ಪುಟ:ವತ್ಸರಾಜನ ಕಥೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y೪ - ಕರ್ನಾಟಕ ಕಾವ್ಯಕಲಾನಿಧಿ, - ತಿರಲು; ಕಾಂಚನಮಾಲೆಯು ಎಲೆ ಬಾಲೆಯೇ, ಉಕ್ಕಿಬರುವ ಸೊಕ್ಕುಜವ್ವನದ ಕಕ್ಕಸಮೊಲೆಯ ಬಾಲೆಯರು ಈ ವಸಂತೋತ್ಸವದ ಮಹಿಮೆಯಿಂದ ತಮ್ಮ ಎದೆ ಯಲ್ಲಿ ಹುಟ್ಟಿದ ಬೆದೆಯಂ ತಾಳಲಾರದೆ ತಮ್ಮ ಅಹಂಕಾರವಂ ತೊರೆದು, ಇನಿಯರ ಸನ್ಮಾನಕ್ಕೆ ಮನಸೋತು ಗಾಳಿಗೆ ಅಲೆಯುವ ಬಾಳೆಲೆಗಳಂತೆ ಹೊಳಕು ತೋರು ವರು, ಮತ್ತು ಈ ವಸಂತಮಾಸವೇ ಯವನದಿಂ ವಿಭೂಷಿತರಾದ ಕಾಮಿಜನರ ಮನದಲ್ಲಿ ಮೂಢ ಭಾವವಂ ಮೂಡಿಸುತ್ತಿರುವುದು, ಆಬಳಿಕ ಸತ್ವರಂ ಸವೆಯುತ್ತಿ ರುವ ಮದನನು ಹದವಾದ ಅಂಬುಗಳಿಂದ ಹೃದಯಮಂ ಸೀಳುತ್ತಿರುವನು. ೨೨ ಎಂದು ಪಾಡುತ ಬ ಎಂಬಲ್ಲಿಗೆ ತಿ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ತಿಕೃಷ್ಟರಾಜ ಸೂಕ್ತಿ ಮುಕ್ತಾವಳಿಯೆಂಬ ಗ್ರಂಥದೊಳೆ ನ ಕಥೆಯಲ್ಲಿ ಸಪ್ತಮಗುಚ್ಛಂ ಸಂಪೂರ್ಣ ಪು.

  • ಎಂಟನೆಯ ಗುಚ್ಛಂ.

ಅನಂತರದಲ್ಲಿ ವತ್ಸ ರಾಜೇಂದ್ರನು ಮನಬಂದಂತೆ ಕ್ರೀಡಿಸುತ್ತಿರುವ ತುಂಬು ಜವ್ವನದ ನಾರಿಯರ ವಿಲಾಸವಂ ನೋಡಿ, ಅಧಿಕಸಂತೋಷವಂ ತಾಳಿ, ಮುಂಬಾ ಗದಲ್ಲಿ ಬರುತ್ತಿರುವ ಕಲಾವತಿ ಕಾಂಚನಮಾಲೆಯರಂ ಕಂಡು ವಿದೂಷಕನಂ ಕುರಿ ತು- ಅಯ್ಯಾ ಮಿತ್ರನೇ, ದೇವಿಗೆ ಅತ್ಯಂತ ಪ್ರೇಮಕ್ಕೆ ಪಾತ್ರಳಾದ ಕಾಂಚನ ಮಾಲೆಯು ಕಲಾವತಿಯಿಂದೊಡಗೂಡಿ ಬರುವಳು. ಈ ಭಾವವು ಎನ್ನ ನ್ನು ವಸಂತೋತ್ಸವಕ್ಕೆ ಕರೆಯಲೋಸುಗವೆಂದೇ ತೋರುತ್ತಿರುವುದು, ಮತ್ತೆ ಸುತ್ತಲೂ ಸುತ್ತಿರುವ ಮತ್ತಗಜಗಾಮಿನಿಯರಾದ ಈ ಕಾಮಿನಿಯರ ಲೀಲೆಗಳು ವೃದ್ಧಿಯಂ ಹೊಂದಿ ಮನಕ್ಕೆ ಮಂಗಳವನ್ನುಂಟುಮಾಡುತ್ತಲಿರುವುವು, ಹೇಗೆಂದರೆ-ನಾಟ್ಯ ವೇಗದಿಂ ಅಲೆಯುತ್ತಿರುವ ಪುಷ್ಪಮಾಲೆಗಳು ಜಾರುವಂತೆಯೂ, ಸೊಂಪಾಗಿ ಕೆ೦ ಪಾದ ಪಾದಗಳಲ್ಲಿ ತಗಲಿಕೊಂಡಿರುವ ಪಾದಸರ ಗಗ್ಗ ರಂಗಳು ಕಿವಿಗಳಿಗೆ ಇಂಪಾದ ಧ್ವನಿಯನ್ನುಂಟುಮಾಡುತ್ತಲೂ, ಹಾರಗಳು ಹಾರುತ್ತ ವಕ್ಷಸ್ಥಳವಂ ಪೀಡಿಸುವಂತೆ ಯೂ, ಕುಚಗಳ ಭಾರಕೆ ಬಡನಡುವು ಬಳುಕುವಂತೆಯೂ, ನಾಟ್ಯವಂ ಗೆಯ್ಯುವ ಈ ಸ್ತ್ರೀಯರುಗಳ ಲೀಲಾವ್ಯಾಪಾರಂಗಳು ಹೇರಳವಾಗಿ ನೇತ್ರಾನಂದವಂತೋರಿಸು ತಿರುವುವು ?” ಎಂದು ನುಡಿಯಲಾ ವಿದೂಷಕನು- ಅಯ್ಯಾ, ರಾಜೇಂದ್ರ ನೇ,