ಪುಟ:ವತ್ಸರಾಜನ ಕಥೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಸ್ಮಯಾನುಕ್ರಮಣಿಕೆ ಪುಟ. ಪ್ರಥಮ ಗು೦. ೧-೭ ವತ್ವ ರಾಜನ ದೇಶವರ್ಣನ, ಕೌಶಾಂಬೀನಗರಿಗೆ ವಿಕ್ರಮಬಾಹುರಾಯನ ಪುರೋಹಿತನ ಪ್ರವೇಶ, ಅವನೊಡನೆ ಯೌಗಂಧರಾಯಣನೆಂಬ, ಮಂತ್ರಿಯ ಪತ್ರಿಕೆಯಂ ತೆಗೆದುಕೊಂಡು ಚಾರನ ಸಿಂಹಳದೇಶ ಪ್ರವೇಶ, ಪುರೋಹಿತನ ವಚನದಿಂದ ಸಭಾಮಧ್ಯಕ್ಕೆ ಚಾರನ ಕರೆಯೆಂದು ಮಂತ್ರಿಗೆ ವಿಕ್ರಮಬಾಹು ರಾಯನು ಆಜ್ಞೆಯನ್ನಿತ್ತ ವೃತ್ತಾಂತಕಧನ ಸಹ. ದ್ವಿತೀಯ ಗುಚ್ಚ ೦. V-೧೪ ವಿಕ್ರಮಬಾಹುರಾಯನು ಅಂತಃಪುರವಂ ಪೊಂದಿ ಪತ್ನಿ ಯಿಂದೊಡಗೂಡಿ, ತನ್ನ ಮಂತ್ರಿ ಪುರೋಹಿತರಂ ಕರೆಯಿಸಿ, ಕೌಶಾಂಬೀನಗರಿಯಿಂದ ಬಂದ ಯೌಗಂಧರಾಯಣನ ಪತ್ರಿಕೆಯ ಅಭಿಪ್ರಾಯವನ್ನು ಆಲೋಚಿಸಿ, ರತ್ನಾ ವಳಿ ಯನ್ನು ವತ್ಸ ರಾಜನಿಗೆ ಕೊಡುವಲ್ಲಿ ಪುತ್ರರಾದ ವಿಂದಾನುವಿಂದರ ಸಮ್ಮತಿ ಯಂ ಕೇಳಬೇಕೆಂದು ಇಚ್ಚಿಸುತ್ತಿರ್ದ ವೃತ್ತಾಂತ. ತೃತೀಯ ಗುಟ್ಟಂ' .. ೧೫-೩ ರತ್ನಾವಳಿಯು ಸರ್ವಾಲಂಕಾರಭೂಷಿತಳಾಗಿ ಹಡಗನ್ನೇರಿ ಪೋಗು ಮಧ್ಯಮಾರ್ಗದಲ್ಲಿ ಹಡಗು ಪರ್ವತಕ್ಕೆ ತಗಲಿ ಚೂರ್ಣವಾಗಲಾಗಿ, ದೈವ ಯೋಗದಿಂದ ದೊರಕಿದ ಹಲಗೆಯಲ್ಲಿ ರತ್ನಾ ವಳಿಯು ಕುಳಿತು ಸಮುದ್ರದಲ್ಲಿ ತೇಲುತ್ತ ಹಂಬಲಿಸುತ್ತಿರ್ದಳೆ೦ಬ ವೃತ್ತಾಂತ ಚತುರ್ಥ ಗುಟ್ಟಂ. - ೨೩-೩೧. ಧನಗುಪ್ತನೆಂಬ ವರ್ತಕನು ರತ್ನಾ ವಳಿಯನ್ನು ಸಮುದ್ರ ಮಧ್ಯದಿಂದ ಕರೆದು ಕೊಂಡು ಬಂದು, ತನ್ನ ಮನೆಯಲ್ಲಿ ಕೆಲವು ದಿವಸ ಸಂರಕ್ಷಿಸುತ್ತಿರ್ದು, ಆ ಬಳಿಕ ಮಂತ್ರಿಯಾದ ಯೌಗಂಧರಾಯಣನ ಬಳಿಗೆ ಕರೆದುಕೊಂಡು ಬರಲು, ಅವ ನು ರತ್ನಾ ವಳಿಯಂ ನೋಡಿ, ಆಶ್ಚರವಂ ಪೊಂದಿ, ಇವಳು ಸಿಂಹಳದೇಶದ ರಾಯನ ಮಗಳಾಗಿರಬೇಕೆಂದು ಯೋಚಿಸುತ್ತಿದ್ದನೆಂಬ ವೃತ್ತಾಂತ ಪಂಚಮ ಗುಡ್ಡ ೦. ೩೧-೩೯ ಇವಳನ್ನು ದೇವಿಯ ಸನ್ನಿಧಾನಕ್ಕೆ ಒಪ್ಪಿಸುವುದು ಯುಕ್ತವೆಂದು ನಿಶ್ಚಯಿಸಿ, ಯೌಗಂಧರಾಯಣನು ರತ್ನಾ ವಳಿಯನ್ನು ಗೋಪ್ಯವಾಗಿ ಅಂತಃಪುರಕ್ಕೆ ಕರೆ