ಪುಟ:ವತ್ಸರಾಜನ ಕಥೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo - ಕರ್ಣಾಟಕ ಕಾವ್ಯಕಲಾನಿಧಿ, - ಲಾಗದು ?” ಎಂದು ನುಡಿಯಲಾಸಾಗರಿಕೆಯು ನಿಟ್ಟುಸಿರಂ ಬಿಟ್ಟು (• ಎಲೆ ಕಾಂತೆಯೇ, ಮಂದಭಾಗ್ಯಳಾದ ಎನಗೂ ಒಂದು ಅಭಿವೃದ್ಧಿಯು ಪುಟು ಇದೆ, ಪೇಳು, ಉರಿ ಯುವಳ ಮೇಲೆ ಉಪ್ಪನ್ನು ಚೆಲ್ಲಿದಂತೆ ಜ್ವರದಿಂ ತಪಿಸುವಳ ಮೇಲೆ- ಕಾದೆಣ್ಣೆಯಂ ಪೊಯ್ದಂತೆ ಸಿರಿಯಂ ಪೋಗಲಾಡಿಸಿಕೊಂಡು ಪರಸೇವೆಗೊಳಗಾಗಿರುವ ಎನ್ನ ನ್ನು ನಯವಾದ ನಿಷ್ಟುರವಾಕ್ಯವೆಂಬ ಗರಗಸದಿಂದ ಕೊರೆಯುತ್ತಿರುವೆ ! ” ಎಂದು ಕಣ್ಣೀರಂ ತುಂಬಿಕೊಳ್ಳಲು ; ಕಾಂಚನಮಾಲೆಯು ಎಲೆ ಸಾಗರಿಕೆಯೆ, ಏಕೆ ವ್ಯಸನವನ್ನು ಹೊಂದುತ್ತಿರುವೆ ? ?” ಎಂದು ಸಮಾಧಾನಗೈದು, ದೇವಿಯ ಸನ್ನಿ ಧಾ ನವಂ ಕುರಿತು ಪೋಗಲು; ಮಕರಂದೋದ್ಯಾನ ವನವನ್ನು ಸಲಹುವ ಮದನಿಕೆಯೆಂಬ ಸಿಯು ದೇವಿ ಯ ಸನ್ನಿ ಧಿಯಂ ಸೇರಿ, “ ಎ ಕಲ್ಯಾಣಿಯೇ, ನಿನ್ನ ಕಟಾಕ್ಷದಿಂದ ವನವೆಲ್ಲವೂ ಫಲಪುಷ್ಪಗಳಿಂದ ಪೂರಿತವಾಗಿರುವುದು, ನಿನ್ನ ಆಜ್ಞೆಯಾದಂತೆ ಮರವೀರನ ಪೂಜೆಗೋಸುಗ ಅಪಾರವಾದ ಶೃಂಗಾರದಿ೦ದ ಸಂಗತವಾಗಿ ಮಾಡಿರುವೆನು. ಚಿ ತಕ್ಕೆ ಒಪ್ಪಿದಾಗ ಚಿಸಬಹುದು ?” ಎಂದು ಬಿನ್ಲೈಸಲು ; ಶಕುಂತಶಾಲೆಯಿಂದ ಬಂದ ಕಾಂಚನಮಾಲೆಯು ಬಂದುದಂ ನೋಡಿ ಅವಳಂ ಕರೆದು, ( ಎಲೆ, ಕಾಂ ತೆಯೇ, ನಾಳೆ ಮಧ್ಯಾಹ್ನ ಕ್ಕೆ ಮಕರಂದೋದ್ಯಾನವನದಲ್ಲಿ ಮನ್ಮಥ ಪೂಜೆಯಂ ಗೆಯ್ಯಲೋಸುಗ ಸಮಸ್ಯವಾದ ಸಖಿಯರುಗಳೂ ತಮ್ಮತಮ್ಮ ಆಭರಣ ವಸ್ತ್ರಗ ಳಿಂದ ಅಲಂಕೃತರಾಗಿ ಮಂಗಳದ್ರವ್ಯಗಳಿ೦ ತುಂಬಿದ ತಟ್ಟೆ ಗಳಂ ಕರದಲ್ಲಿ ಸಿಡಿದು ಕೊಂಡು ಕಟ್ಟಳೆಯಮೇಲೆ ಬರುವಂತೆ ಸತ್ವರಿಗೂ ಹೇಳಿಸುವಳಾಗು ” ಎಂದು ದೇವಿಯು ಅಪ್ಪಣೆಯನೀಯಲು ; ಕಾಂಚನಮಾಲೆಯು ಅಜ್ಞೆಯಾದಂತೆ ನಡೆದುಕೊ ಇುವೆನೆಂದು, ತನ್ನ ಕೈ ಕೆಳಗಿರುವ ಕಲವಾಣಿಯಂ ಕರೆದು, ಎಲೆ ಕಾಮಿನಿ, ನಾಟ್ಯ ಶಾಲೆ, ಪಾಕಶಾಲೆ, ಪಾನೀಯಶಾಲೆ, ಪಾಠಶಾಲೆ, ಪತ್ನಿಶಾಲೆ, ಸಂಗೀತಶಾಲೆ, ಚಂದ್ರ ಶಾಲೆ, ವಿಹಾರಶಾಲೆ, ಮುತ್ತಿನ ಹಜಾರ, ಮಣಿಹಚಾರ, ಸಂಕೇತಮಂಟಪ, ದೇವ ತಾರ್ಚನೆಯ ತೊಟ್ಟಿ ಮುಂತಾದ ಸ್ಥಾನಗಳಿಗೆ ಹೋಗಿ, ಅಲ್ಲಲ್ಲಿರುವ ಪಲ್ಲವಪಾಣಿ ಯರಂ ಕುರಿತು-ನೀವೆಲ್ಲರೂ ಪೂತ್ವದ ಮರಾದೆಯ ಮೇರೆಗೆ ಮನ್ಮಥಪೂಜೆಗೆ ಮಂಗಳದ್ರವ್ಯಂಗಳಂ ಕೈಕೊಂಡು ಸಿಂಗರಂಗೊಂಡು ನಾಳೆಯ ಮಧ್ಯಾಹ್ನ ಕೆ ಮಕರಂದೋದ್ಯಾನವನವನ್ನು ಹೊಂದಿ ಬರುವರಾಗಿರೆಂದು ಸಾರಿ ಬರುವಳಾಗು ) ಎಂದು ನೇಮಿಸಿ ಕಳುಹಿಸಲು ; ಆ ಕಾಂತೆಯು ಪೋಗಿ ಅವಳು ಹೇಳಿದ ಮೇರೆಗೆ ಸಾರುತ್ತ ಬರಲು ; - ಪ್ರಶಾಲೆಯಲ್ಲಿದ್ದ ಪಲ್ಲವೆಪಾಣಿಯಾದ ಸಾಗರಿಕೆಯು ಅವಳು ಸಾರಿದ ಶಬ್ದ ವಂ ಕೇಳಿ ಮಿತ್ರಳಾದ ಸುಸಂಗತೆಯ ಕುರಿತು ಎಲೆ ಕಾಂತೆಯೇ, ಈಗ ಸಾರಿ ಪೋದ ವಾರಿಜಾಕ್ಷಿಯ ಗಂಭೀರಧ್ವನಿಯಂ ಕೇಳಿದೆಯ ? ದೇವಿಯ ಮಕರಂ ಅ.