ಪುಟ:ವತ್ಸರಾಜನ ಕಥೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥ, - HF ಗಳ೦ ವಹಿಸಿ, ಪೊಸಚಿಗುರುಗಳಂ ಸವಿಯಾಗಿ ಸವಿದು ಕೂಗುವ ಕೋಗಿಲೆಗಳ ಮದುರಧ್ವನಿಗಳೆಂಬ ಗಾನಶ್ವರವನಾಂತು, ಕೊಂಚವಾಗಿ ಚಲಿಸುವ ಗೊಂಚಲುಗ ಳೆಂಬ ಬಟ್ಟ ಮೊಲೆಗಳಿಂದ ರಮಣೀಯವಾಗಿ, ಶರೀರವಂ ತಾಳಿದ ವಸಂತಲಕ್ಷ್ಮಿಯ ಇದಿರೆದ್ದು ಬರುವಳಂತ ಈ ವನದ ಸೌಭಾಗ್ಯವ ಕಂಗಳಿಗೆ ಕೌತುಕವನ್ನು ೦ಟುಮಾ ಡುತ್ತಿರುವುದು ” ಎಂದು ಬಿನ್ನಿಸಲು ; ದೇವಿಯು-ಎಲೆ ಕಾಂಚನಮಾಲೆಯೇ; ಚೆನ್ನಾಗಿ ನುಡಿದಿರುವೆ. ಆದರೆ ಮನ್ಮಥನಂ ಪೂಜಿಸುವ ಸುವರ್ಣದ ಅಶೋಕವೃ ಕ್ಷವು ಇನ್ನೆಷ್ಟು ದೂರವಿರುವುದು ” ಎಂದು ನುಡಿಯಲು; ಅವಳು- ಇದೊ ಇತ್ತಲು, ಎಡೆಬಿಡದೆ ಮೊಳಕೆದೋರುವ ಪಲ್ಲವಗಳಿಂದ ಭರಿತವಾಗಿ, ದೇವಿಯರ ಪ್ರೇಮಪಾತವಾದ ಮಾಲತೀಲತೆಗೂ ಆಕಾಶದಲ್ಲಿ ಪುಷ್ಪಗಳು ಫುಟ್ಟಬೇಕೆಂದು ಪ್ರಯಾಸವಂ ಪೊಂದುತ್ತಲಿರುವ ರಾಯನ ಕಾರುಣ್ಯಕೆ ಪಾತ್ರವಾದ ವನಮಾ ಲಿಕಾಲತೆಗೂ ಮಧ್ಯಭಾಗದಲ್ಲಿರುವ ಮನ್ಮಥನ ಆಯುಧಶಾಲೆಯಂತೆ ವಿರಹಿಗಳಿಗೆ ದಾವಾಗ್ನಿಯಂತೆ ಚಿಗುರುಗಳಿಂದ ಮನೋಹರವಾದ ಪೊನ್ನ ಸಂಪಗೆಯ ಮರವು ಕಾಣುತ್ತಲಿರುವುದು ? ಎಂದು ಬಿನ್ಲೈಸಲು ; ದೇವಿಯು- ಎಲೆ ಬಾಲೆಯೇ? ನೀನು ಊಳಿಗದ ಹೆಣ್ಣುಗಳು ತಂದಿರುವ ಪೂಜಾದುವ್ಯಗಳಿ೦ ತುಂಬಿರುವ ತಟ್ಟೆಗಳಂ ತೆಗೆದು, ಆ ವೃಕ್ಷಮೂಲದಲ್ಲಿ ಸಾಲಾಗಿ ಇರಿಸುವಳಾಗು ” ಎಂದು ಅಪ್ಪಣೆಯನ್ನಿ ಯಲು; ಆ ದೇವಿಯ ಪಾರ್ಶ್ವಭಾಗದಲ್ಲಿ ಬರುತ್ತಿರುವ ನಾಗರಿಕೆಯು ಆ ವಾಕ್ಯವಂ ಕೇಳಿ, ( ಇದೋ, ಸಮಸ್ತ ಪೂಜಾದ್ರವ್ಯಗಳಿ೦ ತುಂಬಿದ ತಟ್ಟೆಯು ಸಿದ್ದವಾಗಿರು ವುದು ” ಎಂದು ತಾನು ತಂದ ತಟ್ಟಿ ಯಂ ದೇವಿಯ ಮುಂದಕೆ ತಂದು ಪಿಡಿಯಲು; ದೇವಿಯು ಸಲ್ವಾಲಂಕಾರಭೂಷಿತೆಯಾಗಿ ಬಂದ ನಾಗರಿಕೆಯಂ ನೋಡಿ, “ ಹೋ। ಹೋ ! ಮೋಸವಾದುದು, ಯಾವುದನ್ನು ನಮ್ಮ ರಾಯನ ಕಣ್ಣುಗಳಿ೦ ತಪ್ಪಿಸಿ ಸಲ ಹುತ್ತಿದ್ದೆನೋ ಅದನ್ನು ಈಗ ಅರಾಯನಿಗೆ ನಾನಾಗಿ ಕೈಗಾಣಿಕೆಯಾಗಿ ಒಪ್ಪಿಸುವಂ ತಾದುದು, ಈಗ ನಾನು ಮಾಡುವ ಮನ್ಮಥ ಪೂಜೆಗೆ ತಂದ ಮಂಗಳದ ವ್ಯವು ಇವಳಿ ಗೂ ರಾಯನಿಗೂ ಗಾಂಧತ್ವ ವಿವಾಹಕೊಸಗವಾಗಿಯೇ ತಂದಿರುವಂತಾಗುವುದು. ಆದರೆ ಒಂದು ಕಾರವಂ ಗೆಯ್ಯುವೆನು ?” ಎಂದು ತನ್ನ ಮನದಲ್ಲಿ ಯೋಚಿಸಿ, ಸಾಗರಿಕೆಯಂ ಕುರಿತು - ಎಲೆ ಬಾಲೆಯೇ, ಮನ್ಮಥಮಹೋತ್ಸವದಲ್ಲಿ ಸಮಸ್ಯ ಸಖಿಯರೂ ದೊಂಬಿಗೊಂಡಿರುವಲ್ಲಿ ಮೇಧಾವಿನಿಯೆಂಬ ಶಾರಿಕೆಯಂ ಬಿಟ್ಟು ನೀನು ಇಲ್ಲಿಗೆ ಬರಬಹುದೆ ಪೇಳು? ಎಲ್ಲಾ ಸಖಿಯರಲ್ಲ ಜಾಣೆಯೆಂತಲೂ, ಎನ ಚಿತ್ತಕೆ ಆಯಾಸವು ಪುಟ್ಟ ದಂತೆ ನಡೆಯುವಳೆಂತಲೂ ತಿಳಿದಿರುವ ಎನ್ನ ಅಭಿಪ್ರಾಯ ವನ್ನು ವ್ಯರ್ಥವಂ ಗೆಯ್ಯುವಳಂತೆ ತೋರುತ್ತಿರುವೆ? ಈಗ ನೀನು ಇಲ್ಲಿ ನಿಲ್ಲದೆ ಶಕುಂತಶಾಲೆಯಂ ಪೊಂದಿ ಶಾರಿಕೆಯಂ ಸಲಹುತ್ತಿರುವಳಾಗು ' ಎಂದು ಅಪ್ಪಣೆ ಯನ್ಶಿಯಲಾ ಸಾಗರಿಕೆಯು ಖಿನ್ನ ಹೃದಯಳಾಗಿ- ಪರಸೇವೆಯು ನರಕಕಿಂತಲೂ