ಪುಟ:ವತ್ಸರಾಜನ ಕಥೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

He - ಕರ್ನಾಟಕ ಕಾವ್ಯಕಲಾನಿಧಿ, - ಯ ಹಂತವನ್ನು ಹತ್ತುವಲ್ಲಿ ಕಾಲುಂಗರ ಕಾಲುಸರ ಗಗ್ಗರ ಮೊದಲಾದ ಶಬ್ದಂಗ ಳಿಂದ ದಿಕ್ಕುದಿಕ್ಕುಗಳಲ್ಲಿ ಪ್ರತಿಧ್ವನಿಯನ್ನು ಪುಟ್ಟ ಸುತ್ತ ರಾಯನಿದ್ದೆಡೆಗೆ ಬಂದು, (ಎಲೈ ಮಹಾರಾಜೇ೦ದ್ರನೇ! ಜಯವುಳ್ಳವನಾಗು ಜಯವುಳ್ಳ ನಾಗು,' ಎಂದು ಅದೇ ನೋ ಒಂದು ಒಯ್ಯಾರವನ್ನು ೦ಟುಮಾಡುತ್ತ ನಮಸ್ಕಾರವಂ ಗೈದು, ನಿಂದು,- ಎಲೈ ಸ್ವಾಮಿಯೇ, ದೇವಿಯರು ನಿಮಗೆ ಅಪ್ಪಣೆಯನಿತ್ತು ಕಳುಹಿಸಿದರು ?” ಎಂದು ಅರೆ ಮಾತನ್ನು ನುಡಿದು, ( ಎಲೈ ಸ್ವಾಮಿಯೇ, ತಪ್ಪಿ ನುಡಿದೆನು. ನಿಮಗೆ ವಿಜ್ಞಾಪನೆ ಯಂ ಗೆಯ್ಯುವಂತೆ ಹೇಳಿರುವರು ?” ಎಂದು ಬಿನ್ನಿಸಲು ; ರಾಯನು (ಎಲೆ ಕಾಂಚನಮಾಲೆಯೇ, ಈಗಿನ ಪ್ರಕೃತಕೆ ದೇವಿಯರು ಅಪ್ಪಣೆಯನ್ನಿತ್ತಿರುವರೆಂದು ಹೇಳುವುದೇ ಸೊಗಸಾಗಿರುವುದು, ಅದರಲ್ಲೂ ಈಗ ಮನ್ಮಥೋತ್ಸವವೂ ಪ್ರಾಪ್ತ ವಾಗಿರುವುದು, ಆದರೆ ದೇವಿಯು ಏನೆಂದು ಬಿನ್ನಿಸುವಂತೆ ಕಳುಹಿಸಿರುವಳು ? :) ಎನಲು ; ಕಾಂಚನಮಾಲೆಯು ನಾಚಿಕೆಯಿಂದ ತಲೆಯಂ ತಗ್ಗಿ ಸಿ-- ಎಲೈ ಸ್ವಾ ಮಿಯೇ, ಈಗ ಮಕರ೦ದೋದ್ಯಾನ ವನವೆಂಬ ಶೃಂಗಾರತೋಟದ ಚೆನ್ನ ಸುಗೆಯ ಮರದ ಅಡಿಯಲ್ಲಿ ಲೋಕ ಪ್ರಖ್ಯಾತನಾದ ಮನ್ಮಧರಾಜನಂ ವೂಚಿಸುತ್ತಿರುವರು. ಅದರಿಂದ ಸ್ವಾಮಿಯವರು ಅಲ್ಲಿಗೆ ಬಿಜಯಂಗೈದು ಪೂರ್ಣವಂ ಗೆಯ್ಯಬೇಕೆಂದು ಬಿನ್ಲೈಸುವಂತೆ ನಮ್ಮಿಬ್ಬರನ್ನೂ ದೇವರವರ ಸನ್ನಿಧಿಗೆ ಕಳುಹಿಸಿರುವರು. ಎಂದು ನುಡಿಯಲು; ರಾಯನು ಬಹಳ ಸಂತೋಷವಂ ತಾಳಿ, ( ಎಲೈ ವಿದೂಷಕನೇ, ಶೀಘ್ರದಿಂದ ಪೋಗಿ, ಎನ್ನ ಮನೋರಥವನ್ನು ಸಾಧಿಸುವ, ನಡೆ, ” ಎನಲು ; ವಿದೂಷಕನು- ಅಯ್ಯಾ, ರಾಜೇಂದ ನೇ, ಮನ್ಮಥನಂ ಪೂಜಿಸುವಲ್ಲಿ ಸ್ವಸ್ತಿವಾ ಈವಂ ಪೇಳುವ ಬ್ರಾಹ್ಮಣನಾದ ಎನಗೆ ಏನಾದರೂ ದಕ್ಷಿಣೆಯು ದೊರಕುತ್ತಲಿರು ವುದು, ಆದುದರಿಂದ ಶೀರ್ಘವಾಗಿ ಪೋಗುವ ನಡೆ.' ಎನಲು; ರಾಯನು-( ಎಲೆ ಕಾಂಚನಮಾಲೆಯೆ, ನಾವು ಶೀಘ್ರದಿಂ ಬರುವೆವು, ತ್ವರೆಯಿಂದ ನೀನು ಈ ವಾ ರ್ತೆಯನ್ನು ದೇವಿಗೆ ಬಿನ್ನಿಸುವಳಾಗು ” ಎಂದು ಅಪ್ಪಣೆಯನೀಯಲು ಅವರಿ ಬ್ಬರೂ ರಾಯನಿಗೆ ವಂದನೆಯಂಗೈದು, ಕಾಂಚನಮಾಲೆಯು--ಅಜ್ಜಿಯಾದಂತೆ ನಡೆ ದುಕೊಳ್ಳುವೆನೆಂದು ಕಲಾವತಿಯಿಂದೊಡಗೂಡಿ ಪೋಗಲು ; - ಇತ್ತಲು, ಪ್ರಶಾಲೆಯಲ್ಲಿದ್ದ ಸಾಗರಿಕೆಯು ಸತ್ಪಾಲಂಕಾರಭೂಷಿತಳಾಗಿ ಸುಸಂಗತೆಯ ಕುರಿತು ಎಲೆ, ಈ ಶಾರಿಕೆಯ ಪಂಜರವನ್ನು ರಕ್ಷಿಸುತ್ತಿರುವ ಳಾದರೆ, ನಾನು ಮಕರಂದೋದ್ಯಾನ ವನಕ್ಕೆ ಪೋಗಿ ಮನ್ಮಥನ ಪೂಜೆಯ ಸೊಗ ಸನ್ನು ನೋಡಿ ಬರುವೆನು” ಎಂದು ಆ ಪಂಜರವಂ ಕೊಟ್ಟು, ಮಂಗಳದ್ರವ್ಯಗಳು ತುಂಬಿದ ತಟ್ಟೆಯನ್ನು ಹಸ್ತದಲ್ಲಿ ಸಿಡಿದು, ಮನ್ಮಥನಿಗೆ ಪಟ್ಟಾಭಿಷೇಕವಂ ಗೆಯ್ದು ವುದಕ್ಕೆ ಪೋಗುವ ವಸಂತಲಕ್ಷ್ಮಿಯೋ ಎಂಬಂತೆ ಬಂದು, ದೇವಿಯ ಊಳಿಗದ ಸೆಣ್ಣುಗಳ ಗುಂಪಿನಲ್ಲಿ ನಿಂತಿರಲು ; ೯