ಪುಟ:ವತ್ಸರಾಜನ ಕಥೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವತ್ಸರಾಜನ ಕಥೆ, - ಒಂಬತ್ತನೆಯ ಗುಚ್ಛಂ. ಅನಂತರದಲ್ಲಿ ಸಾಗರಿಕೆಯು ತಾನು ಇರುವುದನ್ನು ಯಾವ ಸಖಿಯಾದರೂ ಕಂಡು ದೇವಿಗೆ ವಿಜ್ಞಾಪನೆಯಂ ಗೈದಲ್ಲಿ ಎನ್ನಲ್ಲಿರುವ ನಂಬುಗೆಯು ತಪ್ಪಿ ಎನಗೆ ಕಳುಹಿಸು ವಂಥ ಮತ್ಯಾದೆಗಳನ್ನು ಸಹ ನಿಲ್ಲಿಸುವಳೆಂದು ಕಳವಳವಂ ಹೊಂದುತ್ತ, ಎಡಬಲವಂ ನೋಡುತ್ತ, ಮನ್ಮಥನ ಪೂಜೆಯಂ ಗೆಯ್ಯುವೆನೆಂದು ಪುಷ್ಪಾಪಚಯವಂ ಗೆಯ್ಯು ತಿರಲು ; - ಇತ್ತಲು, ವಾಸವದತ್ತಾ ದೇವಿಯು ಸಾಗರಿಕೆಯು ಪೋದುದಂ ಕಂಡು( ಎಲೆ ಕಾಂಚನಮಾಲೆಯೇ, ಪುರೋಭಾಗದಲ್ಲಿ ಪರಿಶೋಭಿಸುತ್ತಿರುವ ಈ ರಕ್ಷಾ ಶೋಕವೃಕ್ಷದ ಬುಡದಲ್ಲಿ ಗಿಳಿಗೇರಿನಿಂದಲೂ ಕಬ್ಬು ಬಿಲ್ಲಿನಿಂದಲೂ ರತೀದೇವಿಯಿಂ ದಲೂ ಪುಷ್ಪಬಾಣ೦ಗಳಿ೦ದಲೂ ಯುಕ್ತನಾದ ಮನ್ಮಥನಂ ಬರೆಯುವಳಾಗು ” ಎಂದು ಆಜ್ಞೆಯನ್ನಿ ಯಲು; ಕಾಂಚನಮಾಲೆಯು ಸಚ್ಚಗಪ್ಪುರದ ದೂಳಿಯಂ ಹರಹಿ ಅದರಮೇಲೆ ದೇವಿಯು ಹೇಳಿದಂತೆ ಮನ್ಮಥನಂ ಬರೆಯುತ್ತಿರಲು ; ಇತ್ತಲು, ವಿದೂಷಕನು- ಎಲೈ ಮಹಾರಾಜೇಂದ್ರನೇ, ಮೊದಲು ನಾನು ದೇವಿಯ ಪರಿಜನದ ಕಾಲಂದುಗೆಯ ಧ್ವನಿಯ ಕೇಳಿ, ದೇವಿಯು ಬರುವಳೆಂದು ಹೇಳಿದಂತೆ ಸಕಲರಾದ ಸಖಿಯರುಗಳಿಂದೊಡಗೂಡಿ ದೇವಿಯು ರಕ್ತಾಶೋಕವೃಕ್ಷದ ಸವಿಾಪವಂ ಸೇರಿರುವಳು ' ಎಂದು ಬಿನ್ಲೈಸಲು; ರಾಯನು ಮುಂದಕ್ಕೆ ಪಾದಗ ಇನ್ನಿಟ್ಟು ನೋಡಿ- ಎಲೈ ಮಿತ್ರನೇ, ನೀನು ಹೇಳಿದುದು ಯುಕ್ತವೇ ಸರಿ. ಪುಷ್ಪಕ್ಕಿಂತಲೂ ಅತ್ಯಂತ ಕೋಮಲವಾದ ಶರೀರವಂ ತಾಳಿ ವತನಿಯಮದಿಂದ ಅತ್ಯಂತಕೃಶವಾಗಿ ತಾವರೆಯ ದಂಟಿನ ನೂಲಿಗೂ ಅತ್ಯಂತ ಸೂಕ್ಷ್ಮವಾದ ನಡು ವಿನಿಂದ ಒಪ್ಪುತ್ತಿರುವ ವಾಸವದತ್ತಾ ದೇವಿಯು, ನಾರಿಯಂ ಸಡಲಿಸಿ ನಿಲ್ಲಿಸಿದ ಮನ್ಮಥನ ಧನುಸ್ಸಿನಂತೆ ಹೊಳೆಯುತ್ತಿರುವಳು. ನಾವಿರ ರೂ ಅವಳ ಸವಿಾಪವಂ ಪೊಂದುವೆವು ' ಎಂದು ಬರುತ್ತ, ಎಣಿಸುವುದಕ್ಕೆ ಶಕ್ಯವಲ್ಲದೆ ಆ ಉಪವನವೆ ಲ್ಲವಂ ಸೀಮಯವೆನಿಸಿ ನಿಂದಿರುವ ಊಳಿಗದ ಹೆಣ್ಣು ಗಳ ಗುಂಪುಗಳ ನೋಡಿ, - ಎಲೈ ಮಿತ್ರನೇ, ಈ ಸಖಿಯರ ಸಂದಣಿಯಲ್ಲಿ ನಾನು ನೋಡಿದ ಮಂದಯಾನ ಯನ್ನು ಇವಳೇ ಸರಿ ಎಂದು ಹೇಗೆ ನಿಶೆಸಲಿ ? ?” ಎಂದು ನುಡಿಯಲು; ವಿದೂಷ ಕನು- ಎಲೈ ರಾಜೇ೦ದ ನೇ, ನಿನ್ನಲ್ಲಿ ಮನ್ಮಥಮಹಾರಾಜನ ಪ್ರತಿಯು ಹೇರಳವಾಗಿದೆಯಾದುದರಿಂದ ಅವನೇ ನಿನಗೆ ಗೊತ್ತು ಗೈದು ಕೊಡುವನು ” ಎಂದು ವಿನೋದವಾಕ್ಯವನ್ನಾಡಲು ; ರಾಯನು- ಎಲೈ ಮಿತ್ರನೇ, ಸತ್ಯ ವಾಕ್ಯನೆಂದು ನಿನ್ನ ತಿಳಿದಿರುವೆನು, ನೀನು ನುಡಿದಂತೆ ಆ ಪೂರ್ಣಚಂದ ಮುಖಿಯು ಒ೦ದು