ಪುಟ:ವತ್ಸರಾಜನ ಕಥೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ. - ಕರ್ನಾಟಕ ಕಾವ್ಯಕಲುನಿಧಿ, - ಬಾರಿ ಕಣ್ಣು ಗಳಿಗೆ ಗೋಚರಳಾದವಳಾದರೆ, ಎನ್ನ ಜನ್ಮವು ಸಾರ್ಥಕವಾಗುವುದು ?” ಎಂದು ನುಡಿಯುತ್ತ ಬರುತ್ತಿರಲು ; - ಇತ್ತಲಾ ದೇವಿಯು ಸ್ವಲ್ಪ ದೂರದಲ್ಲಿ ರಾಯನಂ ಕಂಡು ಸಂತೋಷವಂ ಪೊಂದಿ ಎಲೆ, ಕಾಂಚನಮಾಲೆಯೇ, ಬೇಗದಿಂ ಬಂದು ಈ ಊಳಿಗದ ಪೆಣ್ಣು ಗಳ ಹಿಂದಿರಿಸುವಳಾಗು, ರತ್ನ ಪೀಠವಂ ಅಶೋಕದ ವೃಕ್ಷದ ಒತ್ತಿನಲ್ಲಿ ಇರಿಸುವ ೪ಾಗು. ಮಹಾರಾಜೇ೦ದನು ಇಲ್ಲಿಗೆ ವಿಜಯಂಗೆಯ್ಯುತ್ತಿರುವನು. ” ಎಂದು ನುಡಿದು, ರಾಯನಿಗೆ ಇದಿರುಬ೦ದು, ( ಎಲೈ ಸ್ವಾಮಿಯೇ, ಜಯವುಳ್ಳವನಾಗು ೨೨ ಎಂದು ನುಡಿದು, ನಮಸ್ಕಾರವಂ ಗೈದು ನಿಂದಿರಲು ; ರಾಯನು-ಎಲೌ ದೇವಿ ಯೇ, ಬಲುಹೊತ್ತಾದುದು, ನೀನು ಪೋಗಿ ಶೀಘದಿಂ ಪುಷ್ಪಬಾಣನಂ ವೊಜಿ' ಸುವಳಾಗು ” ಎಂದು ಅಪ್ಪಣೆಯನ್ನಿ ಯಲು ; ದೇವಿಯು- ಎಲೈ ಸ್ವಾಮಿಯೇ ಆಜ್ಞೆಯಾದಂತೆ ನಡೆದುಕೊಳ್ಳುವೆನು, ಸ್ವಾಮಿಯವರು ಈ ರತ್ನ ಪೀಠದಲ್ಲಿ ಬಿಜಯಂ ಗೆಯ್ಯಬಹುದು ” ಎಂದು ವಿಜ್ಞಾಪಿಸಲು ; ರಾಯನು ಅದೇರೀತಿಯಿಂದ ರತ್ನ ಪೀಠ ದಲ್ಲಿ ಮಂಡಿಸಿ, ಒತ್ತಿನಲ್ಲಿ ವಿದೂಷಕನಂ ಕುಳ್ಳಿರಿಸಿಕೊಂಡು ಸಖಿಯರುಗಳ ಗುಂ ಪನ್ನು ಬಾರಿಬಾರಿಗೂ ನೇವರಿಸಿಕೊಂಡು ನೋಡುತ್ತಿರಲು ; ಕಾಂಚನಮಾಲೆಯು(( ಎಲ್‌ ದೇವಿಯೇ, ನಿನ್ನ ಹಸ್ತದಿಂ ಕೊಯ್ದು ಪುಷ್ಪಗಳಿಂದ ಮನ್ಮಥನಂ ಪೂಜಿಸು ವಳಾಗು ; ಪರಿಮಳಗಂಧವನ್ನು ಅನುಲೇಪನವಂ ಗೆಯ್ಯುವಳಾಗು. ೨” ಎನಲು ; ದೇವಿಯು ಆ ಅಸುಗೆಯ ಮರದ ಮೂಲಬಾಗದಲ್ಲಿ ತನ್ನ ಪೀಠದೊಳೇ ಕುಳಿತು, ( ಎಲೆ ಕಾಂಚನಮಾಲೆಯೇ, ಈಗ ಸಖಿಯರುಗಳು ತಂದಿರುವ ಪೂಜಾದವ್ಯಗಳಿ೦ ತುಂಬಿದ ತಟ್ಟೆ ಗಳಂ ಮುಂದಿರಿಸುವಳಾಗು ) ಎಂದು ಅಪ್ಪಣೆಯಂ ಕೊಡಲು ; ವಿದೂಷಕನು ಏಕಾಂತವಾಗಿ ರಾಯನೆ೦ ಕುರಿತು- ಅಯ್ಯಾ ಸ್ವಾಮಿಯೇ, ಈಗ ಸಮಸ್ಯರಾದ ಊಳಿಗದ ಹೆಣ್ಣು ಗಳೂ ತಾವು ತಂದಿರುವ ತಟ್ಟೆಗಳನ್ನು ಈ ಅಶೋಕ ವೃಕ್ಷದ ಸಮೀಪದಲ್ಲಿ ಇರಿಸುವುದಕ್ಕೋಸುಗ ಬರುತ್ತಿರುವರಾದುದರಿಂದ ನಿನ್ನ ಕಾಠ್ಯಕೆ ಅನುಕೂಲವಾದುದು, ಇದೇ ಸಮಯದಲ್ಲಿ ಇಂಥವಳೆಂದು ಗೊತ್ತುಗೆ ಬ್ಲಲ್ಲಿ ಅವಳು ಪಾತಾಳಲೋಕಕ್ಕೆ ಪೋದರೂ ಬಿಡದೆ ತಂದು ನಿನ್ನೊಡನೆ ಹೊಂದಿ ಸುವದರಲ್ಲಿ ಸಂದೇಹವಿಲ್ಲವು ?” ಎಂದು ಬಿನ್ನಿಸುತ್ತಿರಲು ; ಕಾಂಚನಮಾಲೆಯು ಎಲ್ಲಾ ಬಾಲೆಯರಂ ನೋಡಿ-“ ಎಲೆ ಸಖಿಯರುಗಳಿರಾ ! ನೀವು ತಂದಿರುವ ಮಂಗಳ ದ್ರವ್ಯಗಳ ತಟ್ಟೆ ಗಳನ್ನು ತಂದು ದೇವಿಯ ಮುಂದುಗಡೆಯಲ್ಲಿ ಮಡಗುವುದು ಎಂದು ಕೂಗಿ ನುಡಿಯಲು ; ಆ ಬಾಲೆಯರುಗಳು ಸಾಲುಸಾಲಾಗಿ ಬಂದು ತಟ್ಟೆಗಳನ್ನಿರಿಸಿ ಪೋಗುತ್ತಿರಲು ; ರಾಯನು ಅವರೆಲ್ಲರಂ ನೋಡಿ ನಿಟ್ಟುಸಿರು ಬಿಟ್ಟು - ಎಲ್ಲೆ ವಿದೂಷಕನೇ, ಎನ್ನ ನೇತ್ರಕ್ಕೆ ಸೌಭಾಗ್ಯರೂಪಳಾದ ಆ ಸ್ತ್ರೀಯು ಇಲ್ಲಿಗೆ ಬರ ದಂತೆ ತೋರುವುದಿಲ್ಲ. ಹಿಂದುಗಡೆಯಲ್ಲಿರುವ ಸಖಿಯರ ಗುಂಪಿನಲ್ಲಿ ಯಾವ ಸ್ಥಳ