ಪುಟ:ವತ್ಸರಾಜನ ಕಥೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 - ಕರ್ಣಾಟಕ ಕಾವ್ಯಕಲಾನಿಧಿ, - ತಲ್ಲಣವಂ ಗೆಯ್ಯುತ್ತ ನಿಂತಿರುವರು ; ಇನ್ನು ಕೆಲಬರಾದ ಚಂಚಲಾಕ್ಷಿಯರು ದೇವಿ ಯು ಭೂಮಿಶ್ವರನಾದ ನಮ್ಮ ಸ್ವಾಮಿಯನ್ನು ನೇಮದಿಂ ಪೂಜಿಸುವ ವೇಳೆಯಲ್ಲಿ ತಾಳಮೇಳ ಮೊದಲಾದುವಂ ಮೇಲೈಸಿ ಕೇಳುವವರ ಕಿವಿ ಹಿತವಾಗುವಂತೆ ಗಾನ ವಂ ಗೆಯ್ಯು ನಯವಾಗಿ ನಾಟ್ಯವಂ ವಿರಚಿಸಬೇಕೆಂದು ತೊರೆಯಿಂದೊಡಗೂಡಿ ವೀಣಾವೇಣು ಮುಖವೀಣೆ ಮೊದಲಾದ ವಾದ್ಯಗಳಂ ಸ್ವರಂಗೆಯ್ದು, ನಾಟ್ಯವಂ ಮಾಡಲುಜ್ಜುಗಿಸುತ್ತಿರಲು ; ಈ ಕೋಲಾಹಲಧ್ವನಿಯನ್ನೂ ಸಖಿಯರುಗಳ ಸಂಭ್ರಮದ ಗಾನಸ್ವರವನ್ನೂ ಸಹ ಕೇಳಿದ ಸಾಗರಿಕೆಯು- ಪುಷ್ಪಾಪಚಯದಲ್ಲಿ ತಗಲಿದ ಚಿತ್ತವೃತ್ತಿಯುಳ್ಳ ನಾನು ಮನ್ಮಥಮಹೋತ್ಸವವಂ ನೋಡುವುದ ಮರೆತೆನು, ಅದರೂ ಸಿಂದೂರದ ವೃಕ್ಷದ ಮರೆಯ೦ ಸೇರಿ ನೋಡುವೆನು” ಎಂದು ಬಂದು ಅದೇರೀತಿಯಲ್ಲಿ ಮುಂದುಗಡೆಯಂ ನೋಡೆ, ದೇವಿಯಿಂ ಪೂಜಿಸಲ್ಪಟ್ಟ ಸುಂದರಾಂಗನಾದ ರಾಯನಂ ಕಂಡು ಅವನಂ ಪ )ತ್ಯಕ್ಷನಾದ ಮನ್ಮಥನೆಂದು ತಿಳಿದು, ನಮ್ಮ ಅರಮನೆಯಲ್ಲಿ ಚಿತ್ರದಲ್ಲಿ ಬರೆದ ಮನ್ಮಧನಂ ಪೂಜಿಸುತ್ತಲಿದ್ದೆನು, ಇಲ್ಲಿ ಎನ್ನ ಪುಣ್ಯದಿಂದ ಪ್ರತ್ಯಕ್ಷನಾದ ಮನ್ಮಥನ ಸಂದರ್ಶನವು ಎನಗೆ ಪ್ರಾಪ್ತವಾದುದು. ಲೋಕದಲ್ಲಿ ಮನ್ಮಥನು ಅನಂ ಗನೆಂಬುವ ವಿದ್ವಾಂಸರ ವಾಕ್ಕುಗಳೆಲ್ಲವೂ ಅಪಕ್ಷಗಳಾದುವು. ನಾನೂ ಇವನಂ ಪೂಜಿಸುವೆನು ?” ಎಂದು ತಾನು ಕೊಯ್ದಿದ್ದ ಪುಷ್ಪಗಳಂ ಹಸ್ಯಗಳಲ್ಲಿ ತುಂಬಿ, “ಎಲೈ ಮಂಗಳಾಂಗನಾದ ಮನ್ಮಧನೇ, ಎನ್ನ ಮನೋರಥವಂಪೂರೈಸುವನಾಗು. ಎಲೈ ಕಮಲಬಾಣನೇ, ಎನ್ನ ಕಾಮಿತವಂ ಕೈಗೂಡಿಸುವನಾಗು, ಯಾವ ನಿನ್ನ ಪುಷ್ಪಬಾ ಣಗಳು ಸಮಾಧಿಸ್ಸರಾಗಿರುವ ವ್ಯಾಸವಿಶ್ವಾಮಿತ ಪರಾಶರ ಮೊದಲಾದ ಋಷಿ ಗಳನ್ನು ವರ್ಣಾಶ್ರಮಧರ್ಮಗಳಿ೦ ಕೆಡಿಸಿ ಕಾಂತೆಯರಿಗೆ ಕಾಯವಂ ತೊಡಿಸಿ ಲೋ। ಕಾಸವಾದಕ್ಕೆ ಗುರಿಯಾಗಿ ಮಾಡಿರುವುವೋ ; ಮತ್ತು ರಾವಣtಚಕ ಮೊದ ಲಾದುವರನ್ನು ಕಂದಿಕುಂದಿಸಿ ಹಿಂದುಮುಂದನ್ನು ತಿಳಿಯಲೀಯದೆ ಮಂದರಂಗೆಯ್ದು ಯಮನ ಪಟ್ಟಣದಲ್ಲಿ ಸಂಸಾರಿಗಳನ್ನಾಗಿ ಮಾಡಿರುವುವೋಅಂಥ ನಿನಗೋಸ್ಕರ ವಾಗಿ ನಮಸ್ಕಾರವಂ ಗೆಯುವೆನು ?” ಎಂದು ಕರದಲ್ಲಿದ್ದ ಪುಷ್ಪಗಳಂ ಪುರೋಭಾ ಗಕ್ಕೆ ಚೆಲ್ಲಿ ನಮಸ್ಕಾರವಂ ಗೆಯ್ದು,- ಎಲೈ, ಸತ್ವವ್ಯಾಪಿಯಾದ ಮನ್ಮಥನೇ, ಈಗ ಎನ್ನ ಮನದಲ್ಲಿ ಹುಟ್ಟಿರುವ ಅಭಿಲಾಷೆಯಂ ಸಂಪೂರ್ಣವಂ ಗೆಯ್ದರೆ ವಸಂತ ಕಾಲಗಳಲ್ಲಿ ವ್ಯತವಂ ಧರಿಸಿ ನಿನ್ನ ಚರಣಗಳಂ ಸಹಸ್ರ ನಾಮಗಳಿಂದ ಪೂಜಿಸಿ ನಿರಾಹಾರಳಾಗಿ ಇರುವೆನು ?” ಎಂದು ಪ್ರಾರ್ಥಿಸುತ್ತ, ಮಂಗಳಾಂಗವಾದ ರಾಯ ನನ್ನು ರಪ್ಪೆಯನ್ನಿ ಕ್ಕದೆ ನೋಡುತ್ತ ನಿಂದಿರಲು ; ` ಕಾಂಚನಮಾಲೆಯು ಅಯ್ಯಾ, ವಿದೂಷಕನೇ, ಈಗ ಮನ್ಮಥನ ಪೂಜೆ ಯು ಸಂಪೂರ್ಣವಾಗಿ ಆದುದು, ದಕ್ಷಿಣೆಸಹಿತವಾದ ಬಾಗಿನವಂ ತೆಗೆದುಕೊಳ್ಳು