ಪುಟ:ವತ್ಸರಾಜನ ಕಥೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.- ವತ್ಸರಾಜನ ಕಥ, -- ೫೩ ಬ. ವುದು, ಸುವರ್ಣರತ್ನ ಮಯಗಳಾದ ಆಭರಣಗಳ ಕಾ೦ತಿಗಳಿಂದ ಸೊಂಪಾಗಿ ಮುಡಿದ ಸಂಪಗೆಯ ಹುವು ಗಳ ಹೊಳಪುಗಳಿಂದ ಎಲ್ಲರೂ ಸಾಭರಣದ ರಸದಿಂದ ಲಿಪ್ತರಾದಂತೆ ತೋರುವರು, ಈ ಕೌಶಾಂಬೀನಗರಿಯು ತನ್ನ ವೈಭವದಿಂದ ರಾಜ ರಾಜನಾದ ಕುಬೇರನ ಅಲಕಾವತಿ ಪಟ್ಟಣವನ್ನು ಅಲೆಗಳೆಯುತ್ತಿರುವುದು, ಮತ್ತು ಆಕಾಂತೆಯರು ಪಿಡಿದ ಸುವರ್ಣದ ಅಂಡೆಗಳಿಂದ ಹೊಡೆಯಲ್ಪಟ್ಟ ಸಾಂದ್ರವಾದ ಓಕುಳಿಯ ನೀರಿನಿಂದಲೂ, ಎಲ್ಲಾ ಕಡೆಯಲ್ಲಿಯೂ ಚೆಲ್ಲಿರುವ ಪರಿಮಳಗಂಧದ ಕೆಸರಿ ನಿಂದಲೂ, ಗೃಹಾ೦ಗಣವೆಲ್ಲಾ ಕೆಸರುಗೊಂಡಿರುವುದು, ಅದು ಕಾರಣದಿಂದ ಕ್ರಿಡೆಗೆ ಯೋಗ್ಯವಲ್ಲದೆ ಇರುವುದು, ಸೊಕ್ಕುಜವ್ವನದ ಕಾಂತೆಯರ ಕಪೋಲಗಳಿಂ ಜಾರಿದ ಕುಂಕುಮದ ಮಕರಿಕಾಪತ್ರಗಳ ದೂಳಿಗಳಿಂದ ಕೆಂಪಾಗಿರುವ ಮಣಿಮಯವಾದ ಭೂಮಿಯು ಕೆಂದಾವರೆಗಳಂತೆ ಅಂದವಾಗಿರುವ ಆತರುಣಿಯರ ಪಾದಗಳ ಕೆಂಪು ಗಳಿಂದ ಅಲತಿಗೆಯ ರಸದಿಂ ಸಾರಣೆಯಂಗೈದಂತೆ ತೋರುವುದು ' ಎಂದು ನುಡಿ ಯಲು; ವಿದೂಷಕನು- ಅಯ್ಯಾ, ರಾಜೇಂದ್ರನೇ, ಹದವಾಗಿ ಬೆದೆಗೊ೦ಡ ಸುದ ತಿಯರು ಕರಗಳಲ್ಲಿ ಪಿಡಿದ ಚಿನ್ನದ ಜೀರ್ಕೊಳವೆಗಳಿ೦ದ ಪರುಗಳಂ ತುಂಬಿ ಕಿರು ಮೊಲೆಯ ತರಳಾಕ್ಷಿಯರ ಮೇಲೆ ಪೊಯ್ಯಲು, ಅವರು ಜಲದ ತಂಪಿನಿಂ ಕುಚಗಳಂ ತಬ್ಬಿ ನಸು ನಡುಗುತ ರೋಮಾಂಚನಾಂಕಿತಕಾಯರಾಗಿ, ಕೊತ೦ಗೂಡಿದ ಹುಬ್ಬು ಗಳಿ೦ದಲೂ, ಅರೆದೆಗೆದ ದೃಷ್ಟಿಯಿಂದಲೂ, ಪೊಸತಾದ ಕೇಳಿಯಲ್ಲಿ ಹಸನಾಗಿ ತೋರುವ ಲೀಲೆಯಂ ಸೂಚಿಸುತ್ತಿರುವರು. ಇತ್ತಲು ನೋಡು. ” ಎಂದು ಬಿನ್ನೆ ಸಲು; ಎಲೈ ವಿದೂಷಕನೇ, ಚೆನ್ನಾಗಿ ಹೇಳಿರುವೆ. ಅದರ ಸಂತೋಷದಿಂದ ಒಬ್ಬ ರೊಬ್ಬರ ಮೇಲೆ ಬಿಡದೆ ಇಟ್ಟಾಡಿದ ಗಂಧದ ಪುಡಿಯಿ೦ ಪುಟ್ಟದ ಅ೦ಧಕಾರದ ನಡು ವೆ ಹೆಡೆಗಳಂತೆ ರಾಬಿಸುವ ಸುವರ್ಣದ ಅಂಡೆಗಳಲ್ಲಿ ಕೆತ್ತಿದ ರತ್ನ ಕಾಂತಿಗಳಿಂದ ರಮ ೬ಣೀಯವಾದ ಈ ಸ್ತ್ರೀಯರಗಳು ಪಾತಾಳ ಲೋಕದಲ್ಲಿ ಒಪ್ಪುವ ನಾಗಕನ್ನೆ ಯರಂತ ರಾಜಿಸುತ್ತಿರುವರು ?” ಎಂದು ನುಡಿಯಲು, ವಿದೂಷಕನು,-- ಎಲೈ ಸ್ವಾಮಿಯೇ ಇತ್ತಲು ದೃಷ್ಟಿಯನ್ನಿರಿಸುವನಾಗು. ಮಧುಪಾನದ ಸೊರ್ಕಿ ನಿ೦ದ ತಾರುಮಾರಾದ ಅಭಿನಯದಿಂ ಯುಕ್ತಳಾದ ಕಲಾವತಿಬಿಂಬ ಕಾಂತೆಯು ನಾಟ್ಯ ವಂಗೆಯ್ಯುತ ದಿವಸಲಕ್ಷ್ಮಿಯು ಸಂಧ್ಯಾ ರಾಗವನ್ನು ಟ್ಟಂತೆ ಚಂದ್ರಗಾವಿಯ ಸೀರೆಯಿ೦ದ ಸುಂದರ ಳಾದ ಕಾಂಚನಮಾಲೆಯಿಂದೊಡಗೂಡಿ ಇತ್ತಲು ಬರುತ್ತಿರ್ವಳು ?” ಎಂದು ಬಿನ್ನೈ ಸಲು; ಕಲಾವತಿ ಕಾಂಚನಮಾಲೆಯರಿತ್ವರು ಸಂತೋಷದಿಂಭರಿತರಾಗಿ ಚಂದ್ರ ಶಾಲೆಯಂ ಕುರಿತು ಬರುತ್ತ ದ್ವಿಪದೀಖಂಡವೆಂಬ ಹಾಡುಗಳಂ ಹಾಡುತ ಬರಲು; ಕಲಾವತಿಯು ಮನ್ಮಥನಿಗೆ ಪರಮಿತನಾದ ಈ ಮಂದಮಾರುತನು ಮಾವಿನ ಮರಗಳಲ್ಲಿ ಮೊಗ್ಗುಗಳನ್ನರಳಿಸುತ್ತ ಮಾನಿನಿಯರ ಮನದಲ್ಲಿ ಹುಟ್ಟಿದ ಮಾನವನ್ನ ಡಗಿ ಸುತ್ತ ತ೦ಪುದೋರಿ ಸೊಂಪುಮೀರಿ ಕಂಪುಬೀರಿ ಬೀಸುತ್ತಿರುವನು' ಎಂದು ಹಾಡು