ಪುಟ:ವತ್ಸರಾಜನ ಕಥೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - 4 ದಲ್ಲಿ ಅಡಗಿಕೊಂಡಿರುವಳೊ ಕಾಣೆನು ಎಂದು ನುಡಿಯಲು ; ವಿದೂಷಕನು(1 ಎಲೈ ರಾಜೇಂದ್ರನೇ, ಚೆನ್ನಾಗಿ ಮುಖವನ್ನು ನೋಡದೆ ಯಾವಳೊಬ್ಬಳ ಹಿಂಬಾ ಗವನ್ನು ಕಂಡು ಇಂತು ಚಿ೦ತೆಯಂ ಪೊಂದುವುದು ಯುಕ್ತವಲ್ಲ ” ಎಂದು ನುಡಿ ಯಲು ; ದೇವಿಯು ಕಾಂಚನಮಾಲೆಯು ತೆಗೆದು ಒಪ್ಪಿಸುವ ಪೂಜಾವಸ್ತುಗಳಂ ತೆಗೆದುಕೊಂಡು ಮನ್ಮಥನಂ ಷೋಡಶೋಪಚಾರಂಗಳಿಂದ ಪೂಜಿಸುತ್ತಿರಲು ; ರಾಯನು ಕುಸುಂಬೆಯ ಹೂವಿನ ಬಂಣದಿಂದ ರಂಗುಗೊಂಡಿರುವ ಚಂದಗಾವಿಯ ಸೀರೆಯನ್ನುಟ್ಟು ನೂತನವಾಗಿ ಮಜ್ರ ನವಂ ಗೈದಿರುವುದರಿಂದ ಪರಿಶುದ್ಧವಾಗಿ ಕಾಣುತ್ತಿರುವ ಅಂಗಗಳಿಂದೊಡಗೂಡಿರುತ್ತ ಮನ್ಮಥನಂ ಪೂಜಿಸುತ್ತಿರುವ ಈ ವಾಸವದತ್ತೆಯು ಚಿಗುರುಗಳಿಂದ ವ್ಯಾಪ್ತ ಮಾದ ಎಳೆಲತೆಯಂತೆ ಪೊಳೆಯು ತಿರುವಳೆಂದು ತನ್ನ ಮನದಲ್ಲಿ ತಿಳಿಯುತ್ತಿರಲು ; ಕಾಂಚನಮಾಲೆಯು--( ಎಳ್ ದೇವಿಯೇ, ಹಸ್ತದಲ್ಲಿ ಕೊಡಲ್ಪಟ್ಟ ಈ ಕುಂಕುಮದ ಗಂಧದ ಹೂವಿನಿಂದ ಅಶೋ ಕವೃಕ್ಷದ ಮೂಲಿಭಾಗವನ್ನು ರಂಗುಗೊಳಿಸುವಳಾಗು ೨” ಎಂದು ನುಡಿಯಲು ; ದೇವಿಯು ಅದೇರೀತಿಯಿಂದ ಕುಂಕುಮದ ಹೂವಿನ ಗಂಧವನ್ನು ಆ ವೃಕ್ಷದ ಬುಡಕ್ಕೆ ಲೇಪಿಸುತ್ತಿರಲು ; ರಾಯನು ಅದನ್ನು ಕಂಡು ಎಲೆ ಪ್ರಾಣಪ್ರಿಯಳಾದಂಥ ವಾಸವದತ್ತೆಯೇ, ಮನ್ಮಥನ ಪೂಜೆಯಲ್ಲಿ ಆಸಕ್ತವಾದ ನಿನ್ನ ಹಸ್ತದಿಂದ ಮುಟ್ಟ ಲ್ಪಟ್ಟ ಈ ಅಶೋಕವೃಕ್ಷವು ಈಗ ತಾನು ಮೊಳೆರೋರುವ ಮತ್ತೊಂದು ಎಳೆಯ ಚಿಗುರನ್ನು ಧರಿಸಿದಂತೆ ತೋರುತ್ತಿರುವುದು, ಮತ್ತು ಈ ಅನಂಗನಾದ ಮನ್ಮಥನು ತನಗೆ ಪ್ರಾಪ್ತವಾದ ಅನ೦ಗತ್ವವನ್ನು ತನಗೆ ತಾನೇ ನಿಂದಿಸುತ್ತಿರುವನು. ಏಕಂ ದರೆ.-ಯಾವ ನಿನ್ನ ಹಸ್ಯದ ಸಂಸ್ಪರ್ಶವ ಆ ಮನ್ಮಥನ ಅಂಗಕೆ ದೊರೆಯಲಿಲ್ಲವೋ, ಆದುದರಿಂದಲೇ?” ಎಂದು ತನ್ನ ಮನದಲ್ಲಿ ಯೋಚಿಸುತ್ತಿರಲು ; ಕಾಂಚನಮಾಲೆ ಯು- ಎಲ್‌, ಪೂಜ್ಯಳಾದ ದೇವಿಯೇ, ಮನ್ಮಥನ ಪೂಜೆಯಾದ ಬಳಿಕ ಮನ್ಮಥ ನಿಗೂ ಮನ್ಮಥನಾದ ನಮ್ಮ ರಾಜೇ೦ದನಂ ವೂಜಿಸುವಳಾಗು ” ಎಂದು ನುಡಿ ಯಲು ; ದೇವಿಯು--( ಎಲ್ ಸಖಿಯೇ, ಸಮಸ್ತ ಪೂಜೋಪಕರಣದ್ರವ್ಯಗ. ಳನ್ನೂ ತಂದು ಒದಗಿಸುವಳಾಗು ” ಎಂದು ನುಡಿದು, ರಾಯನಿದ್ದೆಡೆಗೆಝಂದು ಷೋ ಡಶೋಪಚಾರಗಳಿಂದ ರಾಯನ ಪಾದಪೂಜೆಯಂ ಮಾಡುತ್ತಿರಲು ; ಇತ್ತಲು, ಕೆಲಬರು ಸಖಿಯರುಗಳು ದೇವಿಯ ಕಣ್ಣು ಗಳ೦ ತಪ್ಪಿಸಿ ರಾಯನು ಕಾಣುವಂತೆ ಚಿನ್ನದ ತೀರ್ಕೊಳವೆಗಳಲ್ಲಿ ಸನ್ನು ತವಾದ ಪನ್ನಿರಂ ತುಂಬಿ ವಾರಿಗೆಯ ನಾರಿಯರ ತೋರುಮೊಲೆಗಳಂ ಗುರಿಗೆಯು ಚಿಮ್ಮುತ್ತ ಸುಮ್ಮಾನದಿಂ ಕಿಡಿ ಸುತ್ತಿರುವರು ; ಮತ್ತೆ ಕೆಲಂಬರು ಚಿತ್ತಜನಿಂ ಮತ್ತವಾಗಿ ಮುಖಕಮಲಕ್ಕೆ ಮೊರೆದೆರಗುವ ಮರಿದುಂಬಿಗಳ ಗಾಳಿಗೆ ಕಣ್ಣುಗಳು ಮುಚ್ಚಿ ತೋರಮೊಲೆಗಳಂ ಪೊರಲಾರದೆ ಗಡಗಡನೆ ನಡುಗುತ್ಯಕರಯುಗ್ನಗಳಂ ಕೊಡಹು, ನಿಂತಲ್ಲಿ ನಿಲ್ಲದೆ