ಪುಟ:ವತ್ಸರಾಜನ ಕಥೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - Yಕ್ಕಿ ಇತ್ತರಾಯನು-II ಅಯ್ಯಾ ವಿದೂಷಕನೇ, ದೇವಿಯ ಸವಿಾಪವಂ ಸೇರುವ, ನಡೆ ಎಂದು ಅವನ ಕೆಯ್ಯಂ ಪಿಡಿದು, ಚಂದ ಶಾಲೆಯಿಂದ ಇಳಿದು ಬರುತ್ತಿ ರಲು ; ವಿದೂಷಕನು ಮುಂದುಗಡೆಗೆ ಬಂದು ಸುತ್ತಲೂ ನೋಡಿ - ಎಲೈ ರಾಜೇಂ ದ್ರನೇ, ಇದೋ ! ಇತ್ತಲು ಮಕರಂದೋದ್ಯಾನವನದ ಬಾಗಿಲಿರ್ಪುದು, ಬಿಜ ಯಂಗೆಯ್ಯಬಹುದು. ” ಎಂದು, ಆ ವನವಂ ಪೊಕ್ಕು, ಅಲ್ಲಿರುವ ವೃಕ್ಷಲತೆಗಳ ಸೌಂದಯ್ಯ ವಂ ನೋಡಿ, ಆಶ್ಚರವಂ ಪೊಂದಿ, ( ಎಲೈ ರಾಜೇಂದ್ರನೇ, ಇತ್ಯ ನೋಡು, ಈ ಶೃಂಗಾರದ ತೋಟದಲ್ಲಿ ಮಾರನ ತಳವಾರನಂತ ಮುಂದುವರಿದು ಸಂಚರಿಸುವ ತಂಗಾಳಿಯಿಂದೆ ಚಲಿಸುತ್ತಿರುವ ಪಲ್ಲವಂಗಳಿಂ ಕೂಡಿದ ಸೀಮಾವಿನ ಪುಷ್ಪ ಗುಚ್ಛಗುಚ್ಚಗಳಿಂದ ಮೊತ್ತವಾಗಿ ಸುತ್ತವಾಗಿ ಉದುರಿರುವ ಪರಾಗಗಳಿಂದ ಪೂರಿತಗಳಾದ ಕಲ್ಲಾರಿಗಳಿಂದ ಎತ್ತಲು ವ್ಯಾಪ್ತವಾಗಿ, ಮಕರಂದವಂ ಪೀರಿ ಮದ ವೇರಿ ನಯವಾಗಿ ಝಂಕಾರವಂ ಗೆಯ್ಯುವ ಶೃಂಗಗಳ ಧ್ವನಿಗಳೆಂಬ ಸ್ವಸ್ತಿವಾಚನೆ ಗಳಿಂದ ಯುಕ್ತವಾಗಿ, ಕಿವಿಗಿಂಪಾದ ಕೋಗಿಲೆಗಳ ಮಧುರಸ್ಕರವೆಂಬ ಮಂಗಳ ವಾದ್ಯದಿಂದೊಡಗೂಡಿ, ಚಲಿಸುತ್ತಿರುವ ತಾಳೆಯ ಮರಗಳ ಎಲೆಗಳ ಶಬ್ದವೆಂಬ ತಾಳದ ಶಬ್ದದಿಂದ ರಮ್ಯವಾಗಿ, ಒಂದು ಮಟ್ಟಾಗಿ ಚಂಚಲಂಗಳಾದ ಎಳಲತೆಗ ಳೆಂಬ ನಾಟ್ಯ ಸ್ತ್ರೀಯರಿಂದೊಡವೆರೆದು, ಮನ್ಮಧನೆ೦ಬ ನಾಟ್ಯಾಚಾರ್ನು ವಿರಚಿಸಿ ರುವ ಇದೊಂದು ಸರಿಯಾದ ರಂಗಸ್ಥಾನವೋ ಎಂಬಂತೆ ಮೆರೆಯುತ್ತಿರುವ ಈ ವನದ ಸೊಗಸನ್ನು ನೋಡು! ' ಎಂದು ಬಿನ್ನೈಸಲು ; ರಾಯನು ವನವೆಲ್ಲವಂ ನೋಡಿ, - ಎಲೈ ವಿದೂಷಕನೇ, ನೀನು ನುಡಿದ ವಾಕ್ಯವು ಯುಕ್ತವೇ ಸರಿ , ಮೊದಲಾಗಿ ಯ ಈ ವನವೇ ಎನ್ನ ಮನಕ್ಕೆ ಹೇರಳವಾದ ಸಂತೋಷವಂ ಬೀರುತ್ತಿರುವುದು, ಇದರಲ್ಲಿ ಎನ್ನ ಮನೋಗತಳಾದ ಮಂಗಳಾಂಗಿಯಂ ಕಂಡೆನಾದರೆ, ಎನ್ನ ಸಂತೋ ಷವೆಂಬ ಸಮುದ್ರ ವ ಮೇರೆಯುಂ ವಿಾರಿ ಉಕ್ಕುತ್ತಿರುವುದು, ಮತ್ತೂ ಈ ವನ ದಲ್ಲಿ ಪ್ರಕಾಶಿಸುತ್ತಿರುವ ಹವಳಗಳಂತೆ ಬಣ್ಣವೇರಿದ ಚಿಗುರುಗಳಿ೦ ರಕ್ತತ್ವವಂ ತಾಳಿ, ಮನೋಹರ೦ಗಳಾದ ತುಂಬಿಗಳ ಧ್ವನಿಗಳೆ೦ಬ ಸ್ಪುಟವಾದ ಅಕ್ಷರಂ ಗಳಿಂದ ಶೂನ್ಯವಾದ ವಾಕ್ಯಗಳಿ೦ದ ಯುಕ್ತವಾಗಿ, ಮಂದಮಾರುತದ ಸಂದಣಿ ಯಿಂದ ಚಲಿಸುತ್ತಿರುವ ತುದಿಗೊಂಬೆಗಳಿ೦ದ ಭ್ರಮೆಯಂ ಪೊಂದಿರುವ, ಈ ವೃಕ್ಷ ಗಳು ಮದ್ಯಪಾನಗಳಿಂದ ಮಗಳಾಗಿರುವಂತೆ ತೋರುತ್ತಿರುವುವು. ಇತ್ತ ನೋಡು, ವಕುಳವೃಕ್ಷಗಳು ಕಾಮಿನಿಯರು ಮುಕ್ಕುಳಿಸಿ ಬುಡದಲ್ಲಿ ಉಗಿದಿರುವ ಮದ್ಯವನ್ನು ವೃದ್ಧಿಯಂ ಪೊಂದಿಸಲೋಸುಗವೋ ಎಂಬಂತೆ ತಮ್ಮಲ್ಲಿ ಪ್ರಟ್ಟಿದ ಮಕ ರಂದದ ಮಳೆಯನ್ನು ಉಂಟುಮಾಡುತ್ತಲಿರುವುವು; ಸಂಪಗೆಯ ಮರಗಳು ಯೌವನ ದ ಹೆಣ್ಣು ಗಳ ಮುಖವು ಮದ್ಯಪಾನದಿಂ ಕೆಂಪಾಗುತ್ತಲಿರಲು, ಅವರ ಮೈ ಬಣ್ಣವನ್ನು ಕಳುವುದಕೋಸುಗವೋ ಎಂಬಂತೆ ಪುಷ್ಪಗಳಿಂ ಪೂರಿತ೦ಗಳಾಗಿರುವುವು ; ದೋ