ಪುಟ:ವತ್ಸರಾಜನ ಕಥೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - ೫೧ ದೋದ್ಯಾನವನವೆಂದರೇನು ? ಅಲ್ಲಿ ಮನ್ಮಥನ ಪೂಜೆಯೆಂದರೇನು ? ಇಲ್ಲಿರುವ ನಲ್ಲೆಯರೆಲ್ಲರೂ ನಿಲ್ಲದೆ ಅಲ್ಲಿಗೆ ಬೋಗತಕ್ಕುದು ಹೇಗೆ ? ಅಲ್ಲಿಗೆ ಇನ್ನಾರು ಬರತ ಕ್ಯವರು ? ಇದರ ಸಂಗತಿಯನ್ನು ವಿಸ್ತಾರವಾಗಿ ವಿವರಿಸುವಳಾಗು ” ಎಂದು ಬೆಸ ಗೊಳಲಾಮಂಗಳಾಂಗಿಯು- ಎಲೆ ಕಲ್ಯಾಣಿಯೇ, ಕೇಳು, ವರ್ಷವರ್ಷಕ್ಕೂ ಈ ವಸಂತ ಋತುವಿನಲ್ಲಿ ದೇವಿಯು ಅಂತಃಪುರದಲ್ಲಿರುವ ಸಮಸ್ಯೆ ಕಾಂತೆಯರಿ೦ ದೊಡಗೂಡಿ ಪೋಗಿ ಈ ಅರಮನೆಯ ಒತ್ತಿನಲ್ಲಿ ಬಿತ್ತರವಾಗಿರುವ ಮಕರಂದೋ ದ್ಯಾನ ವನವಂ ಪೊಕ್ಕು ಪುಷ್ಪಾಪಚಯ ಜಲಕ್ರೀಡೆ ಶೈಲಾರೋಹಣ ಮೊದಲಾದ ಕ್ರೀಡೆಗಳಂ ವಿವರಿಸಿ, ಸನ್ನು ತವಾದ ಸುವರ್ಣಮಯವಾದ ಅಶೋಕವೃಕ್ಷದ ಮ ನಿಲಭೂಮಿಯಲ್ಲಿ ಮೂರು ಲೋಕಕ್ಕೂ ವೀರನಾಗಿ ಸತಿಯಾದ ರತಿಯಿಂದೊಡ ಗೂಡಿದ ಮನ್ಮಥನಂ ಪೂಜಿಸಿ ಬರುವಳು. ಅಲ್ಲಿಗೆ ರಾಜಾಧಿರಾಜನಾದ ವತ್ಸರಾ ಜನೂ ಮಂತಿ , ಮೊದಲಾದ ಅರಸುಗಳ ಪತ್ನಿ ಯರೂ ಸಹ ಬರುತ್ತಿರುವರು. ಆ ದುದರಿಂದ ನಾವಿಬ್ಬರೂ ಅಲಂಕಾರವಾಗಿ ಮಂಗಳದ್ರವ್ಯಗಳಂ ತಟ್ಟೆಯಲ್ಲಿ ತುಂಬಿ ಕೊಂಡು ದೇವಿಯ ಸೇವೆಯಲ್ಲಿ ಜಾಗರೂಕರಾಗಿರುವ, ನಡೆ ” ಎನಲು ; ಸಾಗರಿ ಕೆಯು ಸಂತೋಷಭರಿತಳಾಗಿ ಇಂದಿನ ದಿನದಲ್ಲಾದರೂ ಸಾ೦ಗಸುಂದರನಾದ ರಾಜೇ೦ದ ನ ದರ್ಶನವು ದೊರಕದೆ ಇರದು ಎಂದು, ಯೋಚಿಸುತ್ತ ಮಂಗಳಸಾ ನವಂ ಗೆಯ್ಯಲೋಸುಗ ಸುಸಂಗತೆಯೊಡನೆ ಕೂಡಿ ಪೋಗಲು; ಕಾಂಚನಮಾಲೆಯು ದೇವಿಯ ಸನ್ನಿಧಿಯಂ ಸೇರಿ, ( ಎಲೌ ದೇವಿಯೇ; ನಿಮ್ಮ ಅಪ್ಪಣೆಯಾದಂತೆ ಅಂತಃಪುರದಲ್ಲಿರುವ ಸಮಸ್ತ ಕಾಂತೆಯರಿಗೂ ವಸಂತೋ ತ್ಸವದ ಸಂಗತಿಯಂ ಕುರಿತು ಸಾರಿದೆನು ” ಎಂದು ಬಿನ್ನಿಸಲು; ದೇವಿಯು~ ( ಎಲೆ ಬಾಲೆಯೇ, ನೀನು ಪೋಗಿ ಮಹಾರಾಜೇಂದ್ರನಾದ ನಮ್ಮ ಸ್ವಾಮಿಗೂ ಈ ಉತ್ಸವದ ವಾರ್ತೆಯಂ ಪೇಳಿ ಮಕರಂದೋದ್ಯಾನಕೆ ಕರೆದುಕೊಂಡು ಬರುವಳಾಗು' ಎಂದು ಅಪ್ಪಣೆಯನ್ಶಿಯಲು; ಕಾಂಚನಮಾಲೆಯು-ಅಣ್ಣಿಯಾದಂತೆ ನಡೆದು ಕೊಳ್ಳುವೆನೆಂದು, ಸಮಸ್ತಾಭರಣಗಳಿಂದ ವಿಭೂಷಿತಳಾಗಿ ಕೈಯಲ್ಲಿ ಚಿನ್ನದ ಕಟ್ಟಿನ ಬೆತ್ತವಂ ಪಿಡಿದು ಸಂಗಡ ಊಳಿಗದ ಹೆಣ್ಣು ಗಳನ್ನು ಜತೆಗೊಂಡು ಬರುತ್ತಿರಲು; - ಇತ್ತಲು, ಮುತ್ತಿನ ಹಜಾರದಲ್ಲಿದ್ದ ವತ್ಸ ರಾಜನು ವಸಂತೋತ್ಸವಕ್ಕೆ ಸನ್ನದ್ದ ರಾದ ಅಂತಃಪುರದ ಕಾಂತಾ ಜನರು ಮಾತ್ರ ಗಾನಸ್ವರವನ್ನೂ ವೀಣಾವೇಣುಮುಖ ವೀಣೆ ಮೃದಂಗ ಮೊದಲಾದ ವಾದ್ಯ ಧ್ವನಿಯನ್ನೂ ಕಿವಿಗಿಂಪಾದ ಕಲಕಲಸ್ವರ ವನ್ನೂ ಸಹ ಕೇಳಿ ಒತ್ತಿನಲ್ಲಿದ್ದ ವಸಂತಕನಂ ಕುರಿತು ಎಲ್ಲೆ ಮಿತ್ರನೇ, ಮಂಗಳ ಕರವಾದ ಅಂಗನೆಯರ ಕೋಲಾಹಲಧ್ವನಿಯು ಕೇಳಬರುತ್ತಿರುವುದು, ಇಷ್ಟು ಸಂತೋಷಕ್ಕೆ ಕಾರಣವೇನಿರುವುದು?” ಎಂದು ಬೆಸಗೊಳಲು; ಅವನು-- ಎಲೈ ಮಹಾರಾಜೇಂದ್ರನೇ, ದೇವಿಯವರು ಮಕರಂದೋದ್ಯಾನವನದಲ್ಲಿ ಮನ್ಮಥನಂ