕವಾದ ಪ್ರೇಮವನ್ನಿಟ್ಟು ಸಲಹುವಳಾದುದರಿಂದ ಅವಳ ಅರಮನೆ ಯೇ ಎನ್ನ ಅರಮನೆಯೆಂದು, ಅವಳ ವಸ್ತುಗಳೆಲ್ಲವೂ ಎನ್ನ ವಸ್ತುಗಳೆ೦ದೇ ತಿಳಿದು ನುಡಿದೆನು. ” ಎನಲು ; ಕಾಂಚನಮಾಲೆಯು ಸಾಗರಿಕೆಯು ಮೊದಲು ನುಡಿದ ವಾಕ್ಯವನ್ನೂ ಆ ಬಳಿಕ ಅದನ್ನು ಹಿಂತಿರುಗಿಸಿದ ಜಾಣ್ನೆಯನ್ನೂ ಸಹ ನೋಡಿ ಮೆಚ್ಚಿ -ಇವಳು ರಾಜಪುತಿಯೇ ಸರಿ ; ದೇವಿಯ ವಸ್ತುಗಳೆಲ್ಲವನ್ನೂ ಎನ್ನ ವಸ್ತು ಗಳೆಂದೇ ತಿಳಿಯುವೆನೆಂದು ಹೇಳಿದ ವಾಕ್ಯವು ಬಹುದೂರವಾಗಿ ರಾಯನವರೆಗೂ ವ್ಯಾಪಿಸಿಕೊಂಡು ಬರುವುದು, ಮುಂದೆ ಈ ಮಂದಗಮನೆಯು ಸುಂದರಾಂಗನಾದ ರಾಜೇಂದ ನ ಆನಂದಕ್ಕೆ ಪಾತ್ರಳಾಗಿ ನಮಗೆಲ್ಲರಿಗೂ ಗುಟುಕು ನೀರನ್ನು ಕುಡಿಸು ವುದರಲ್ಲಿ ಸಂದೇಹವೇ ಇಲ್ಲ~ ಎಂದು, ಆಲೋಚಿಸಿ, ಎಲೆ ಸಾಗರಿಕೆಯೇ, ನೀನು ಯಶೋವಂತಳಾಗಿ ಅಭಿವೃದ್ದಿಯನ್ನು ಹೊಂದುವ ಕಾಲದಲ್ಲಿ ಎನ್ನನ್ನು ಮರೆಯ