ಪುಟ:ವತ್ಸರಾಜನ ಕಥೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hv - ಕರ್ನಾಟಕ ಕಾವ್ಯಕಲಾನಿಧಿ, - ಹಳ ನಿಮಿತ್ತವಾಗಿ ಬಂದಿರುವ ದೇವಕಾಂತೆಯರ ಕಾಲಂದುಗೆಯ ಧ್ವನಿಯಂ ಕೇಳಿ ಅಭ್ಯಾಸವಂ ಗೆಯ್ಯುವುವೋ ಎಂಬಂತೆ ಅಶೋಕವೃಕ್ಷಗಳು ತುಂಬಿಗಳ ಶಬ್ದಂಗ ಳಿಂದ ಯುಕ್ತವಾಗಿರುವುವು ?” ಎಂದು ನುಡಿಯಲು ; ವಿದೂಷಕನು-ಎಲೈ ಸ್ವಾಮಿಯೇ, ಈ ತುಂಬಿಗಳ ಮಧುರಸ್ವರವನ್ನು ಅನುಸರಿಸಿ ದೇವಿಯ ಊಳಿಗದೆ ಸೆಣ್ಣುಗಳ ಕಾಲಂದುಗೆಯ ಧ್ವನಿಗಳು ಕೇಳಿಬರುವುವು ?” ಎಂದು ನುಡಿಯುತ್ತಿ ರಲು ; ಅಷ್ಟರಲ್ಲೇ ವಾಸವದತ್ತಾ ದೇವಿಯು ನಕ್ಷತ ಸಮೂಹದ ಮಧ್ಯದಲ್ಲಿ ಹೊಳೆ ಯುತ್ತಿರುವ ಚಂದ್ರಲೇಖೆಯಂತೆ ಅನೇಕರಾದ ಸ್ತ್ರೀಯರ ಮಧ್ಯದಲ್ಲಿ ದಿವ್ಯಾ ಬರಭೂಷಣಂಗಳಿಂದ ಅಲಂಕೃತಳಾಗಿ ಬರುತ್ತಿರಲು ; ಕಾಂಚನಮಾಲೆಯು ಅವಳ ಒತ್ತಿನಲ್ಲಿ ಪುಷ್ಪಗಳಿಂದ ಪೂರಿತವಾದ ರತ್ನದ ತಟ್ಟೆಯಂ ಪಿಡಿದು ಬರುತ್ತಿರುವ ಸಾಗರಿಕೆಯಂ ಕಂಡು ತನ್ನ ಮನದಲ್ಲಿ ಈ ಸುಂದರಾಂಗಿಯು ಊಳಿಗದ ಪೆಣು ಗಳ ಸಂದಣಿಯಲ್ಲಿ ಬಂದಿರುವಳು ; ನಮ್ಮ ರಾಜೇಂದ್ರನೂ ಬರುತ್ತಿರುವನು. ಮನ್ಮಥ ಪೂಜೆಯು ಸಂಪೂರ್ಣವಾಗಿಯೇ ನಡೆಯುವಂತೆ ಕಾಣುತ್ತಲಿರುವುದು, ಬಾರಿ ಬಾರಿಗೂ ದೇವಿಯಲ್ಲಿ ಇವಳ ಮೇಲೆ ದೂರನ್ನು ಹೇಳುವುದು ನ್ಯಾಯವಲ್ಲ. ಹೇ ಗಾದರೂ ಕಾರವು ನಡೆಯಲಿ, ಮೊದಲು ಹೇಳಿದುದಕ ಎನಗೆ ಮಾನಭಂಗವು ಸಂಪೂರ್ಣವಾಗಿ ಉಂಟಾಗಿರುವುದು ?” ಎಂದು ಯೋಚಿಸುತ್ತ ಬರುತ್ತಿರಲು ; ದೇವಿಯು ಎಲೆ ಕಾಂಚನಮಾಲೆಯೇ ಮುಂದುವರಿದು ಮಕರಂದೋದ್ಯಾನದ ಮಾರ್ಗವನ್ನು ತೋರಿಸುತ್ತ ನಡೆ ಎಂದು ಆಜ್ಞೆಯನ್ನಿ ಯಲು ; ಅವಳು ಭಯ ಭಕ್ತಿಯಿಂದ ಯುಕ್ತಳಾಗಿ, ಇದೊ ಇಲಾಗಿ ಚಿಸತಕ್ಕುದು. ಇತ್ತಲು ಮಕರಂದದ ಕಾಲುವೆಯ ದಾಂಟುವುದಕೆ ಅಸಾಧ್ಯವಾಗಿ ತೋರುವುದು, ಇತ್ತಲು ಪುಷ್ಪರಾಗಗಳಿಂದ ಪೂರಿತವಾದ ದಾರಿಯಲ್ಲಿ ಪಾದಗಳನ್ನಿರಿಸಲು ಮೊಳಕಾಲು ವರೆಗೂ ಹೂಳಿಹೋಗುವುದು, ಇತ್ತಲು ಏಳೆಲೆಯ ಬಾಳೆಯಿಂ ಪಟ್ಟದ ಪಚ್ಛಗ ಪ್ರರದ ದೂಳಿಯ ರಾಶಿಯನ್ನು ಹತ್ತಿ ಇಳಿಯುವುದು ಕಷ್ಟವಾಗಿ ಕಾಣುತ್ತಿರು ವುದು, ಇತ್ತಲು ವಿರಹವನ್ನು ಸಹಿಸಲಾರದೆ ಹಲ್ಲುಗಳಂ ಕಿರಿಯುತ್ತಿರುವ ವಿರಹಿ ಜನರನ್ನು ಹಾಸ್ಯನಂ ಗೆಯ್ಯುವುದೋ ಎಂಬಂತಿರುವ ಅರೆಬಿರಿದ ದಾಳಿಂಬದ ಹಣ್ಣು ಗ ಳಿಗೆ ಎರಗುವ ಗಿಳಿಗಳ ಗರಿಗಳಿಂದ ಪಟ್ಟದ ಕಿರುಗಾಳಿಗೆ ಅಲೆಯುತ್ತಿರುವ ವಕುಳ ಪುಷ್ಪಗಳಿಂ ಸುರಿಯುತ್ತಿರುವ ಮಕರಂದವು ಮಳೆಗಾಲದ ಶಂಕೆಯಂ ಪುಟ್ಟಿಸುತ್ತಿರುವುದು ” ಎ೦ದು, ಮುಂಗಡೆಯಂ ಚೆನ್ನಾಗಿ ನೋಡಿ ಎಲ್‌ ತಾಯೇ, ಇತ್ಯಲು ಚೆನ್ನಾಗಿ ದೃಷ್ಟಿ ಯಂ ಇರಿಸುವಳಾಗು. ಈ ವಸಂತ ಸಮಯ ದಲ್ಲಿ ತಂಗಾಳಿಯ ಸೋಂಕಿನಿಂದ ಚಲಿಸುವ ಚಿಗುರಿಗಳಿಂದ ಚೆಂದವಾಗಿರುವ ಪಲ ಬಗೆಗಳಾದ ವೃಕ್ಷಲತೆಗಳಿ೦ದ ಮೊರೆದೇಳುವ ಮರಿದುಂಬಿಗಳೆ೦ಬ ಮುಂಗುರುಳು