ಪುಟ:ವತ್ಸರಾಜನ ಕಥೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - XH ನಾಟ್ಯವಂ ಗೆಯ್ಯುತ್ತ ನಲಿಯುತ್ತಿರುವ ಈ ಹೆಣ್ಣು ಗಳ ನಡುವೆ ನಾನು ಪೋಗಿ ನಾಟ್ಯ ವಂ ವಿರಚಿಸಿ ಬರುವೆನು ” ಎಂದು ಬಿನ್ನೆಸಲು ; ರಾಜೇಂದ್ರನು, ಎಲ ಹಾಸ್ಯ ಗಾರನೆ, ಅದೇರೀತಿಯಿಂದ ಮಾಡಬಹುದು ” ಎಂದು ಅಪ್ಪಣೆಯನ್ಶಿಯಲು, ಆ ವಿದೂಷಕನು ಚಂದ್ರ ಶಾಲೆಯಿಂದಿಳಿದು ಹೊದೆದ ಧೋತ್ರವಂ ನಡುವಿಗೆ ಸುತ್ತಿ ಆ ಕಲಾವತಿ ಕಾಂಚನಮಾಲೆಯರ ನಡುವಿನಿಂದ ವಕವಾಗಿ ಕುಣಿಯುತ್ತ, 'ಎಲೆ ಕಲಾವತಿಯೇ, ಈ ಚರ್ಚರಿಯೆಂಬ ಎ ಾಗಿ ಕಲಿ ಸು ” -ಎಂದು ನುಡಿಯಲಾಕಲಾವತಿಯು (ಎಲೈ ಹೆಡ್ಡನಾದ ವಿದೂಷಕನೇ, ಇದು ಚರ್ಚರಿಯಲ್ಲ, ದ್ವಿಪದೀಖಂಡವನ್ನು ಹಾಡುತ್ತಿರುವೆನು ” ಎಂದು ನುಡಿಯಲು ; ಅವನು,– ಎಲೆ ಬಾಲೆಯೇ ದ್ವಿ ಸದೀಖಂಡವಾದರೆ, ಹೂರಣಗಡುಬುಗಳ೦ ಮಾಡು ವುದಕ್ಕೆ ಯೋಗ್ಯವಾಗುವುದೇ ಪೇಳು ? ?” ಎನಲು; ಆ ಕಲಾವತಿಯು ನಸುನಗುತ್ತ • ಮೂಢನೇ, ಇದು ಹಾಡುವುದಕ್ಕೆ ಯೋಗ್ಯವಲ್ಲದೆ ಹೂರಣಗಡುಬಿಗೆ ಯೋಗ್ಯ ವಾಗಲಾರದು ?” ಎನಲು ; ಹಾಗಾದರೆ ಎನಗೆ ಇದರಿಂದ ಕಾವ್ಯವೇನು ? ನಮ್ಮ ಸ್ವಾಮಿಯು ಇದ್ದ ಎಡೆಗೆ ಪೋಗುವೆನು ?” ಎಂದು ನುಡಿಯುತ್ತಿರಲು, ಕಲಾವತಿಯು ಅವನ ಕರವಂ ಪಿಡಿದು, 11 ಇಲ್ಲಿ ನಾಟ್ಯವಂ ಗೆಯ್ಯದೆ ಎಲ್ಲಿ ಪೋಗುತ್ತಿರುವೆ? ” ಎನ ಲು, ಕಾಂಚನಮಾಲೆಯು ನಸುನಗುತ, 7 ಎಲೈ ವಿದೂಷಕನೇ, ನಾವಿಬ್ಬರೂ ರಾಯ ನ ಸನ್ನಿ ಧಾನಕೆ ಬರುತ್ತಲಿರ್ಪೆವು, ನೀನು ನಮ್ಮ ಗಾನಕ್ಕೆ ಸಮವಾಗಿ ನಾಟ್ಯವಂ ಗೆಯ್ಯುವದು ” ಎಂದು ಕರವಂ ಪಿಡಿದು ಎಳೆಯಲಾವಿದೂಷಕನು ಅದೇರೀತಿ ಯಿಂದ ಗೆಯ್ಯುವೆನೆಂದು ಕುಣಿಯುತ್ತ, ಅವರಿತ್ವರಿ೦ ತಪ್ಪಿಸಿಕೊಂಡು ರಾಯನಿದ್ದೆಡೆಗೆ ಬಂದು ಸೇರಲು, ರಾಯನು-IC ಎಲೈ ವಿದೂಷಕನೇ, ಆ ಸ್ತ್ರೀಯರಿಬ್ಬರೂ ಏತಕ್ಕೋ ಸುಗವಾಗಿ ನಿನ್ನ ಹಸ್ತವಂ ಪಿಡಿದೆಳೆಯುತ್ತಲಿದ್ದರು ?” ಎಂದು ನುಡಿಯಲು; ಅವನು(* ಎಲೈ ಸ್ವಾಮಿಯೇ, ಆ ಕಲಾವತಿ ಕಾಂಚನಮಾಲೆಯರು ಎನ್ನ ನಾಟ್ಯ ಚಾತುಯ್ಯ ವನ್ನು ಕಲಿಸೆಂದು ಕರವನ್ನು ಎಳೆಯಲು ನಾನು ಅದನ್ನು ಕಲಿಸದೆ ನಿನ್ನ ಸನ್ನಿಧಿ ಯಂ ಕುರಿತು ಬಂದೆನು ?” ಎಂದು ನುಡಿಯಲಾರಾಯನು ನಗುತ- ಎಲೈ, ಮಿತ್ರ ನೇ, ಆ ಸ್ತ್ರೀಯರಿಬ್ಬರೂ ಇಲ್ಲಿಗೆ ಬರುವರೋ, ಮತ್ತೊಂದು ಕಾರ ನಿಮಿತ್ತವಾಗಿ ಪೋಗುವರೋ ಪೇಳು ? ೨೨ ಎನಲು ; ಅವನು “ ಎಲೈ ಸ್ವಾಮಿಯೇ, ಅವರು ಸೇ ಳಿದ ವಾಕ್ಯದಿಂದ ಈ ನಿನ್ನ ಸನ್ನಿ ಧಿಯನ್ನೇ ಹೊಂದುವರಾಗಿ ತೋರುವರು. ) ಎಂದು ಬಿನ್ಲೈಸಲು ; ಅತ್ತ ಕಾಂಚನಮಾಲೆಯು – ಎಲೆ ಕಲಾವತಿಯೇ, ಈ ನಾವಿಬ್ಬರೂ ಬಹುಕಾ ಲದಿಂದ ವಿನೋದವ್ಯಾಪಾರದಲ್ಲಿದ್ದುಕೊಂಡು ದೇವಿಯರ ಆಜ್ಞೆಯನ್ನು ಮರೆತಿರು ವುದು ನ್ಯಾಯವಲ್ಲ. ಅದರಿಂದ ಶೀಘ್ರವಾಗಿ ನಡೆಯುವಳಾಗು. ರಾಯನ ಸನ್ನಿಧಿಯಂ ಪೊಂದುವವು.” ಎಂದು ಅವಳಿಂದೊಡಗೂಡಿ ಬರುತ್ತ, ಚಂದ್ರಶಾಲೆ